ಒಬ್ಬ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು? ತಿಳಿದುಕೊಳ್ಳಿ ಸರ್ಕಾರದ ನಿಯಮ

Bank Account Open Rules : ನಮ್ಮಲ್ಲಿ ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ.  ಹಾಗಿದ್ದರೆ ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಖಾತೆಗಳನ್ನು  ಹೊಂದಿರಬಹುದು? ಏನು ಹೇಳುತ್ತದೆ ನಿಯಮ ಎನ್ನುವುದನ್ನು ತಿಳಿದುಕೊಳ್ಳೋಣ.

Written by - Ranjitha R K | Last Updated : May 8, 2023, 02:12 PM IST
  • ಹಣಕಾಸಿನ ವಹಿವಾಟು ನಡೆಸಲು ಬ್ಯಾಂಕ್ ಖಾತೆ ಮುಖ್ಯ.
  • ಬ್ಯಾಂಕ್ ಖಾತೆಯು ಹಣಕಾಸಿನ ವಹಿವಾಟುಗಳನ್ನು ಸುಲಭಗೊಳಿಸುತ್ತದೆ.
  • ಜನರ ಠೇವಣಿ ಬಂಡವಾಳವನ್ನು ಸುರಕ್ಷಿತವಾಗಿರಿಸುತ್ತದೆ.
ಒಬ್ಬ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು?  ತಿಳಿದುಕೊಳ್ಳಿ ಸರ್ಕಾರದ ನಿಯಮ    title=

Bank Account Open Rules : ಇಂದಿನ ಯುಗದಲ್ಲಿ ಜನರು ಹಣಕಾಸಿನ ವಹಿವಾಟು ನಡೆಸಲು ಬ್ಯಾಂಕ್ ಖಾತೆ ಹೊಂದಿರುವುದು ಬಹಳ ಮುಖ್ಯ. ಬ್ಯಾಂಕ್ ಖಾತೆಯು ಹಣಕಾಸಿನ ವಹಿವಾಟುಗಳನ್ನು ಸುಲಭಗೊಳಿಸುತ್ತದೆ. ಅದು ಜನರ ಠೇವಣಿ ಬಂಡವಾಳವನ್ನು ಸುರಕ್ಷಿತವಾಗಿರಿಸುತ್ತದೆ. ಜನರು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಬಹಳ ಮುಖ್ಯ. ನಮ್ಮಲ್ಲಿ ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ.  ಹಾಗಿದ್ದರೆ ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಖಾತೆಗಳನ್ನು  ಹೊಂದಿರಬಹುದು? ಏನು ಹೇಳುತ್ತದೆ ನಿಯಮ ಎನ್ನುವುದನ್ನು ತಿಳಿದುಕೊಳ್ಳೋಣ. 

ಬ್ಯಾಂಕ್ ಖಾತೆ
ವಾಸ್ತವವಾಗಿ, ಬ್ಯಾಂಕುಗಳು ಅನೇಕ ರೀತಿಯ ಬ್ಯಾಂಕ್ ಖಾತೆಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಸೇವಿಂಗ್ ಅಕೌಂಟ್, ಕರೆಂಟ್ ಅಕೌಂಟ್,  ಸ್ಯಾಲರಿ ಅಕೌಂಟ್ ಮತ್ತು ಜಾಯಿಂಟ್ ಅಕೌಂಟ್ ಸೇರಿವೆ. ಇದರಲ್ಲಿ ಉಳಿತಾಯ ಖಾತೆಯು  ಮುಖ್ಯ ಖಾತೆಯಾಗಿದೆ.  ಜನರು ಉಳಿತಾಯ ಮಾಡುವ ಉದ್ದೇಶದಿಂದ ಈ ಖಾತೆಯನ್ನು ತೆರೆಯುತ್ತಾರೆ. ಈ ಖಾತೆಯು ಹೆಚ್ಚಿನ ಜನರಿಗೆ ಪ್ರಾಥಮಿಕ ಬ್ಯಾಂಕ್ ಖಾತೆಯಾಗಿರುತ್ತದೆ. ಈ ಖಾತೆಯಲ್ಲಿ ಇಟ್ಟಿರುವ ಮೊತ್ತದ ಮೇಲೆ ಬಡ್ಡಿಯೂ ಸಿಗುತ್ತದೆ.  

