Gold Silver Price Today: ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ.. ಚಿನ್ನ ಕೊಳ್ಳಲು ಇದೇ ಗುಡ್‌ ಟೈಮ್‌!

Gold Silver Price Today: ಚಿನ್ನ ಮತ್ತು ಬೆಳ್ಳಿ ಖರೀದಿಸಲು ನೀವು ಯೋಜಿಸುತ್ತಿದ್ದರೆ, ನಿಮಗೆ ಒಂದು ಸುವರ್ಣ ಅವಕಾಶ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಮಂದಗತಿಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದಿನ ಇತ್ತೀಚಿನ ಬೆಲೆಗಳು ಎಷ್ಟಿದೆ ಇಲ್ಲಿ ತಿಳಿಯಿರಿ.   

Written by - Chetana Devarmani | Last Updated : Apr 11, 2023, 07:12 AM IST
  • ಚಿನ್ನ ಮತ್ತು ಬೆಳ್ಳಿ ಖರೀದಿಸಲು ಸುವರ್ಣಾವಕಾಶ
  • ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ
  • ಬೆಳ್ಳಿ ಬೆಲೆಯಲ್ಲೂ ದಿಢೀರ್‌ ಇಳಿಕೆ
Gold Silver Price Today: ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ.. ಚಿನ್ನ ಕೊಳ್ಳಲು ಇದೇ ಗುಡ್‌ ಟೈಮ್‌!  title=
Gold Silver Price Today

Gold Silver Price News: ನೀವು ಚಿನ್ನವನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ, ನಿಮಗೆ ಉತ್ತಮ ಅವಕಾಶ ಬಂದಿದೆ. ಹಲವಾರು ವಾರಗಳ ಕಾಲ ನಿರಂತರವಾಗಿ ಏರಿಳಿತದ ನಂತರ, ಈಗ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪ ಇಳಿಕೆಯಾಗಿವೆ. ಇಂದು 24k ಚಿನ್ನದ ಬೆಲೆ 430 ರೂಪಾಯಿ ಕಡಿಮೆಯಾಗಿದೆ. ಇದರಿಂದ ಈಗ ಒಂದು ತೊಲ ಅಂದರೆ 10 ಗ್ರಾಂ ಚಿನ್ನದ ಬೆಲೆ 60,910 ರೂಪಾಯಿಗೆ ತಲುಪಿದೆ. 

ಕಳೆದ ಕೆಲವು ವಾರಗಳಲ್ಲಿ ಚಿನ್ನದ ಬೆಲೆ 65 ಸಾವಿರ ರೂಪಾಯಿಗೆ ತಲುಪಿತ್ತು. ಆದರೂ ಈಗ ಅದರ ಬೆಲೆಗಳು ಕಡಿಮೆಯಾಗುತ್ತಿವೆ. ಇಂದು ಪ್ರತಿ 10 ಗ್ರಾಂ ಚಿನ್ನದ ಬೆಲೆ 60,910 ರೂಪಾಯಿ.  ಬೆಳ್ಳಿಯ ಬೆಲೆಯಲ್ಲಿ ಸಹ ಇಳಿಕೆ ಕಂಡುಬರುತ್ತಿದೆ. ಇಂದು ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 300 ರೂ. ಕಡಿಮೆಯಾಗಿದೆ. ಇದರೊಂದಿಗೆ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 760,000 ರೂ.ಗೆ ಇಳಿಕೆಯಾಗಿದೆ.  

ಇದನ್ನೂ ಓದಿ : ರೈಲು ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಮೊಬೈಲ್ ಚಾರ್ಜ್ ಮಾಡುವ ಮುನ್ನ ಈ ನಿಯಮವನ್ನೊಮ್ಮೆ ಓದಿ

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6048 ರೂ., 22ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,584 ರೂ., ಚಿನ್ನದ ಈ ಬೆಲೆಯು ಮೇಕಿಂಗ್ ಶುಲ್ಕಗಳು ಮತ್ತು 3% GST ಒಳಗೊಂಡಿಲ್ಲ. 

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10ಗ್ರಾಂ) : 

ಬೆಂಗಳೂರು 
24K - ₹55,450
22K  -  ₹60,480

ಚೆನ್ನೈ 
24K - ₹56,000
22K  -  ₹61,100

ಮುಂಬೈ  
24K - ₹55,400
22K  - ₹60,430

ದೆಹಲಿ 
24K - ₹55,550 
22K  - ₹60,580

ಕೋಲ್ಕತ್ತಾ 
24K - ₹55,400 
22K  - ₹60,430

ಹೈದರಾಬಾದ್
24K -  ₹55,400
22K  -  ₹60,430

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ (1 ಕೆಜಿ) : 

ಚೆನ್ನೈ - ₹80000
ಮುಂಬೈ - ₹76300
ದೆಹಲಿ - ₹76300
ಕೋಲ್ಕತ್ತಾ - ₹76300
ಬೆಂಗಳೂರು - ₹80000
ಹೈದರಾಬಾದ್ - ₹80000 

ಇದನ್ನೂ ಓದಿ : ದಾಖಲೆಯ ಏರಿಕೆ ಬಳಿಕ ಇಳಿಕೆ ಕಂಡ ಚಿನ್ನದ ಬೆಲೆ ! ಈಗಲೇ ಖರೀದಿಸುವುದು ಉತ್ತಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News