ನವದೆಹಲಿ: ಅಂಚೆ ಕಚೇರಿ ಉಳಿತಾಯ ಯೋಜನೆಗಳು:- ಅಂಚೆ ಕಚೇರಿಯು ಅನೇಕ ಉಳಿತಾಯ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳ ಅತ್ಯಂತ ಮುಖ್ಯವಾದ ವಿಷಯವೆಂದರೆ ಇವುಗಳ ಮೇಲೆ ಸರ್ಕಾರದ ಗ್ಯಾರಂಟಿ ಇರುತ್ತದೆ. ಅಂದರೆ ನಿಮ್ಮ ಹಣ ಎಂದಿಗೂ ಮುಳುಗುವುದಿಲ್ಲ. ಪ್ರತಿಯೊಬ್ಬರೂ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ನೀವು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಮಯದ ನಂತರ ಹಣ ದ್ವಿಗುಣಗೊಳ್ಳುತ್ತದೆ ಎಂಬುದರ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಮತ್ತು ಅವುಗಳ ಬಡ್ಡಿದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
1) ಪೋಸ್ಟ್ ಆಫೀಸ್ ಟಿಡಿ
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (TD) 1 ವರ್ಷದಿಂದ 3 ವರ್ಷಗಳವರೆಗೆ ಪ್ರಸ್ತುತ ಶೇ.5.5ರಷ್ಟು ಬಡ್ಡಿಯನ್ನು ನೀಡುತ್ತಿದೆ. ನೀವು ಇದರಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂತೆಯೇ ನೀವು 5 ವರ್ಷಗಳ ಸಮಯದ ಠೇವಣಿಯ ಮೇಲೆ ಶೇ.6.7ರಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಈ ಬಡ್ಡಿ ದರದೊಂದಿಗೆ ಹಣವನ್ನು ಹೂಡಿಕೆ ಮಾಡಿದರೆ ಸುಮಾರು 10.75 ವರ್ಷಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳಲಿದೆ.
2) ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆ
ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಇರಿಸಿದರೆ, ಹಣ ದ್ವಿಗುಣಗೊಳ್ಳಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಏಕೆಂದರೆ ಇದರಲ್ಲಿ ಶೇ.4.0ರಷ್ಟು ಬಡ್ಡಿ ಮಾತ್ರ ದೊರೆಯುತ್ತದೆ. ಅಂದರೆ 18 ವರ್ಷಗಳಲ್ಲಿ ನಿಮ್ಮ ಹಣ ದುಪ್ಪಟ್ಟಾಗುತ್ತದೆ.
ಇದನ್ನೂ ಓದಿ: ATM Cash Withdrawal: ಈಗ ಎಟಿಎಂನಿಂದ ಹಣ ಡ್ರಾ ಮಾಡುವುದು ದುಬಾರಿ! ಹೊಸ ಶುಲ್ಕ ಎಷ್ಟು ಗೊತ್ತಾ..?
3) ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್
ಪ್ರಸ್ತುತ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ (RD) ಮೇಲೆ ನಿಮಗೆ ಶೇ.5.8ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಬಡ್ಡಿದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅದು ಸುಮಾರು 12.41 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
4) ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ಶೇ.6.6ರಷ್ಟು ಬಡ್ಡಿಯನ್ನು ನೀಡುತ್ತಿದೆ. ಈ ಬಡ್ಡಿ ದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಸುಮಾರು 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.
5) ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS) ಗೆ ಪ್ರಸ್ತುತ ಶೇ.7.4ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಸುಮಾರು 9.73 ವರ್ಷಗಳಲ್ಲಿ ಈ ಯೋಜನೆಯಡಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ.
6) ಪೋಸ್ಟ್ ಆಫೀಸ್ ಪಿಪಿಎಫ್
ಪೋಸ್ಟ್ ಆಫೀಸ್‌ನ 15 ವರ್ಷಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಪ್ರಸ್ತುತ ಶೇ.7.1ರಷ್ಟು ಬಡ್ಡಿಯನ್ನು ನೀಡುತ್ತಿದೆ. ಅಂದರೆ ಈ ದರದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸುಮಾರು 10.14 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಈ ನಂಬರ್ ಕಳೆದುಹೋದರೆ ನಿಂತು ಹೋಗುತ್ತದೆ ಪಿಂಚಣಿ..! ಮತ್ತೆ ಪಡೆಯಲು ಅನುಸರಿಸಿ ಈ ಸರಳ ಉಪಾಯ
7) ಅಂಚೆ ಕಚೇರಿ ಸುಕನ್ಯಾ ಸಮೃದ್ಧಿ ಖಾತೆ
ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯು ಪ್ರಸ್ತುತ ಶೇ.7.6ರ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ. ಹೆಣ್ಣು ಮಕ್ಕಳಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ ಹಣ ದ್ವಿಗುಣಗೊಳ್ಳಲು ಸುಮಾರು 9.47 ವರ್ಷಗಳು ಬೇಕಾಗುತ್ತದೆ.
8) ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ಪ್ರಸ್ತುತ ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮೇಲೆ ಶೇ.6.8ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಇದು 5 ವರ್ಷಗಳ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯನ್ನು ಸಹ ಉಳಿಸಬಹುದು. ಈ ಬಡ್ಡಿ ದರದಲ್ಲಿ ಹಣ ಹೂಡಿಕೆ ಮಾಡಿದರೆ ಸುಮಾರು 10.59 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ.
9) ಅಂಚೆ ಕಚೇರಿ ಕಿಸಾನ್ ವಿಕಾಸ್ ಪತ್ರ
ಪ್ರಸ್ತುತ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆಯಲ್ಲಿ ಶೇ.6.9ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಈ ಬಡ್ಡಿದರದೊಂದಿಗೆ ಇಲ್ಲಿ ಹೂಡಿಕೆ ಮಾಡಿದ ಮೊತ್ತವು 124 ತಿಂಗಳುಗಳಲ್ಲಿ (10 ವರ್ಷ ಮತ್ತು 4 ತಿಂಗಳು) ದ್ವಿಗುಣಗೊಳ್ಳಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.