ಇದನ್ನೂ ಓದಿ : Electric Car: ಇದೇ ನೋಡಿ ದೇಶದ ಅಗ್ಗದ ಎಲೆಕ್ಟ್ರಿಕ್ SUV!

ಸ್ಯಾಲರಿ ಅಕೌಂಟ್  ಪ್ರಯೋಜನ :
ವ್ಯಾಪಾರ ಮಾಡುವವರು ಸಾಮಾನ್ಯವಾಗಿ ಕರೆಂಟ್ ಅಕೌಂಟ್ ಓಪನ್ ಮಾಡುತ್ತಾರೆ. ಯಾಕೆಂದರೆ ವ್ಯಾಪಾರ ವಹಿವಾಟು ನಡೆಸುವವರ ವಹಿವಾಟುಗಳು ತುಂಬಾ ಹೆಚ್ಚಿರುತ್ತವೆ. ಇದಲ್ಲದೆ, ಯಾರು ಪ್ರತಿ ತಿಂಗಳು ವೇತನ ಪಡೆಯುತ್ತಾರೆಯೋ ಅವರು ಸ್ಯಾಲರಿ ಅಕೌಂಟ್ ತೆರೆಯುತ್ತಾರೆ. ಈ ಖಾತೆಗಳು ಹಲವು ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ.  ಸ್ಯಾಲರಿ  ಅಕೌಂಟ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲ. ನಿಮ್ಮ ಕೆಲಸವನ್ನು ಬದಲಾಯಿಸುವಾಗ ಕ್ಲೋಸ್ ಮಾಡಬಹುದಾದ ತಾತ್ಕಾಲಿಕ ಖಾತೆಯೂ ಇದಾಗಿದೆ. 

ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರಬಹುದೇ? : 
ಜಾಯಿಂಟ್ ಅಕೌಂಟ್ ಗಂಡ ಮತ್ತು ಹೆಂಡತಿಯ ನಡುವಿನ ಜಂಟಿ ಖಾತೆಯಾಗಿರಬಹುದು. ಈ ಖಾತೆಯು ತನ್ನದೇ ಆದ ಅನುಕೂಲಗಳನ್ನು ಹೊಂದಿದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಭಾರತದಲ್ಲಿ ಹೊಂದಬಹುದಾದ ಬ್ಯಾಂಕ್ ಖಾತೆಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಇಟ್ಟುಕೊಳ್ಳಬಹುದು.

ಇದನ್ನೂ ಓದಿ : Fact Check : ಮತ್ತೆ ಚಲಾವಣೆಗೆ ಬರುತ್ತಾ ಹಳೆಯ ಬ್ಯಾನ್‌ ಆದ 500, 1000 ರೂಪಾಯಿ ನೋಟು!?

ಎಷ್ಟಿರಬೇಕು ಖಾತೆ ? : 
ಆದಾಗ್ಯೂ, ಹಣಕಾಸು ತಜ್ಞರ ಪ್ರಕಾರ, ಮೂರಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆಯುವುದು ಸೂಕ್ತವಲ್ಲ. ಏಕೆಂದರೆ ಈ ಖಾತೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಈ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರುವುದು ಸಹ ಅಗತ್ಯವಾಗಿರುತ್ತದೆ.  ಮತ್ತೊಂದೆಡೆ, ಈ ಉಳಿತಾಯ ಖಾತೆಗಳಲ್ಲಿ ಸ್ವಲ್ಪ ಸಮಯದವರೆಗೆ ಯಾವುದೇ ಚಟುವಟಿಕೆ ಇಲ್ಲದಿದ್ದರೆ, ಬ್ಯಾಂಕ್ ಅಂಥಹ ಖಾತೆಯನ್ನು  ನಿಷ್ಕ್ರಿಯಗೊಳಿಸಬಹುದು. ಒಬ್ಬರ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕ್ ಖಾತೆ ಮಿತಿಯನ್ನು ನಿಗದಿಪಡಿಸಬೇಕು. ಆದರೆ ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ನಿರ್ಧರಿಸಲು ಸರ್ಕಾರ ಯಾವುದೇ ಪ್ರತ್ಯೇಕ ನಿಯಮವನ್ನು ಹೊರಡಿಸಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News