ಹಿರಿಯ ನಾಗರಿಕರಿಗೊಂದು ಬಂಬಾಟ್ ಸುದ್ದಿ, ತಿಂಗಳಿಗೆ 70,500 ನೀಡುವುದಾಗಿ ಘೋಷಿಸಿದೆ ಮೋದಿ ಸರ್ಕಾರ!

Senior Citizen Saving Scheme: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವತಿಯಿಂದ ಹಲವು ಯೋಜನೆಗಳನ್ನು ನಡೆಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮೋದಿ ಸರ್ಕಾರ ಹಲವು ರೀತಿಯ ಸವಲತ್ತುಗಳನ್ನು ನೀಡಿದೆ. ಪ್ರಸ್ತುತ ಮೋದಿ ಸರ್ಕಾರ ಹಿರಿಯ ನಾಗರಿಕರಿಗೆ 70,500 ರೂ.ನೀಡುವುದಾಗಿ ಘೋಷಿಸಿದೆ.  

Written by - Nitin Tabib | Last Updated : Mar 16, 2023, 04:51 PM IST
  • ಈ ಬಾರಿಯ ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ವಿಶೇಷ ಘೋಷಣೆಗಳನ್ನು ಮಾಡಿದ್ದಾರೆ.
  • ಈಗ ನೀವು ಸರ್ಕಾರದಿಂದ ಪ್ರತಿ ತಿಂಗಳು 70,500 ರೂ.ಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
  • ಸರ್ಕಾರದಿಂದ ಅನೇಕ ಯೋಜನೆಗಳು ನಡೆಯುತ್ತಿವೆ,
ಹಿರಿಯ ನಾಗರಿಕರಿಗೊಂದು ಬಂಬಾಟ್ ಸುದ್ದಿ, ತಿಂಗಳಿಗೆ 70,500 ನೀಡುವುದಾಗಿ ಘೋಷಿಸಿದೆ ಮೋದಿ ಸರ್ಕಾರ! title=
ಹಿರಿಯ ನಾಗರಿಕರಿಗೊಂದು ಸಂತಸದ ಸುದ್ದಿ!

Senior Citizen Saving Schemes: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವತಿಯಿಂದ ಹಲವು ಯೋಜನೆಗಳನ್ನು ನಡೆಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮೋದಿ ಸರ್ಕಾರ ಹಲವು ರೀತಿಯ ಸವಲತ್ತುಗಳನ್ನು ನೀಡಿದೆ. ಪ್ರಸ್ತುತ ಮೋದಿ ಸರ್ಕಾರ ಹಿರಿಯ ನಾಗರಿಕರಿಗೆ 70,500 ರೂ.ನೀಡುವುದಾಗಿ ಘೋಷಿಸಿದೆ. ಹೌದು... ನೀವೂ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಬಯಸಿದರೆ, ನಿಮ್ಮ ಬಳಿ ಇದೊಂದು ಉತ್ತಮ ಅವಕಾಶವಿದೆ.

ಬಜೆಟ್ ನಲ್ಲಿ ಹಣಕಾಸು ಸಚಿವೆ ಘೋಷಿಸಿದ್ದೇನು?
ಈ ಬಾರಿಯ ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ವಿಶೇಷ ಘೋಷಣೆಗಳನ್ನು ಮಾಡಿದ್ದಾರೆ. ಈಗ ನೀವು ಸರ್ಕಾರದಿಂದ ಪ್ರತಿ ತಿಂಗಳು 70,500 ರೂ.ಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ಸರ್ಕಾರದಿಂದ ಅನೇಕ ಯೋಜನೆಗಳು ನಡೆಯುತ್ತಿವೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು.  ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದುಕೊಂಡರೆ, ನೀವು ಪ್ರತಿ ತಿಂಗಳು ಚೆನ್ನಾಗಿ ಗಳಿಕೆ ಮಾಡಬಹುದು, ಬನ್ನಿ ಹೇಗೆ ತಿಳಿದುಕೊಳ್ಳೋಣ.

ಸರ್ಕಾರದ ಯೋಜನೆಗಳಲ್ಲಿ ಹಲವು ವಿಧಗಳಿವೆ
ಪ್ರಸ್ತುತ, ಕೇಂದ್ರ ಸರ್ಕಾರದ ವತಿಯಿಂದ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS), ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಮತ್ತು ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ನಂತಹ  ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದ್ದು, ಇವುಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸಬಹುದು

ಪ್ರತಿ ತಿಂಗಳು 70,500 ರೂ
ಈ ಎಲ್ಲಾ ಯೋಜನೆಗಳಲ್ಲಿ ನೀವು ರೂ 1.1 ಕೋಟಿ ಹೂಡಿಕೆ ಮಾಡಿದರೆ, ಹಿರಿಯ ನಾಗರಿಕ ದಂಪತಿಗಳು ಸುಮಾರು ರೂ 70,500 ಮಾಸಿಕ ಆದಾಯವನ್ನು ಪಡೆಯಬಹುದು ಮತ್ತು ಹಿರಿಯ ನಾಗರಿಕರಿಗೆ ಇದೊಂದು ನಿಶ್ಚಿತ ಆದಾಯವಾಗಿದೆ. 

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ವೇತನದಲ್ಲಿ 1,20,000 ಹೆಚ್ಚಳ, ಮಾರ್ಚ್ ತಿಂಗಳ ವೇತನದಲ್ಲಿ ಸಿಗಲಿದೆ ಈ ಹಣ!

30 ಲಕ್ಷದವರೆಗೆ ಹೂಡಿಕೆ ಮಾಡಬಹುದು
ನೀವು SCSS ನಲ್ಲಿ 30 ಲಕ್ಷಗಳವರೆಗೆ ಹೂಡಿಕೆ ಮಾಡಬಹುದು. ಅಂದರೆ ನೀವು ಜಂಟಿ ಖಾತೆಯಲ್ಲಿ 60 ಲಕ್ಷದವರೆಗೆ ಠೇವಣಿ ಮಾಡಬಹುದು ಮತ್ತು ನೀವು 8% ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು. POMIS ಅಡಿಯಲ್ಲಿ, ನೀವು 9 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ಶೇಕಡಾ 7.1 ರಷ್ಟು ಬಡ್ಡಿ ದರದ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-Big Update: ದೇಶಾದ್ಯಂತ ಪಡಿತರ ವಿತರಣೆಗೆ ಹೊಸ ನಿಯಮ ಜಾರಿ! ನೀವೂ ತಿಳಿದುಕೊಳ್ಳಿ...

ಭಾರಿ ಬಡ್ಡಿ ಪಡೆಯುತ್ತಿದೆ
MSSC ಯೋಜನೆಯಲ್ಲಿ ನೀವು ಗರಿಷ್ಠ 2 ಲಕ್ಷಗಳನ್ನು ಹೂಡಿಕೆ ಮಾಡಬಹುದು, ಆದರೂ ಈ ಯೋಜನೆಯು ಮಹಿಳೆಯರಿಗೆ ಮಾತ್ರ. 7.5ರ ದರದಲ್ಲಿ ಇದಕ್ಕೆ ಬಡ್ಡಿ ಪಡೆಯಲಾಗುತ್ತಿದೆ. ನೀವು PMVVY ಯೋಜನೆಯ ಜಂಟಿ ಖಾತೆಯಲ್ಲಿ 30 ಲಕ್ಷದವರೆಗೆ ಹೂಡಿಕೆ ಮಾಡಬಹುದು ಮತ್ತು ಇದರಲ್ಲಿ ನೀವು ಶೇಕಡಾ 7.4 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News