Gold Hallmarking ನಿಯಮಗಳಲ್ಲಿ ಬದಲಾವಣೆ ! ಇಂದು ಸಂಜೆ ಸರ್ಕಾರದ ಈ ತೀರ್ಮಾನ ಸಾಧ್ಯತೆ

Gold Hallmarking Latest News: ಚಿನ್ನಾಭರಣ ಖರೀದಿಯಲ್ಲಿನ ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರ (PM Modi Government) ಚಿನ್ನದ ಹಾಲ್‌ಮಾರ್ಕಿಂಗ್ (Gold Hallmarking) ಕಡ್ಡಾಯಗೊಳಿಸಿದೆ. ಹೊಸ ನಿಯಮಗಳು ಜೂನ್ 16 ರಿಂದ ಜಾರಿಗೆ ಬರಲಿವೆ.

Written by - Nitin Tabib | Last Updated : Jun 15, 2021, 04:53 PM IST
  • ಚಿನ್ನಾಭರಣ ಹಾಲ್ಮಾರ್ಕಿಂಗ್ ಕುರಿತು ಇಂದು ಸಂಜೆ ಮಹತ್ವದ ಸಭೆ.
  • ಈ ಸಭೆಯಲ್ಲಿ ಹಾಲ್ಮಾರ್ಕಿಂಗ್ ನಲ್ಲಿ 20 ಮತ್ತು 24 ಕ್ಯಾರೆಟ್ ಶಾಮೀಳುಗೊಳಿಸುವ ಸಾಧ್ಯತೆ.
  • ಇನ್ಫ್ರಾ ಸಿದ್ಧತೆಗಳು ಪೂರ್ಣಗೊಳ್ಳದ ಹಿನ್ನೆಲೆ ಮತ್ತೊಮ್ಮೆ ದಿನಾಂಕ ವಿಸ್ತರಣೆಯಾಗುತ್ತಾ ಕಾದುನೋಡೋಣ.
Gold Hallmarking ನಿಯಮಗಳಲ್ಲಿ ಬದಲಾವಣೆ ! ಇಂದು ಸಂಜೆ ಸರ್ಕಾರದ ಈ ತೀರ್ಮಾನ ಸಾಧ್ಯತೆ title=
Gold Hallmarking Latest News (File Photo)

Gold Hallmarking Latest News: ಚಿನ್ನಾಭರಣ ಖರೀದಿಯಲ್ಲಿನ ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರ (Central Government) ಚಿನ್ನದ ಹಾಲ್‌ಮಾರ್ಕಿಂಗ್ (Gold Hallmarking) ಕಡ್ಡಾಯಗೊಳಿಸಿದೆ. ಹೊಸ ನಿಯಮಗಳು ಜೂನ್ 16 ರಿಂದ ಜಾರಿಗೆ ಬರಲಿವೆ. ಆದರೆ, ಏತನ್ಮಧ್ಯೆ, ದೊಡ್ಡ ಸುದ್ದಿ ಏನೆಂದರೆ, ಇಂದು ಸಂಜೆ ಕೇಂದ್ರ ಸರ್ಕಾರ (Government) ಮತ್ತು ಮಧ್ಯಸ್ಥಗಾರರ (Stakeholders) ನಡುವೆ ಮಹತ್ವದ ಸಭೆ ನಡೆಯಲಿದೆ.  ಇದಾದ ಬಳಿಕ ಬಿಐಎಸ್-ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (Bureau Of Indian Standards) ಹಾಲ್ಮಾರ್ಕಿಂಗ್ ಹೊಂದಿರುವ ಚಿನ್ನದ ಆಭರಣಗಳನ್ನು ಮಾತ್ರ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹಾಲ್ಮಾರ್ಕಿಂಗ್ ಜಾರಿಗೆ ಬಂದ ಮೇಲೆ ಕೇವಲ 22 ಕ್ಯಾರೆಟ್, 18 ಕ್ಯಾರೆಟ್, 14 ಕ್ಯಾರೆಟ್ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ, ಮೂಲಗಳ ನೀಡಿರುವ ವರದಿಗಳ ಪ್ರಕಾರ ಇದರಲ್ಲಿ, ಇನ್ನೂ 2 ಬಗೆಯ ಕ್ಯಾರೆಟ್‌ಗಳನ್ನು ಸೇರಿಸುವ ಸಾಧ್ಯತೆ ಇದೆ.

