Sukanya Samrudhi Scheme : ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ಪಡೆಯಬೇಕಾದರೆ ಏನು ಮಾಡಬೇಕು ?

Sukanya Samrudhi Scheme :ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಇತರ ವೆಚ್ಚಗಳಿಗಾಗಿ  ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅವಕಾಶವನ್ನು ಈ ಮೂಲಕ ಸರ್ಕಾರ ಒದಗಿಸುತ್ತದೆ. ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೋದಿ ಸರ್ಕಾರವು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. 

Written by - Ranjitha R K | Last Updated : Mar 7, 2024, 03:56 PM IST
  • ಮಹಿಳೆಯರಿಗಾಗಿ ಕಾಲಕಾಲಕ್ಕೆ ಹಲವಾರು ಯೋಜನೆ
  • ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ನಡೆಸುತ್ತಿರುವ ಯೋಜನೆ
  • ಮೋದಿ ಸರ್ಕಾರವು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು
Sukanya Samrudhi Scheme  : ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ಪಡೆಯಬೇಕಾದರೆ ಏನು ಮಾಡಬೇಕು ? title=

Sukanya Samrudhi Scheme : ದೇಶದ ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸುಕನ್ಯಾ ಸಮೃದ್ಧಿ ಯೋಜನೆ (SSY) ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ನಡೆಸುತ್ತಿರುವ ಯೋಜನೆಯಾಗಿದೆ. ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೋದಿ ಸರ್ಕಾರವು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. 

ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಇತರ ವೆಚ್ಚಗಳಿಗಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅವಕಾಶವನ್ನು ಈ ಮೂಲಕ ಸರ್ಕಾರ ಒದಗಿಸುತ್ತದೆ. ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ, 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃತಿ ಯೋಜನೆ ಖಾತೆಯನ್ನು ಅಂಚೆ ಕಚೇರಿ ಮತ್ತು ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ತೆರೆಯಬಹುದು.

ಇದನ್ನೂ ಓದಿ : Salary Hike: ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಈ ಗುಡ್ ನ್ಯೂಸ್?

ಈ ಯೋಜನೆಯ ಲಾಭ ಪಡೆಯಬೇಕಾದರೆ ಯಾರ ಹೆಸರಿನಲ್ಲಿ ಹೂಡಿಕೆ ಮಾಡಲಾಗುತ್ತದೆಯೋ ಆ ಹೆಣ್ಣು ಮಗುವಿನ ಜನನ ಪ್ರಮಾಣಪತ್ರವನ್ನು ಬ್ಯಾಂಕ್‌ಗೆ ಸಲ್ಲಿಸಬೇಕು . ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.50 ಲಕ್ಷ ರೂಪಾಯಿಗಳವರೆಗೆ ಪಾವತಿಸಬಹುದು. ಈ ಯೋಜನೆಯು ಪ್ರಸ್ತುತ 8.2% ಬಡ್ಡಿಯನ್ನು ನೀಡುತ್ತಿದೆ. ಬಡ್ಡಿದರಗಳನ್ನು ಸರ್ಕಾರವು ಕಾಲಕಾಲಕ್ಕೆ ಬದಲಾಯಿಸುತ್ತದೆ. 

ಹೆಣ್ಣು ಮಗುವಿಗೆ 15 ವರ್ಷ ವಯಸ್ಸಾಗುವವರೆಗೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ನಂತರ, 18 ವರ್ಷವನ್ನು ತಲುಪಿದ ನಂತರ 50 ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಖಾತೆ ತೆರೆದ ನಂತರ 21 ವರ್ಷಗಳವರೆಗೆ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಈ ಯೋಜನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯುವ ಅವಕಾಶವಿದೆ.  

2000 ಠೇವಣಿ ಮಾಡಿದರೆ ಎಷ್ಟು ಸಿಗುತ್ತದೆ? :
ನೀವು ಪ್ರತಿ ತಿಂಗಳು ಸುಕನ್ಯಾ ಸಮೃತಿ ಯೋಜನೆಯಲ್ಲಿ 2,000 ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ ನಂತರ ನಮಗೆ ಬಡ್ಡಿಯೊಂದಿಗೆ ಎಷ್ಟು ಸಿಗುತ್ತದೆ ನೋಡೋಣ. 

ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳ: ಬೆಳ್ಳಿಯ ದರ ಕುಸಿತ!

ತಿಂಗಳಿಗೆ ಎರಡು ಸಾವಿರ ರೂಪಾಯಿ ಠೇವಣಿ ಇಟ್ಟರೆ ವಾರ್ಷಿಕ ಹೂಡಿಕೆ 24 ಸಾವಿರ ಆಗುತ್ತದೆ. ಅಂದರೆ 15 ವರ್ಷಗಳಲ್ಲಿ ಈ ಹೂಡಿಕೆ 3 ಲಕ್ಷ 60 ಸಾವಿರ ರೂ. 21 ವರ್ಷಗಳ ಮುಕ್ತಾಯದ ನಂತರ, ಈ ಯೋಜನೆಯಡಿಯಲ್ಲಿ ಮಗಳ ಖಾತೆಗೆ 11,09,224 ರೂಪಾಯಿಯನ್ನು ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ,  ಬಡ್ಡಿದರಗಳಲ್ಲಿನ ಬದಲಾವಣೆಗಳಿಂದ ಮೊತ್ತವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಈ ಲೆಕ್ಕಾಚಾರವನ್ನು ಪ್ರಸ್ತುತ ಬಡ್ಡಿದರಗಳ ಆಧಾರದ ಮೇಲೆ ನೀಡಲಾಗಿದೆ. 

5 ಸಾವಿರ ಹೂಡಿಕೆ ಮಾಡಿದರೆ ಎಷ್ಟು ಹಣ ಪಡೆಯಬಹುದು ? :
ಪ್ರತಿ ತಿಂಗಳು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ನಿಮ್ಮ ಮೊತ್ತ 9 ಲಕ್ಷ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 21 ವರ್ಷಗಳ ಮುಕ್ತಾಯದ ನಂತರ 27,73,059 ಹಣವನ್ನು  ಪಾವತಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News