ವೇತನದಿಂದ ಕಡಿತಗೊಳಿಸುವ ಹಣ ಪಿಎಫ್ ಖಾತೆಗೆ ಜಮೆ ಆಗುತ್ತಿದೆಯೇ? ಹೀಗೆ ಚೆಕ್ ಮಾಡಿಕೊಳ್ಳಿ

EPFO Update: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿಯುವುದು ಹೇಗೆ? ಇಪಿಎಫ್ ಚಂದಾದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬಹುದು?  ಎನ್ನುವ ಮಾಹಿತಿ ಇಲ್ಲಿದೆ.

Written by - Ranjitha R K | Last Updated : Feb 23, 2024, 01:24 PM IST
  • ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಕಂಪನಿಯೂ ಅಷ್ಟೇ ಪ್ರಮಾಣದ ಮೊತ್ತವನ್ನು ಠೇವಣಿ ಮಾಡುತ್ತದೆ.
  • ಪ್ರಸ್ತುತ ಇಪಿಎಫ್ ಬ್ಯಾಲೆನ್ಸ್ ಮೇಲೆ ಶೇಕಡಾ 8.25 ಬಡ್ಡಿಯನ್ನು ಪಾವತಿಸಲಾಗುತ್ತದೆ.
ವೇತನದಿಂದ ಕಡಿತಗೊಳಿಸುವ ಹಣ ಪಿಎಫ್ ಖಾತೆಗೆ ಜಮೆ ಆಗುತ್ತಿದೆಯೇ?  ಹೀಗೆ ಚೆಕ್ ಮಾಡಿಕೊಳ್ಳಿ  title=

EPFO Update : ಕಚೇರಿ ಉದ್ಯೋಗದಲ್ಲಿರುವವರ ವೇತನದಿಂದ ಪ್ರತಿ ತಿಂಗಳು  ನಿರ್ದಿಷ್ಟ ಮೊತ್ತವನ್ನು ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಅವರ ಕಂಪನಿಯೂ ಅಷ್ಟೇ ಪ್ರಮಾಣದ ಮೊತ್ತವನ್ನು ಠೇವಣಿ ಮಾಡುತ್ತದೆ. ಇಪಿಎಫ್ ಖಾತೆಯಲ್ಲಿ ಠೇವಣಿ ಇಡುವ ಮೊತ್ತಕ್ಕೆ ಸರ್ಕಾರ ಉತ್ತಮ ಬಡ್ಡಿಯನ್ನೂ ನೀಡುತ್ತದೆ. ಪ್ರಸ್ತುತ ಇಪಿಎಫ್ ಬ್ಯಾಲೆನ್ಸ್ ಮೇಲೆ ಶೇಕಡಾ 8.25 ಬಡ್ಡಿಯನ್ನು ಪಾವತಿಸಲಾಗುತ್ತದೆ.ಇತ್ತೀಚೆಗೆ ಸರ್ಕಾರವು ಪಿಎಫ್ ಖಾತೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. 

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) EPF ಖಾತೆಗಳನ್ನು ನಿರ್ವಹಿಸುತ್ತದೆ :
ಇಪಿಎಫ್ ಮೊತ್ತವು ನಿವೃತ್ತಿ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಬಳಸಲು ಉತ್ತಮ ಸಹಾಯವಾಗಿದೆ. ಉದ್ಯೋಗಿಗಳು ಇಪಿಎಫ್ ಖಾತೆಯ ಮೂಲಕ ಭವಿಷ್ಯಕ್ಕಾಗಿ ಉತ್ತಮ ಮೊತ್ತವನ್ನು ಸೇರಿಸಬಹುದು. ನೀವು ಸಹ ಇಪಿಎಫ್ ಸದಸ್ಯರಾಗಿದ್ದರೆ ಮತ್ತು ನಿಮ್ಮ ಇಪಿಎಫ್ ಖಾತೆಯಲ್ಲಿ ಹಲವು ವರ್ಷಗಳಿಂದ ಹಣವನ್ನು ಠೇವಣಿಯಾಗುತ್ತಿದ್ದರೆ, ಈ ಹೊತ್ತಿಗೆ ಗಣನೀಯ ಮೊತ್ತವನ್ನು ಸಂಗ್ರಹಿಸಿರುತ್ತೀರಿ. ಹಾಗಿದ್ದರೆ ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿಯುವುದು ಹೇಗೆ? ಇಪಿಎಫ್ ಚಂದಾದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬಹುದು?  ಎನ್ನುವ ಮಾಹಿತಿ ಇಲ್ಲಿದೆ.

ಇದನ್ನೂಓದಿ : Gold Rate: ಭಾರತದಲ್ಲಿ ಚಿನ್ನದ ಬೆಲೆ ಕುಸಿತ: ನಿಮ್ಮ ನಗರದ ದರವನ್ನು ಪರಿಶೀಲಿಸಿ!

