GST Council Meeting: ಬಿಗ್ ನ್ಯೂಸ್- ಜುಲೈ 18 ರಿಂದ ಈ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ವಿತ್ತ ಸಚಿವರ ಘೋಷಣೆ

GST Council Meet Update: ಜಿಎಸ್ಟಿ ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ತೆರಿಗೆ ವಿನಾಯಿತಿಗಳು ಮತ್ತು ವಿಲೋಮ ತಿದ್ದುಪಡಿಯ ಕುರಿತು GoM ನ ಶಿಫಾರಸುಗಳನ್ನು ಹಣಕಾಸು ಸಚಿವರು ಅನುಮೋದಿಸಿದ್ದಾರೆ. ಆದರೆ ಈಗ ಅನೇಕ ದಿನಬಳಕೆಯ ವಸ್ತುಗಳು ದುಬಾರಿಯಾಗಿವೆ.  

Written by - Nitin Tabib | Last Updated : Jun 29, 2022, 10:05 PM IST
  • ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆಯೇ ಸರ್ಕಾರ ಶ್ರೀಸಾಮಾನ್ಯರಿಗೆ ಬಿಗ್ ಶಾಕ್ ನೀಡಿದೆ.
  • ಇದರಿಂದ ಜುಲೈ 18 ರಿಂದ, ನೀವು ಅನೇಕ ದೈನಂದಿನ ವಸ್ತುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗಲಿದೆ.
  • ಹೌದು, ಜಿಎಸ್ಟಿಯ 47 ನೇ ಸಭೆಯ ನಂತರ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಕುರಿತು ಘೋಷಣೆ ಮಾಡಿದ್ದಾರೆ.
GST Council Meeting:  ಬಿಗ್ ನ್ಯೂಸ್- ಜುಲೈ 18 ರಿಂದ ಈ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ವಿತ್ತ ಸಚಿವರ ಘೋಷಣೆ title=
GST Council Meeting

GST Council Meet Update: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ  ನಡುವೆಯೇ ಸರ್ಕಾರ ಶ್ರೀಸಾಮಾನ್ಯರಿಗೆ ಬಿಗ್ ಶಾಕ್ ನೀಡಿದೆ. ಇದರಿಂದ ಜುಲೈ 18 ರಿಂದ, ನೀವು ಅನೇಕ ದೈನಂದಿನ ವಸ್ತುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗಲಿದೆ. ಹೌದು, ಜಿಎಸ್ಟಿಯ 47 ನೇ ಸಭೆಯ ನಂತರ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಜುಲೈ 18 ರಿಂದ ಕೆಲವು ಹೊಸ ಉತ್ಪನ್ನಗಳು ಮತ್ತು ಕೆಲವು ಸರಕು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ದರಗಳು ಹೆಚ್ಚಾಗಲಿವೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಬ್ರಾಂಡೆಡ್ ಅಲ್ಲದ ಆದರೆ ಪ್ಯಾಕ್ ಮಾಡಲಾದ (ಸ್ಥಳೀಯ) ಡೈರಿ ಮತ್ತು ಕೃಷಿ ಉತ್ಪನ್ನಗಳನ್ನು ಶೇ 5 ತೆರಿಗೆ ದರದ ಸ್ಲ್ಯಾಬ್ ಅಡಿಯಲ್ಲಿ ತರಲು ರಾಜ್ಯ ಹಣಕಾಸು ಮಂತ್ರಿಗಳ ಸಮಿತಿ ಮತ್ತು ಫಿಟ್‌ಮೆಂಟ್ ಸಮಿತಿ ನೀಡಿದ ಶಿಫಾರಸುಗಳನ್ನು ಸಭೆ ಅಂಗೀಕರಿಸಿದೆ. ಹೊಸ ದರಗಳು ಮತ್ತು ರಿಯಾಯಿತಿಗಳು ಜುಲೈ 18 ರಿಂದ ಅನ್ವಯಿಸಲಿವೆ.

