ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ

ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ ಅವಶ್ಯಕವೋ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್‌ ಹೊಂದಿರುವುದು ಕೂಡ ಬಹಳ ಮುಖ್ಯ. ನೀವು ಇನ್ನೂ ಪಾಸ್‌ಪೋರ್ಟ್‌ ಹೊಂದಿಲ್ಲದಿದ್ದರೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ವಿಧಾನ. 

Written by - Yashaswini V | Last Updated : Mar 8, 2023, 03:38 PM IST
  • ಈ ಡಿಜಿಟಲ್ ಯುಗದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ.
  • ಈಗ ಭಾರತೀಯರು ತಮ್ಮ ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ...
ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ  title=

ನವದೆಹಲಿ: ಯಾವುದೇ ಒಂದು ದೇಶದ ನಾಗರೀಕರು ಬೇರೆ ದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್‌ ಬಹಳ ಮುಖ್ಯ ದಾಖಲೆಯಾಗಿದೆ. ವಿವಿಧ ವಿದೇಶಗಳಿಗೆ ಪ್ರಯಾಣಿಸಲು ಜನರಿಗೆ ಅಧಿಕಾರ ನೀಡಲು ದೇಶದ ಸರ್ಕಾರವು ತನ್ನ ನಾಗರಿಕರಿಗೆ  ಪಾಸ್‌ಪೋರ್ಟ್‌ ಎಂಬ ಅಧಿಕೃತ ದಾಖಲೆಯನ್ನು ಒದಗಿಸುತ್ತದೆ. ಪಾಸ್‌ಪೋರ್ಟ್‌ ಒಂದು ಗುರುತಿನ ಪುರಾವೆ ಆಗಿದ್ದು ಇದು  ವಿದೇಶದಲ್ಲಿ ಭದ್ರತೆಯ ಹಕ್ಕು ಮತ್ತು ಅವರ ಮರು-ಪ್ರವೇಶಿಸುವ ಹಕ್ಕನ್ನು ಪ್ರಮಾಣೀಕರಿಸುತ್ತದೆ. ನೀವು ಇನ್ನೂ ಪಾಸ್‌ಪೋರ್ಟ್‌ ಹೊಂದಿಲ್ಲದಿದ್ದರೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ವಿಧಾನ. 

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು? 
ಈ ಡಿಜಿಟಲ್ ಯುಗದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ. ಈಗ ಭಾರತೀಯರು ತಮ್ಮ ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ- Edible Oil Latest Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ, ಇಲ್ಲಿದೆ ಹೊಸ ದರ ಪಟ್ಟಿ!

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ...
>> ಮೊದಲು ಪಾಸ್‌ಪೋರ್ಟ್ ಸೇವಾ ಕೇಂದ್ರ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ.
>>ಹೊಸ ಬಳಕೆದಾರರ ನೋಂದಣಿ ಎಂಬ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
>> ಅಗತ್ಯ ವಿವರಗಳನ್ನು ಭರ್ತಿ ಮಾಡಿದ ನಂತರ ರಿಜಿಸ್ಟರ್ ಎಂಬ ಆಯ್ಕೆಯನ್ನು ಆರಿಸಿ. 
>> ಈಗ ಮತ್ತೆ ಲಾಗಿನ್ ಮಾಡಿ.
>> ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ/ಪಾಸ್‌ಪೋರ್ಟ್‌ನ ಮರುಹಂಚಿಕೆ  ಲಿಂಕ್ ಅನ್ನು ಕ್ಲಿಕ್ ಮಾಡಿ.
>> ಫಾರ್ಮ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
>> ಮುಂದಿನ ಹಂತವನ್ನು ಪೂರ್ಣಗೊಳಿಸುವ ಸಲುವಾಗಿ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು "ಸೇವ್ ಮಾಡಲಾದ /ಸಲ್ಲಿಸಲಾದ ಅಪ್ಲಿಕೇಶನ್‌ ವೀಕ್ಷಿಸಿ" ಪರದೆಯಲ್ಲಿರುವ "ಪಾವತಿ ಮತ್ತು ನೇಮಕಾತಿ ವೇಳಾಪಟ್ಟಿ" ಲಿಂಕ್ ಅನ್ನು ಕ್ಲಿಕ್ ಮಾಡಿ.
>> ನಂತರ ಅಪ್ಲಿಕೇಶನ್ ರೆಫರೆನ್ಸ್ ಸಂಖ್ಯೆ (ARN) / ನೇಮಕಾತಿ ಸಂಖ್ಯೆಯನ್ನು ಹೊಂದಿರುವ ಅರ್ಜಿ ರಶೀದಿಯನ್ನು ಮುದ್ರಿಸಲು "ಪ್ರಿಂಟ್ ಅಪ್ಲಿಕೇಶನ್ ರಶೀದಿ" ಲಿಂಕ್‌ಗೆ ಹೋಗಿ.

ಇದನ್ನೂ ಓದಿ- ರೈಲು ಟಿಕೆಟ್ ದರದಲ್ಲಿ ಫ್ಲೈಟ್ ಟಿಕೆಟ್ !ಈ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿ !

ಪಾಸ್‌ಪೋರ್ಟ್‌ಪಡೆಯಲು ಮೂಲ ದಾಖಲೆಗಳೊಂದಿಗೆ ಭೌತಿಕ ಪರಿಶೀಲನೆಗಾಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿದ ಸಮಯದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ (PSK) / ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (RPO) ಗೆ ಭೇಟಿ ನೀಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News