ರೈತರಿಗೆ ಸರ್ಕಾರ ಭರ್ಜರಿ ಯೋಜನೆ ! ಲಾಭ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ

ಒಂದು ವೇಳೆ ಈ ಯೋಜನೆಯ ಪ್ರಯೋಜನಗಳನ್ನು ನೀವು ಇಲ್ಲಿಯವರೆಗೆ ಪಡೆಯಲು ಸಾಧ್ಯವಾಗದಿದ್ದರೆ, 16 ನೇ ಕಂತಿಗೆ ನೋಂದಾಯಿಸಿಕೊಳ್ಳಬಹುದು.

Written by - Ranjitha R K | Last Updated : Dec 8, 2023, 09:33 AM IST
  • ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತಿಗೆ ನೋಂದಣಿ ಆರಂಭ
  • ರೈತರಿಗೆ ವಾರ್ಷಿಕ 6000 ರೂ. ನೀಡಲಾಗುವುದು.
  • ಸರ್ಕಾರ ರೈತರ ಖಾತೆಗೆ 15 ಕಂತುಗಳ ಹಣವನ್ನು ವರ್ಗಾಯಿಸಿದೆ.
ರೈತರಿಗೆ ಸರ್ಕಾರ ಭರ್ಜರಿ ಯೋಜನೆ ! ಲಾಭ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ  title=

ಬೆಂಗಳೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತಿಗೆ ನೋಂದಣಿ ಆರಂಭವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಈಗಾಗಲೇ ರೈತರ ಖಾತೆ ಸೇರಿದೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡಲಾಗುವುದು. 

ಕೇಂದ್ರ ಸರ್ಕಾರ ಈ ಮೊತ್ತವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ವರ್ಗಾಯಿಸುತ್ತದೆ. ಇದುವರೆಗೆ ಸರ್ಕಾರ ರೈತರ ಖಾತೆಗೆ 15 ಕಂತುಗಳ ಹಣವನ್ನು ವರ್ಗಾಯಿಸಿದೆ. ಒಂದು ವೇಳೆ ಈ ಯೋಜನೆಯ ಪ್ರಯೋಜನಗಳನ್ನು ನೀವು ಇಲ್ಲಿಯವರೆಗೆ ಪಡೆಯಲು ಸಾಧ್ಯವಾಗದಿದ್ದರೆ, 16 ನೇ ಕಂತಿಗೆ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ : ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ! ರೈತರಿಗೆ ಸರ್ಕಾರದ ಯೋಜನೆ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಾಗಿ ನೋಂದಾಯಿಸಲು ಯಾವುದೇ ಸರ್ಕಾರಿ ಕಚೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತೇ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ಪ್ರಯೋಜನವು ಅರ್ಹ ರೈತರಿಗೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಗಾಗಿ ರೈತರು  pmkisan.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.  ಮನೆಯಿಂದಲೇ ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವ ಹಂತ ಹಂತದ ಮಾಹಿತಿ ಇಲ್ಲಿದೆ. 

ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸುವುದು ಹೇಗೆ ? : 
1 - ಮೊದಲು ಸರ್ಕಾರಿ ಪೋರ್ಟಲ್ pkisan.gov.in ನಲ್ಲಿ PM ಕಿಸಾನ್ ಯೋಜನೆಗೆ ಲಾಗಿನ್ ಆಗಬೇಕು.
2 - ಪೋರ್ಟಲ್‌ನಲ್ಲಿ ನೀವು 'ಫಾರ್ಮರ್ಸ್ ಕಾರ್ನರ್' ಮೇಲೆ ಕ್ಲಿಕ್ ಮಾಡಿ ಮತ್ತು 'New Farmer Registration'ಆಯ್ಕೆಯನ್ನು ಆರಿಸಬೇಕಾಗುತ್ತದೆ.
3 - ಈಗ ನಗರವನ್ನು ಆಯ್ಕೆ ಮಾಡಿಕೊಳ್ಳಬೇಕು. 
4 - ಮುಂದಿನ ಪುಟದಲ್ಲಿ ನೀವು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ರಾಜ್ಯವನ್ನು ಆಯ್ಕೆ ಮಾಡಬೇಕು. ಇದರ ನಂತರ 'Get OTP' ಮೇಲೆ ಕ್ಲಿಕ್ ಮಾಡಿ.
5 - ಮೊಬೈಲ್ ನಲ್ಲಿ ಸ್ವೀಕರಿಸಿದ OTP ಯನ್ನು ನಮೂದಿಸಿ ಮತ್ತು 'ಪ್ರೋಸೀಡ್ ಫಾರ್ ರಿಜಿಸ್ಟ್ರೇಶನ್ ಆಯ್ಕೆಯನ್ನು ಆರಿಸಿ.
6 - ಮುಂದಿನ ಪುಟದಲ್ಲಿ ನಿಮ್ಮ ಬ್ಯಾಂಕ್ ಖಾತೆ ಮತ್ತು ಇತರ ವಿನಂತಿಸಿದ ಮಾಹಿತಿಯನ್ನು ಒದಗಿಸಬೇಕು. ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್‌ನ ಪ್ರಕಾರ ಮಾತ್ರ ನೀವು ಈ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. 
7–ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. 
8 - ಈಗ ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTPಯನ್ನು ನಮೂದಿಸಿ ಸಬ್ಮಿಟ್ ಮಾಡಿ. 
9 -ಮುಂದಿನ ಪುಟದಲ್ಲಿ, ನಿಮ್ಮ ಕೃಷಿ ಸಂಬಂಧಿತ ವಿವರಗಳು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. 
10 - ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ನೋಂದಣಿ ಪೂರ್ಣಗೊಂಡಿದೆ  ಎನ್ನುವ ಸಂದೇಶ ನಿಮ್ಮ ಮೊಬೈಲ್ ಗೆ  ಬರುತ್ತದೆ. 

ಇದನ್ನೂ ಓದಿ : Maruti Suzuki EV SUV: ಈ ದಿನ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಕೆಲವು ಅಗತ್ಯ ಷರತ್ತುಗಳು : 
* ಈ ಯೋಜನೆಯ ಪ್ರಯೋಜನವು 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಲಭ್ಯವಿರುತ್ತದೆ.
* ಇದರಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರು ಅಥವಾ ನಿವೃತ್ತರಾದ ರೈತ ಕುಟುಂಬಗಳನ್ನು ಹೊರಗಿಡಲಾಗಿದೆ.
* ಹೆಚ್ಚುವರಿಯಾಗಿ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಲಾಗಿಲ್ಲ.
* 10,000 ರೂ.ಗಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವ ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರು ಸೇರಿದಂತೆ ವೃತ್ತಿಪರರನ್ನು ಸಹ ಯೋಜನೆಯಿಂದ ಹೊರಗಿಡಲಾಗಿದೆ.
* ಆದಾಯ ತೆರಿಗೆ ಪಾವತಿಸುವ ರೈತರನ್ನೂ ಈ ಯೋಜನೆಯಿಂದ ಹೊರಗಿಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News