ಹಣಕಾಸು ಸಚಿವರು ನೀಡಿದ ಮಾಹಿತಿ ಏನು?
ಪನೀರ್, ಲಸ್ಸಿ, ಮಜ್ಜಿಗೆ, ಪ್ಯಾಕೇಜ್ಡ್ ಮೊಸರು, ಗೋಧಿ ಹಿಟ್ಟು, ಇತರ ಧಾನ್ಯಗಳು, ಜೇನುತುಪ್ಪ, ಪಾಪಡ್, ಆಹಾರ ಧಾನ್ಯಗಳು, ಮಾಂಸ ಮತ್ತು ಮೀನು (ಹೆಪ್ಪುಗಟ್ಟಿದ ಹೊರತುಪಡಿಸಿ), ಪಫ್ಡ್ ಅಕ್ಕಿ ಮತ್ತು ಬೆಲ್ಲದಂತಹ ಪೂರ್ವ-ಪ್ಯಾಕೇಜ್ ಮಾಡಲಾದ ಲೇಬಲ್ ಮಾಡಿದ ಕೃಷಿ ಉತ್ಪನ್ನಗಳಿಗೆ ತೆರಿಗೆ ಅನ್ವಯಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅವುಗಳ ಬೆಲೆ ಜುಲೈ 18 ರಿಂದ ದುಬಾರಿಯಾಗಲಿದೆ. ಅಂದರೆ, ಅವುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಪ್ರಸ್ತುತ, ಬ್ರಾಂಡ್ ಮತ್ತು ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳ ಮೇಲೆ ಶೇಕಡಾ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 

ಇದನ್ನೂ ಓದಿ-FD Rules : FD ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದ RBI

ಈ ವಸ್ತುಗಳು ದುಬಾರಿಯಾಗಿವೆ
ಇದರ ಜೊತೆಗೆ ಶೇ.12ರ ಜಿಎಸ್‌ಟಿ ದರದ ಸ್ಲ್ಯಾಬ್‌ನ ಅಡಿಯಲ್ಲಿ ಹೋಟೆಲ್ ಕೊಠಡಿಗಳು (ರಾತ್ರಿಗೆ ರೂ. 1,000 ಕ್ಕಿಂತ ಕಡಿಮೆ ದರದೊಂದಿಗೆ) ಮತ್ತು ಆಸ್ಪತ್ರೆ ಕೊಠಡಿಗಳನ್ನು (ದಿನಕ್ಕೆ ರೂ. 5,000 ಕ್ಕಿಂತ ಹೆಚ್ಚು ಸುಂಕದೊಂದಿಗೆ) ಸೇರಿಸಲು ಕೌನ್ಸಿಲ್ ಗೆ ರಾಜ್ಯ ಹಣಕಾಸು ಮಂತ್ರಿಗಳಿಗೆ ಮಾಡಿರುವ ಶಿಫಾರಸ್ಸುಗಳನ್ನೂ ಸಹ ಸ್ವೀಕರಿಸಲಾಗಿದೆ. ಈ ದರಗಳು ಕೂಡ ಜುಲೈ 18 ರಿಂದ ಅನ್ವಯವಾಗಲಿವೆ. ಇದಲ್ಲದೇ ಆಯ್ದ ಪಾತ್ರೆಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ-PF ಖಾತೆದಾರರಿಗೆ ಮಹತ್ವದ ಸುದ್ದಿ : EPFO ನೀಡಿದೆ ಎಚ್ಚರಿಕೆ!

ಆದಾಯ ನಷ್ಟದ ಬಗ್ಗೆ ಯಾವುದೇ ನಿರ್ಧಾರವಿಲ್ಲ
ಜುಲೈ 1, 2017 ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯಗಳಿಗೆ ಜೂನ್ 2022 ರವರೆಗೆ ಆದಾಯ ಕೊರತೆಯ ಬಗ್ಗೆ ಭರವಸೆ ನೀಡಲಾಗಿತ್ತು. ಈ ಆದಾಯ ಕೊರತೆ ಜಿಎಸ್‌ಟಿಯ ರೋಲ್‌ಔಟ್‌ನಿಂದಾಗಿತ್ತು. ಆದರೆ ರಾಜ್ಯಗಳಿಗೆ ಪರಿಹಾರ ನೀಡುವ ಕುರಿತು ಜಿಎಸ್‌ಟಿ ಕೌನ್ಸಿಲ್ ಸಭೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜೂನ್ 30ರಂದು ಈ ಗಡುವು ಮುಕ್ತಾಯಗೊಳ್ಳಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News