ಇಪಿಎಫ್ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಮೂಲಕ ಪರಿಶೀಲಿಸಬಹುದು :
- ಇಪಿಎಫ್ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಮೂಲಕ ಪರಿಶೀಲಿಸಬಹುದು. 
- ಇದಕ್ಕಾಗಿ ಉದ್ಯೋಗಿ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಗೆ 'EPFO UAN' ಎಂದು ಟೈಪ್ ಮಾಡುವ ಮೂಲಕ SMS ಕಳುಹಿಸಬೇಕಾಗುತ್ತದೆ. 
- ನಿಮ್ಮ ಆದ್ಯತೆಯ ಭಾಷೆಯಲ್ಲಿ ಇಪಿಎಫ್ ಬ್ಯಾಲೆನ್ಸ್ ತಿಳಿಯಲು, ಸಂದೇಶದಲ್ಲಿ ಆ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಟೈಪ್ ಮಾಡಿ.
- ಉದಾಹರಣೆಗೆ, ಕನ್ನಡದಲ್ಲಿ ಸಂದೇಶವನ್ನು ಸ್ವೀಕರಿಸಲು, 'EPFOHO UAN KAN' ಎಂದು ಟೈಪ್ ಮಾಡಿ ಮತ್ತು ಅದನ್ನು ಕಳುಹಿಸಿ.
- ಇಪಿಎಫ್‌ಒ ಈ ಸೌಲಭ್ಯವನ್ನು ಇಂಗ್ಲಿಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಒದಗಿಸುತ್ತದೆ.
- ಇದರ ನಂತರ, ಮೊಬೈಲ್‌ನಲ್ಲಿ  ಬ್ಯಾಲೆನ್ಸ್ ಕುರಿತು ಸಂದೇಶ ಬರುತ್ತದೆ.

ಮಿಸ್ಡ್ ಕಾಲ್ ಮೂಲಕವೂ ಈ ಮಾಹಿತಿ ಪಡೆಯಬಹುದು : 
- EPFO ​​ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೌಕರರು ತಮ್ಮ EPF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
- ಇದನ್ನು ಮಾಡಲು, UAN ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಿ. 
- ಈ ಸೌಲಭ್ಯವನ್ನು ಪಡೆಯಲು, ಸದಸ್ಯರ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಮತ್ತು ಪ್ಯಾನ್ ಅನ್ನು ಅವರ UAN ನೊಂದಿಗೆ ಲಿಂಕ್ ಮಾಡಬೇಕು.

ಇದನ್ನೂಓದಿ : ಹಿರಿಯ ನಾಗರಿಕರಿಗೆ ಸುರಕ್ಷಿತ ಉಳಿತಾಯ ಯೋಜನೆ ಇದು ! ಈ ಸ್ಕೀಮ್ ನ ರಿಟರ್ನ್ ಕೂಡಾ ಅಧಿಕ

ಉಮಾಂಗ್ ಅಪ್ಲಿಕೇಶನ್ ಮೂಲಕ BF ಸ್ಥಿತಿಯನ್ನು ಪರಿಶೀಲಿಸಬಹುದು :
- PF ಸದಸ್ಯರು UMANG ಅಪ್ಲಿಕೇಶನ್ ಮೂಲಕ EPF ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು. 
- ಮೊದಲು ನಿಮ್ಮ ಫೋನ್‌ನಲ್ಲಿ ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
- ನಂತರ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಿ. 
- ಸರ್ಚ್ ಲಿಸ್ಟ್ ನಲ್ಲಿ EPFO ​​ಎಂದು ಟೈಪ್ ಮಾಡಿ  .
- ಅದರ ನಂತರ EPFO ​​ಪುಟ ತೆರೆಯುತ್ತದೆ.
- ಇಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನೀವು ‘Employee Centric Services'ವಿಭಾಗ ಕಾಣಿಸುತ್ತದೆ. 
- ಇದರಲ್ಲಿ ಮೊದಲು 'View Passbook' ಮೇಲೆ ಕ್ಲಿಕ್ ಮಾಡಿ.
- ಅದರ ನಂತರ ಹೊಸ ಪುಟ ತೆರೆಯುತ್ತದೆ. ಅದರಲ್ಲಿ 'ವಿಸಿಟ್ ಸರ್ವೀಸ್' ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ನಿಮ್ಮ UAN ಅನ್ನು ನಮೂದಿಸಿ,'GET OTP' ಅನ್ನು ಕ್ಲಿಕ್ ಮಾಡಬೇಕು.
- ಅದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ನಮೂದಿಸಬೇಕು. 
- ಈಗ ನಿಮ್ಮ EPFO ​​ಪಾಸ್‌ಬುಕ್ ಕಾಣಿಸುತ್ತದೆ. ಇಲ್ಲಿ, ನಿಮ್ಮ ಖಾತೆಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎನ್ನುವುದು ತಿಳಿಯುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News