Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ

ಚಿನ್ನದ ಹಾಲ್‌ಮಾರ್ಕಿಂಗ್ ಅನುಷ್ಠಾನ ನಿಯಮವನ್ನು ಕಡ್ಡಾಯಗೊಳಿಸುವ ದಿನಾಂಕದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.  2021ರ ಜನವರಿ 15 ರಿಂದ ಚಿನ್ನದ ಆಭರಣಗಳ ಮೇಲೆ ಕಡ್ಡಾಯವಾಗಿ ಹಾಲ್ಮಾರ್ಕಿಂಗ್ ಅನ್ವಯವಾಗಲಿದೆ ಎಂದು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈಗ ಇದನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು 1 ಜುಲೈ 2021 ರವರೆಗೆ ವಿಸ್ತರಿಸಲಾಗಿದೆ.

Written by - Yashaswini V | Last Updated : Oct 12, 2020, 02:30 PM IST
  • ಚಿನ್ನದ ಹಾಲ್‌ಮಾರ್ಕಿಂಗ್ ಅಥವಾ ಗೋಲ್ಡ್ ಹಾಲ್‌ಮಾರ್ಕಿಂಗ್ ಚಿನ್ನದ ಶುದ್ಧತೆಗೆ ಪುರಾವೆಯಾಗಿದೆ.
  • ನೀವು ಆಭರಣಕಾರರಿಂದ ಚಿನ್ನದ ಆಭರಣಗಳನ್ನು ಖರೀದಿಸಿದಾಗ, ಅದು ಎಷ್ಟು ಶುದ್ಧವಾಗಿದೆ ಎಂದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ, ಚಿನ್ನದ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುವುದಾಗಿ ಸರ್ಕಾರ ಘೋಷಿಸಿತು.
  • ಚಿನ್ನದ ಹಾಲ್‌ಮಾರ್ಕಿಂಗ್ ಅನುಷ್ಠಾನ ನಿಯಮವನ್ನು ಕಡ್ಡಾಯಗೊಳಿಸುವ ದಿನಾಂಕದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.
Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ title=

ನವದೆಹಲಿ: ಗೋಲ್ಡ್ ಹಾಲ್‌ಮಾರ್ಕಿಂಗ್ ಅನುಷ್ಠಾನದ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಈಗ ಚಿನ್ನದ (Gold) ಆಭರಣಗಳ ಮೇಲೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುವ ನಿಯಮ 2021ರ ಜನವರಿ 15ರ ಬದಲಿಗೆ 1 ಜುಲೈ 2021ರಿಂದ ಜಾರಿಗೆ ಬರಲಿದೆ. ಅಂದರೆ ಇದೀಗ ಆಭರಣ ವ್ಯಾಪಾರಿಗಳಿಗೆ 6.5 ತಿಂಗಳು ಹೆಚ್ಚು ಸಮಯ ಸಿಕ್ಕಂತಾಗಿದೆ.

ಗೋಲ್ಡ್ ಹಾಲ್‌ಮಾರ್ಕಿಂಗ್ ಕಡ್ಡಾಯ ನಿಯಮವನ್ನು ಮುಂದೂಡುವಂತೆ ಮನವಿ ಮಾಡಿದ್ದ ಜ್ಯುವೆಲ್ಲರ್ಸ್: 
ವಾಸ್ತವವಾಗಿ ಆಭರಣ ತಯಾರಕರು ನಿಗದಿತ ಸಮಯದೊಳಗೆ ತಮ್ಮನ್ನು ಬಿಐಎಸ್ (BIS) ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗಿತ್ತು, ಆದರೆ ಬಹಳಷ್ಟು ಮಂದಿ ಆಭರಣ ತಯಾರಕರು ನಿಗದಿತ ಸಮಯದೊಳಗೆ ತಮ್ಮನ್ನು ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಆಭರಣ ತಯಾರಕರು ಗಡುವನ್ನು ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇದಲ್ಲದೆ  ಇಷ್ಟು ಕಡಿಮೆ ಸಮಯದಲ್ಲಿ ಅಸ್ತಿತ್ವದಲ್ಲಿರುವ ಸ್ಟಾಕ್ ಅನ್ನು ಮಾರಾಟ ಮಾಡುವುದು ಸುಲಭವಲ್ಲ ಎಂದು ಜ್ಯುವೆಲ್ಲರ್ಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರವು ಗಡುವನ್ನು 1 ಜೂನ್ 2021ರವರೆಗೆ ವಿಸ್ತರಿಸಿದೆ ಎಂದು ಹೇಳಲಾಗುತ್ತಿದೆ.  

ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಸರ್ಕಾರದಿಂದ ಸುವರ್ಣಾವಕಾಶ

ಗೋಲ್ಡ್ ಹಾಲ್ಮಾರ್ಕಿಂಗ್ ಎಂದರೇನು?
ನೀವು ಆಭರಣಕಾರರಿಂದ ಚಿನ್ನದ ಆಭರಣಗಳನ್ನು ಖರೀದಿಸಿದಾಗ, ಅದು ಎಷ್ಟು ಶುದ್ಧವಾಗಿದೆ ಎಂದು ನಿಮಗೆ ತಿಳಿದಿರುವುದಿಲ್ಲ.  ಆದ್ದರಿಂದ, ಚಿನ್ನದ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುವುದಾಗಿ ಸರ್ಕಾರ ಘೋಷಿಸಿತು. ಹಾಲ್ಮಾರ್ಕಿಂಗ್ (Hallmark) ಚಿನ್ನದ ಶುದ್ಧತೆಯನ್ನು ತಿಳಿಯಲು ಒಂದು ಮಾರ್ಗವಾಗಿದೆ. ಬಿಐಎಸ್ (Bureau of Indian Standards) ಚಿನ್ನದ ಶುದ್ಧತೆಯ ಪ್ರಮಾಣಪತ್ರವನ್ನು ನೀಡುತ್ತದೆ. ಹಾಲ್ಮಾರ್ಕ್ ಮಾಡಿದ ಆಭರಣಗಳನ್ನು ಬಿಐಎಸ್ನೊಂದಿಗೆ ಮುದ್ರಿಸಲಾಗಿದೆ. ಆಭರಣ ಹಾಲ್ಮಾರ್ಕಿಂಗ್ನಲ್ಲಿ ಅನೇಕ ರೀತಿಯ ಮಾಹಿತಿಯನ್ನು ಬರೆಯಲಾಗಿದೆ. ಉದಾಹರಣೆಗೆ, ಯಾವ ವರ್ಷದಲ್ಲಿ ಆಭರಣಗಳನ್ನು ತಯಾರಿಸಲಾಗುತ್ತದೆ ಮತ್ತು ಯಾವ ವರ್ಷದ ಹಾಲ್ಮಾರ್ಕಿಂಗ್ ನಡೆಯಿತು, ಹಾಲ್ಮಾರ್ಕಿಂಗ್ ಕೇಂದ್ರ ಯಾವುದು, ಎಷ್ಟು ಕ್ಯಾರೆಟ್ ಶುದ್ಧತೆ ಎಂಬುದರ ಪೂರ್ಣ ವಿವರ ಇದರಲ್ಲಿ ಲಭ್ಯವಿರಲಿದೆ.

ಗೋಲ್ಡ್ ಹಾಲ್‌ಮಾರ್ಕಿಂಗ್ ಏಕೆ ಮುಖ್ಯ?

  • ಚಿನ್ನದ ಹಾಲ್‌ಮಾರ್ಕಿಂಗ್ ಅಥವಾ ಗೋಲ್ಡ್ ಹಾಲ್‌ಮಾರ್ಕಿಂಗ್ ಚಿನ್ನದ ಶುದ್ಧತೆಗೆ ಪುರಾವೆಯಾಗಿದೆ. ಚಿನ್ನದ ಹಾಲ್‌ಮಾರ್ಕಿಂಗ್ ಅನುಷ್ಠಾನ ನಿಯಮವನ್ನು ಕಡ್ಡಾಯಗೊಳಿಸುವುದರಿಂದ ಒಂದೊಮ್ಮೆ ಹಾಲ್ಮಾರ್ಕ್ ಸರಿಯಾಗಿಲ್ಲದಿದ್ದರೆ, ಆಭರಣ ವ್ಯಾಪಾರಿಗಳಿಗೆ ನೋಟಿಸ್ ಸಹ ನೀಡಲು ಅವಕಾಶವಿರುತ್ತದೆ. 
  • ಯಾವುದೇ ಆಭರಣ ವ್ಯಾಪಾರಿ ಹಾಲ್ಮಾರ್ಕ್ ಇಲ್ಲದೆ ಚಿನ್ನವನ್ನು ಮಾರಾಟ ಮಾಡುತ್ತಿದ್ದರೆ ಅವನಿಗೆ 1 ಲಕ್ಷ ರೂ.ಗಳವರೆಗೆ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. 
  • ಗೋಲ್ಡ್ ಹಾಲ್ಮಾರ್ಕಿಂಗ್ 14, 18, 22 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡುತ್ತದೆ. 
  • ಚಿನ್ನದ ಹಾಲ್ಮಾರ್ಕಿಂಗ್ಗಾಗಿ ಸರ್ಕಾರವು ಸಂಪೂರ್ಣವಾಗಿ ಸಿದ್ಧವಾಗಿದೆ.

ಮನೆಯಲ್ಲಿರುವ ಚಿನ್ನದಿಂದ ಗಳಿಸಲು ದೊಡ್ಡ ಅವಕಾಶ, ದೇಶದ ಅತಿದೊಡ್ಡ ಬ್ಯಾಂಕಿನಿಂದ ಸಿಗಲಿದೆ ಡಬಲ್ ಲಾಭ

Trending News