Infra ರೆಡಿಯಾಗಿಲ್ಲ, ನಿಯಮಗಳ ಅನುಷ್ಠಾನದಲ್ಲಿ ತೊಂದರೆ ಎದುರಾಗುವ ಸಾಧ್ಯತೆ
ಮೂಲಗಳ ಪ್ರಕಾರ, ಗೋಲ್ಡ್ ಹಾಲ್ಮಾರ್ಕ್ (Gold Hallmarking Rule) ನಿಯಮದ ಅನುಷ್ಠಾನದ ದಿನಾಂಕವನ್ನು ವಿಸ್ತರಿಸಲು ಸಭೆ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ, ಇತರ ನಿಯಮಗಳಲ್ಲೂ ಬದಲಾವಣೆಯ ಸಾಧ್ಯತೆಯಿದೆ. ಜೂನ್ 16 ರಿಂದ, ಚಿನ್ನಾಭರಣಗಳು ಅಥವಾ ಕಲಾಕೃತಿಗಳ ಮೇಲೆ ಕಡ್ಡಾಯ ಹಾಲ್ಮಾರ್ಕಿಂಗ್ ನಿಯಮವನ್ನು ದೇಶಾದ್ಯಂತ ಜಾರಿಗೆ ತರಬೇಕಾಗಿದೆ. ಆದರೆ, ಸದ್ಯಕ್ಕೆ ಈ ಗಡುವನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಸ್ಟೆಕ್ ಹೊಲ್ದರ್ಸ್ ಗಳು  ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದೇಶದ ನೂರಾರು ಜಿಲ್ಲೆಗಳಲ್ಲಿ ಹಾಲ್‌ಮಾರ್ಕಿಂಗ್‌ಗೆ ಅಗತ್ಯವಾದ ಲ್ಯಾಬ್ / ಇನ್ಫ್ರಾ ಇನ್ನೂ ಸಿದ್ಧವಾಗಿಲ್ಲ, ಇದರಿಂದಾಗಿ ಈ ನಿಯಮಗಳನ್ನು ಜಾರಿಗೆ ತರುವುದು ಸ್ವಲ್ಪ ಕಷ್ಟವಾಗಲಿದೆ ಎಂಬುದು ಸ್ಟೆಕ್ ಹೋಲ್ಡರ್ ಗಳ ವಾದ. 

ಇದನ್ನೂ ಓದಿ-Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ

ಸಮಿತಿ ಸಭೆಯಲ್ಲಿ ಪ್ರಮುಖ ನಿರ್ಣಯ ಸಾಧ್ಯತೆ
ಜೂನ್ 15 ರಿಂದ ಆಭರಣಗಳನ್ನು ಮಾರಾಟ ಮಾಡುವ ಹೊಸ ವ್ಯವಸ್ಥೆ ರೂಪಿಸಲು ಸರ್ಕಾರ (Modi Government) ಸಮಿತಿ ರಚಿಸಿದೆ. ಹಾಲ್ಮಾರ್ಕಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸಲು, ನಿರ್ಧರಿಸಲು ಮತ್ತು ಪರಿಹರಿಸಲು ಈ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ 20 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಹಾಲ್ಮಾರ್ಕಿಂಗ್ ಬಗ್ಗೆಯೂ ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. 

ಇದನ್ನೂ ಓದಿ-PAN-Aadhaar Link: ಜೂನ್ 30ರೊಳಗೆ ಕೆಲಸ ಈ ಮಾಡದಿದ್ದಲ್ಲಿ ತೆರಬೇಕಾಗುತ್ತದೆ ಭಾರೀ ದಂಡ

ಹಲವು ಬಾರಿ ನಿಯಮ ಅನುಷ್ಠಾನದ ದಿನಾಂಕ ಮುಂದೂಡಲಾಗಿದೆ
ಚಿನ್ನದ ಆಭರಣಗಳನ್ನು ಮಾರಾಟ ಮಾಡುವ ಹೊಸ ವ್ಯವಸ್ಥೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಗ್ರಾಹಕರ ಹಿತದೃಷ್ಟಿಯಿಂದ ಹಾಲ್ಮಾರ್ಕಿಂಗ್ ಅಗತ್ಯ ಎಂದು ಸರ್ಕಾರ ಹೇಳಿದೆ. ಕಡ್ಡಾಯ ಹಾಲ್ಮಾರ್ಕಿಂಗ್ ನಿಯಮಗಳ ಅನುಷ್ಠಾನದ ದಿನಾಂಕವನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಇದನ್ನು ಈ ವರ್ಷದ ಜನವರಿಯಲ್ಲಿ ಜಾರಿಗೆ ತರಬೇಕಿತ್ತು. ಆದರೆ, ಕರೋನಾ ಪ್ರಕೋಪದ ಹಿನ್ನೆಲೆ ದಿನಾಂಕ ಜೂನ್ 1 ಕ್ಕೆ ಮತ್ತು ನಂತರ ಜೂನ್ 15 ಕ್ಕೆ ವಿಸ್ತರಿಸಲಾಗಿತ್ತು. ಆದರೆ, ಇದೀಗ ಮತ್ತೊಮ್ಮೆ ಅದರ ದಿನಾಂಕವನ್ನು ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News