ಸಂಕ್ರಾಂತಿ ವೇಳೆ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: ಇದೇ ತಿಂಗಳು ವೇತನ ಪರಿಷ್ಕರಣೆ ಖಚಿತ !ಪಿಂಚಣಿ ದಾರರಿಗೂ ಲಾಭ !

7th Pay commission Latest News : ಡಿಸೆಂಬರ್ ಅಂಕಿಅಂಶಗಳು ಇನ್ನೂ ಬರಬೇಕಿದ್ದರೂ, ಜನವರಿ 30ರ ವೇಳೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ. 

Written by - Ranjitha R K | Last Updated : Jan 15, 2024, 01:26 PM IST
  • ಸಂಕ್ರಾಂತಿ ವೇಳೆಯಲ್ಲಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.
  • ಹಣದುಬ್ಬರದಲ್ಲಿ 50 ಪ್ರತಿಶತ ಹೆಚ್ಚಳ
  • ಟಿಎ-ಎಚ್‌ಆರ್‌ಎ ಭತ್ಯೆ ಹೆಚ್ಚಳವೂ ಸಾಧ್ಯ
ಸಂಕ್ರಾಂತಿ ವೇಳೆ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: ಇದೇ ತಿಂಗಳು ವೇತನ ಪರಿಷ್ಕರಣೆ ಖಚಿತ !ಪಿಂಚಣಿ ದಾರರಿಗೂ ಲಾಭ ! title=

7th Pay commission Latest News : ಸಂಕ್ರಾಂತಿ ವೇಳೆಯಲ್ಲಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೌದು ಈ ಬಾರಿ ತುಟ್ಟಿಭತ್ಯೆ ಶೇ.3ರಿಂದ 4ರಷ್ಟು ಹೆಚ್ಚಾಗಲಿದೆ. ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡಿರುವ ಜುಲೈ-ನವೆಂಬರ್ ಎಐಸಿಪಿಐ ಸೂಚ್ಯಂಕ ದತ್ತಾಂಶವನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ. ಡಿಸೆಂಬರ್ ಅಂಕಿಅಂಶಗಳು ಇನ್ನೂ ಬರಬೇಕಿದ್ದರೂ, ಜನವರಿ 30ರ ವೇಳೆಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ. 

ಹಣದುಬ್ಬರದಲ್ಲಿ 50 ಪ್ರತಿಶತ ಹೆಚ್ಚಳ:
ಕಳೆದ ವರ್ಷ ಜನವರಿ ಮತ್ತು ಜುಲೈ ಸೇರಿದಂತೆ ಒಟ್ಟು ಡಿಎ ಹೆಚ್ಚಳವು 8% ರಷ್ಟಾಗಿತ್ತು.   ಮುಂದಿನ ಡಿಎಯನ್ನು ಜುಲೈನಿಂದ ಡಿಸೆಂಬರ್ 2023ರವರೆಗಿನ AICPI ಸೂಚ್ಯಂಕ ಡೇಟಾವನ್ನು ಅವಲಂಬಿಸಿ ಜನವರಿ 2024ರಿಂದ ಪರಿಷ್ಕರಿಸಲಾಗುವುದು.ನವೆಂಬರ್ ವೇಳೆಗೆ, ಸ್ಕೋರ್ 139.1 ತಲುಪಿದ್ದು, ತುಟ್ಟಿಭತ್ಯೆ ಶೇಕಡಾ 49.68ಕ್ಕೆ ತಲುಪಿದೆ. ಆದ್ದರಿಂದ ಡಿಎಯಲ್ಲಿ ಶೇಕಡಾ 4 ಹೆಚ್ಚಳ ಖಚಿತವೆಂದು ಪರಿಗಣಿಸಲಾಗುತ್ತದೆ. ಪ್ರಸಕ್ತ ಕೇಂದ್ರ ನೌಕರರು 46% ಡಿಎ ಲಾಭ ಪಡೆಯುತ್ತಿದ್ದಾರೆ. ಇನ್ನು ತುಟ್ಟಿಭತ್ಯೆ 4% ಹೆಚ್ಚಳವಾಗುವುದರೊಂದಿಗೆ ಡಿಎ 50% ಕ್ಕೆ ಏರುತ್ತದೆ. ಮುಂದಿನ ಡಿಎಯನ್ನು ಜನವರಿ 2024 ರಿಂದ ಪರಿಷ್ಕರಿಸಲಾಗುವುದು. ಹೋಳಿ, ಲೋಕಸಭೆ ಚುನಾವಣೆ ದಿನಾಂಕಗಳು ಮತ್ತು ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಹೊಸ ದರಗಳು ಯಾವಾಗ ಬೇಕಾದರೂ ಪ್ರಕಟವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ : ಸಂಕ್ರಾಂತಿ ದಿನದಂದು ಚಿನ್ನದ ದರ ತಿಳಿಯಬೇಕೆ? ನಿಮ್ಮ ನಗರದ ಬೆಲೆ ಪರಶೀಲಿಸಿ!

ಮಾಧ್ಯಮ ವರದಿಗಳ ಪ್ರಕಾರ, DA 50% ಅಥವಾ 51%ಕ್ಕೆ ತಲುಪಿದರೆ, ನೌಕರರ ವೇತನವನ್ನು ಪರಿಷ್ಕರಿಸಲಾಗುವುದು. 7ನೇ ವೇತನ ಆಯೋಗದ ರಚನೆಯೊಂದಿಗೆ, DA ಅನ್ನು ಪರಿಷ್ಕರಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ತುಟ್ಟಿಭತ್ಯೆ 50%ಕ್ಕೆ ಏರಿದ ಮೇಲೆ  DA ಶೂನ್ಯಕ್ಕೆ ಇಳಿಯುತ್ತದೆ. ಆಗ ಹೆಚ್ಚಳವಾಗಿರುವ ತುಟ್ಟಿಭತ್ಯೆಯನ್ನು  ಮೂಲ ವೇತನಕ್ಕೆ  ಸೇರಿಸಲಾಗುವುದು. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೇಕಿದೆ. 

ಟಿಎ-ಎಚ್‌ಆರ್‌ಎ ಭತ್ಯೆ ಹೆಚ್ಚಳವೂ ಸಾಧ್ಯ:
ಡಿಎ (ಡಿಯರ್‌ನೆಸ್ ಅಲೋವೆನ್ಸ್) ಹೆಚ್ಚಳದ ಜೊತೆಗೆ ಕೇಂದ್ರದ ಮೋದಿ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು 3% ದಷ್ಟು ಹೆಚ್ಚಿಸಬಹುದು. ನಂತರ ಎಚ್‌ಆರ್‌ಎ 27 ರಿಂದ 30%ಕ್ಕೆ ಏರಿಕೆಯಾಗುವುದು. ಅಂದರೆ ನಗರಗಳ ಆಧಾರದ ಮೇಲೆ HRAಯನ್ನು 30%, 20% ಮತ್ತು 10% ದಷ್ಟು ಆಗುವುದು. ಆದರೆ, ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ : ರೇಶನ್ ಕಾರ್ಡ್ ನಲ್ಲಿ ಡಿಲೀಟ್ ಆದ ಹೆಸರನ್ನು ಮತ್ತೆ ಸೇರಿಸಿಕೊಳ್ಳುವ ಸರಳ ಪ್ರಕ್ರಿಯೆ ಇಲ್ಲಿದೆ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News