GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ

GPF Interest Rate - ಸೆಪ್ಟೆಂಬರ್ ತ್ರೈಮಾಸಿಕದ ಜನರಲ್ ಪ್ರಾವಿಡೆಂಟ್ ಫಂಡ್ (GPF) ನ ಹೊಸ ಬಡ್ಡಿದರಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಕುರಿತು ವಿವರವಾಗಿ ತಿಳಿಯೋಣ ಬನ್ನಿ.

Written by - Nitin Tabib | Last Updated : Jul 6, 2021, 05:31 PM IST
  • ಸರ್ಕಾರಿ ನೌಕರರು ಓದಲೇಬೇಕಾದ ಸುದ್ದಿ ಇದು.
  • GPF ನೂತನ ಬಡ್ಡಿದರ ಪ್ರಕಟಿಸಿದ ಸರ್ಕಾರ.
  • GPF ಮೇಲೆ ಸಿಗುವ ಸಾಲ ಬಡ್ಡಿರಹಿತವಾಗಿರುತ್ತದೆ.
GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ title=
GPF Interest Rate Announced (File Photo)

ನವದೆಹಲಿ: GPF Interest Rate Announced - ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ತನ್ನ ಕೋಟ್ಯಾಂತರ ನೌಕರರ ಖಾತೆಗೆ ಈ ಬಡ್ಡಿದರವನ್ನು ವರ್ಗಾಯಿಸಲಿದೆ. ವಾಸ್ತವದಲ್ಲಿ ಸರ್ಕಾರ ಸೆಪ್ಟೆಂಬರ್ ತ್ರೈಮಾಸಿಕದ GPF ಬಡ್ಡಿದರಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಜನರಲ್ PF (General Provident Fund) ಖಾತೆದಾರರಿಗೆ ಶೇ.7.1 ಬಡ್ಡಿ ದರದ ಲಾಭ ಸಿಗಲಿದೆ. ಅಂದರೆ, ಈ ತ್ರೈಮಾಸಿಕದಲ್ಲಿಯೂ ಕೂಡ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಬಡ್ಡಿದರದ ಮೇಲೂ ಕೂಡ ಲಾಭ ಸಿಗುತ್ತದೆ
ಈ ರೀತಿಯ ಪ್ರಾವಿಡೆಂಟ್ ಫಂಡ್ ಮೇಲೂ ಕೂಡ PPF ಹಾಗೂ PF ರೀತಿಯ ಲಾಭ ಸಿಗುತ್ತದೆ. ಸತತವಾಗಿ 6ನೇ ತ್ರೈಮಾಸಿಕದಲ್ಲಿಯೂ ಕೂಡ ಸರ್ಕಾರ ಇದರ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವುದು ಇಲ್ಲಿ ಗಮನಾರ್ಹ. ಈ ಮೊದಲೂ ಕೂಡ ಜೂನ್ ತ್ರೈಮಾಸಿಕದಲ್ಲಿ ಸರ್ಕಾರ GPF ಮೇಲೆ ಶೇ.7.1ರಷ್ಟು ಬಡ್ಡಿದರವನ್ನು ಕಾಯ್ದಿರಿಸಿತ್ತು. ಏಪ್ರಿಲ್ 2020ರಲ್ಲಿ ಸರ್ಕಾರ GPF ಬಡ್ಡಿದರವನ್ನು ಸರ್ಕಾರ ಶೇ.7.9 ರಿಂದ ಶೇ.7.1 ಕ್ಕೆ ಇಳಿಕೆ ಮಾಡಿತ್ತು.

>> ಈ ಯೋಜನೆಗಳ ಮೇಲೆ GPFನ ಶೇ.7.1 ರಷ್ಟು ಬಡ್ಡಿ ಸಿಗುತ್ತದೆ
>> ಜನರಲ್ ಪ್ರಾವಿಡೆಂಟ್ ಫಂಡ್ (ಸೆಂಟ್ರಲ್ ಸರ್ವಿಸೆಸ್)
>> ಕಾಂಟ್ರೀಬ್ಯೂಟರಿ ಪ್ರಾವಿಡೆಂಟ್ ಫಂಡ್ 
>> ಆಲ್ ಇಂಡಿಯಾ ಸರ್ವಿಸಸ್ ಪ್ರಾವಿಡೆಂಟ್ ಫಂಡ್ 
>> ಸ್ಟೇಟ್ ರೈಲ್ವೆ ಪ್ರಾವಿಡೆಂಟ್ ಫಂಡ್
>> ಇಂಡಿಯಾ ನಾವೆಲ್ ಡಾಕ್ ಯಾರ್ಡ್ ವರ್ಕ್ ಮ್ಯಾನ್ ಪ್ರಾವಿಡೆಂಟ್ ಫಂಡ್
>> ಡಿಫೆನ್ಸ್ ಸರ್ವಿಸೆಸ್ ಆಫೀಸರ್ಸ್ ಪ್ರಾವಿಡೆಂಟ್ ಫಂಡ್
>> ದಿ ಆರ್ಮಡ್ ಫೋರ್ಸಸ್ ಪರ್ಸನಲ್ ಪ್ರಾವಿಡೆಂಟ್ ಫಂಡ್
>> ಜನರಲ್ ಪ್ರಾವಿಡೆಂಟ್ ಫಂಡ್ (ಡಿಫೆನ್ಸ್ ಸರ್ವಿಸೆಸ್)
>> ಇಂಡಿಯಾ ಆರ್ಡಿನೆನ್ಸ್ ಡಿಪಾರ್ಟ್ಮೆಂಟ್ ಪ್ರಾವಿಡೆಂಟ್ ಫಂಡ್
>> ಇಂಡಿಯಾ ಆರ್ಡಿನೆನ್ಸ್ ಫ್ಯಾಕ್ಟರಿಸ್ ವರ್ಕ್ ಮನ್ ಪ್ರಾವಿಡೆಂಟ್ ಫಂಡ್

