ನವದೆಹಲಿ: ಭಾರತದಲ್ಲಿ ಚಿನ್ನದ ಬೆಲೆ ಸತತ ನಾಲ್ಕನೇ ದಿನವೂ ಇಳಿಕೆ ಕಂಡಿದೆ. ಶುಕ್ರವಾರ (ಏ.29) ದೇಶದ ಮಾರುಕಟ್ಟೆಯಲ್ಲಿ 10 ಗ್ರಾಂ.ನ 24 ಕ್ಯಾರೆಟ್ ಚಿನ್ನದ ಬೆಲೆ 52,370 ರೂ. ಆಗಿದ್ದರೆ, 10 ಗ್ರಾಂ.ನ 22 ಕ್ಯಾರೆಟ್ ಚಿನ್ನದ ಬೆಲೆ 48,000 ರೂ.ನಂತೆ ವಹಿವಾಟು ನಡೆಸುತ್ತಿದೆ.
ಕಳೆದ 24 ಗಂಟೆಗಳಲ್ಲಿ 10 ಗ್ರಾಂ ಚಿನ್ನದ ದರ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಕ್ರಮವಾಗಿ 490 ರೂ. ಮತ್ತು 450 ರೂ. ಇಳಿಕೆಯಾಗಿದೆ. ನಿನ್ನೆ ಅಂದರೆ ಗುರುವಾರ ಭಾರತದಲ್ಲಿ 24 ಕ್ಯಾರೆಟ್ ಚಿನ್ನ (10 ಗ್ರಾಂ)ದ ಬೆಲೆ 52,860 ರೂ. ಮತ್ತು 22 ಕ್ಯಾರೆಟ್ ಚಿನ್ನ (10 ಗ್ರಾಂ) 48,450 ರೂ. ಇತ್ತು.
ಇದನ್ನೂ ಓದಿ: New Wage Code : ವಾರಕ್ಕೆ ಸಿಗಲಿದೆ 3 ದಿನ ರಜೆ ! ಹೊಸ ವೇತನ ಸಂಹಿತೆ ಜಾರಿ ಬಗ್ಗೆ ಏನು ಹೇಳುತ್ತದೆ ಸರ್ಕಾರ ?
ಕಳೆದ 24 ಗಂಟೆಗಳಲ್ಲಿ ಭಾರತದ ವಿವಿಧ ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಳಿತ ಕಂಡುಬಂದಿದೆ. ಇಂದು ಚೆನ್ನೈನಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 52,900 ರೂ.ಗಳಾಗಿದ್ದು, 22 ಕ್ಯಾರೆಟ್ (10 ಗ್ರಾಂ) 48,500 ರೂ. ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 52,370 ರೂ ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) 48,000 ರೂ. ಆಗಿದೆ. ಕೋಲ್ಕತ್ತಾದಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 52,370 ರೂ. ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) 48,000 ರೂ.ನಂತೆ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 52,370 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನ (10 ಗ್ರಾಂ) 48,000 ರೂ. ಆಗಿದೆ.
ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ ಗಮನಕ್ಕೆ : ಫಿಟ್‌ಮೆಂಟ್ ಫ್ಯಾಕ್ಟರ್‌ನಲ್ಲಿಲ್ಲ ಯಾವುದೇ ಬದಲಾವಣೆ!
ಭುವನೇಶ್ವರದಲ್ಲಿ ಶುಕ್ರವಾರದಂದು 24 ಕ್ಯಾರೆಟ್ ಚಿನ್ನ (10 ಗ್ರಾಂ) 52,370 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನ (10 ಗ್ರಾಂ) 48,000 ರೂ. ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.