ಇದನ್ನೂ ಓದಿ-Mutual Fund New Scheme: ಕಡಿಮೆ ವೆಚ್ಚ, ಉತ್ತಮ ಆದಾಯ, ಈ ಅವಕಾಶ ಜುಲೈ 12ರವರೆಗೆ ಮಾತ್ರ

ಏನಿದು GPF?
ಜಿಪಿಎಫ್ ಕೂಡ ಒಂದು ರೀತಿಯ ಭವಿಷ್ಯ ನಿಧಿ ಖಾತೆಯಾಗಿದೆ ಆದರೆ ಇದು ನಿರ್ದಿಷ್ಟ ರೀತಿಯ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದೆ. ಜಿಪಿಎಫ್‌ನ ಪ್ರಯೋಜನವು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ ಮತ್ತು ಅದೂ ನಿವೃತ್ತಿಯ ಸಮಯದಲ್ಲಿ. ಇದರ ಲಾಭ ಪಡೆಯಲು ಸರ್ಕಾರಿ ನೌಕರರು ತಮ್ಮ ಸಂಬಳದಿಂದ ಸ್ವಲ್ಪ ಹಣವನ್ನು ಜಿಪಿಎಫ್ ಖಾತೆಗೆ ಹಾಕಬೇಕಾಗುತ್ತದೆ. ಅಲ್ಲದೆ, ಕೆಲವು ಸರ್ಕಾರಿ ನೌಕರರು ಜಿಪಿಎಫ್‌ಗೆ ಕೊಡುಗೆ ನೀಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ-NPS ಚಂದಾದಾರರಿಗೆ ಬಿಗ್ ನ್ಯೂಸ್ : ಮೆಚ್ಯೂರಿಟಿ ಪೂರ್ವ ನಿರ್ಗಮನಕ್ಕೆ ಹೊಸ ನಿಯಮ!

GPF ನಿಂದ ಬಡ್ಡಿ ರಹಿತ ಸಾಲ ಸಿಗುತ್ತದೆ
ಜಿಪಿಎಫ್ ಖಾತೆಯಲ್ಲಿ, ಸರ್ಕಾರಿ ನೌಕರರು ನಿಗದಿತ ಸಮಯದವರೆಗೆ ಪ್ರತಿ ತಿಂಗಳ ಕಂತಿನಲ್ಲಿ ಕೊಡುಗೆ ನೀಡಬೇಕಾಗುತ್ತದೆ. ಜಿಪಿಎಫ್ ಖಾತೆಯಲ್ಲಿಯೂ ನಾಮಿನಿಯನ್ನು ಮಾಡಬಹುದು. ನಿವೃತ್ತಿಯ ನಂತರ, ಖಾತೆದಾರರಿಗೆ ಅದರಲ್ಲಿ ಠೇವಣಿ ಇರಿಸಿದ ಹಣವನ್ನು ಪಾವತಿಸಲಾಗುತ್ತದೆ. ಒಂದು ವೇಳೆ ಖಾತೆದಾರರು ನಿಧನರಾಗಿದ್ದರೆ, ನಾಮಿನಿಗೆ  ಆ ಹಣವನ್ನು ಪಾವತಿಸಲಾಗುತ್ತದೆ. ಜಿಪಿಎಫ್ ಖಾತೆಯಲ್ಲಿರುವ ತಮ್ಮ ಹಣದ ಮೇಲೆ ಒಂದು ವೇಳೆ ಸರ್ಕಾರಿ ನೌಕರರು ಸಾಲ ಪಡೆದುಕೊಂಡರೆ, ಆ ಸಾಲ ಬಡ್ಡಿರಹಿತವಾಗಿರುತ್ತದೆ.

ಇದನ್ನೂ ಓದಿ-ಈ ಶತಮಾನದ ಅಂತ್ಯದ ವೇಳೆಗೆ ಮನುಷ್ಯರು 130 ವರ್ಷ ಬದುಕಲು ಸಾಧ್ಯವಾಗಲಿದೆ: ಅಧ್ಯಯನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News