Gold Hallmarking: ನಾಳೆಯಿಂದ ಜಾರಿಗೆ ಬರಲಿದೆ ಈ ಕಡ್ಡಾಯ ನಿಯಮ, ಇಲ್ಲಿದೆ ಡೀಟೇಲ್ಸ್

Gold Hallmarking: ಜೂನ್ 15 ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮೇಲೆ ಹಾಲ್ಮಾರ್ಕಿಂಗ್ (Hallmarking) ಕಡ್ಡಾಯಗೊಳಿಸಲಾಗುತ್ತಿದೆ. ಸುಮಾರು ಒಂದೂವರೆ ವರ್ಷಗಳ ಸುದೀರ್ಘ ನಿರೀಕ್ಷೆಯ ಬಳಿಕ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಚಿನ್ನದ ಹಾಲ್ಮಾರ್ಕಿಂಗ್ (Gold Halmarking Mandatory) ಅನುಷ್ಠಾನದ ನಂತರ, ಗ್ರಾಹಕರಿಗೆ ಹಲವು ರೀತಿಯ ಪ್ರಯೋಜನಗಳು ಸಿಗಲಿವೆ.

Written by - Nitin Tabib | Last Updated : Jun 14, 2021, 01:35 PM IST
  • ನಾಳೆಯಿಂದ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕಿಂಗ್ ಕಡ್ಡಾಯ.
  • ಏನಿದು ಗೋಲ್ಡ್ ಹಾಲ್ಮಾರ್ಕಿಂಗ್ ?
  • ಎಷ್ಟು ಪರಿಶುದ್ಧತೆಯ ಚಿನ್ನವನ್ನು ಹಾಲ್ಮಾರ್ಕಿಂಗ್ ಗೆ ಪರಿಗಣಿಸಲಾಗುವುದು?
Gold Hallmarking: ನಾಳೆಯಿಂದ ಜಾರಿಗೆ ಬರಲಿದೆ ಈ ಕಡ್ಡಾಯ ನಿಯಮ,  ಇಲ್ಲಿದೆ ಡೀಟೇಲ್ಸ್  title=
Hallmarking Of Gold (File Photo)

Gold Hallmarking - ಜೂನ್ 15 ರಿಂದ ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಲಾಗುತ್ತಿದೆ. ಹೀಗಿರುವಾಗ, ಒಂದು ವೇಳೆ  ನೀವೂ ಚಿನ್ನವನ್ನು ಖರೀದಿಸಲು ಬಯಸಿದರೆ, ಅದರ ಖರೀದಿಯ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂಬುದು ನಿಮಗೆ ಗೊತ್ತಿರಲಿ. ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಶುದ್ಧತೆಯನ್ನು ಗುರುತಿಸಲು ಸರ್ಕಾರವು ಬಿಐಎಸ್ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸಲಿದೆ(Gold Halmarking Mandatory For Jewelers).

ಚಿನ್ನದ ಹಾಲ್‌ಮಾರ್ಕಿಂಗ್‌ಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು (Government Of India) ಸುಮಾರು ಒಂದೂವರೆ ವರ್ಷಗಳ ಹಿಂದೆ ತನ್ನ ನೀಲನಕ್ಷೆಯನ್ನು ಪ್ರಸ್ತುತ ಪಡಿಸಿ, ಅದಕ್ಕೆ ಸಂಬಂಧಿಸಿದಂತೆ  ಆದೇಶ ಹೊರಡಿಸಿತ್ತು. ಆದರೆ, ಕರೋನಾದಿಂದಾಗಿ (Corona Pandemic) ಈ ಆದೇಶವನ್ನು ಕಾರ್ಯಗತಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ.

BIS Hallmarking On Gold - ಇದೀಗ  ಹೊಸ ಆದೇಶದ ಪ್ರಕಾರ, ಜೂನ್ 15 ರಿಂದ ಎಲ್ಲಾ ಆಭರಣ ವ್ಯಾಪಾರಿಗಳಿಗೆ ಚಿನ್ನದ (Gold) ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಲಾಗಿದೆ. ಸರ್ಕಾರ ನೀಡಿರುವ ಸೂಚನೆಯಲ್ಲಿ, ಇನ್ಮುಂದೆ ಅಂಗಡಿಯವರು ಬಿಐಎಸ್ ಪ್ರಮಾಣೀಕೃತ (BIS Certified Gold) ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ-Driving License: ಜುಲೈ 1 ರಿಂದ ಚಾಲನಾ ಪರವಾನಗಿಗಾಗಿ ಹೊಸ ನಿಯಮ, ಈಗ ಟೆಸ್ಟ್ ಇಲ್ಲದೆ ಸಿಗುತ್ತೆ DL

ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಿರುವುದರ ಕುರಿತು ಸಾಮಾನ್ಯ ಜನರ ಮನಸ್ಸಿನಲ್ಲಿ ಹಲವು ರೀತಿಯ ಪ್ರಶ್ನೆಗಳಿವೆ. ಇದನ್ನು ಮಾಡುವುದರಿಂದ ಅವರಿಗೆ ಏನು ಪ್ರಯೋಜನ? (Benefits Of Gold Hallmarking) ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಉದ್ಭವಿಸುತ್ತಿದೆ. ಮನೆಯಲ್ಲಿ ಇರಿಸಲಾಗಿರುವ ಆಭರಣಗಳು ಏನಾಗಲಿವೆ?  ಹಾಗಾದರೆ ಬನ್ನಿ ಇಂತಹುದೇ ಕೆಲ ಪ್ರಶ್ನೆಗಳಿಗೆ ಉತ್ತರ ಏನು ಎಂಬುದನ್ನು ಕಂಡುಕೊಳ್ಳೋಣ.

ಇದನ್ನೂ ಓದಿ-Petrol-Diesel Price : ರಾಜ್ಯದಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ..!

ಏನಿದು ಗೋಲ್ಡ್ ಹಾಲ್ಮಾರ್ಕಿಂಗ್? (What Is Gold Hallmarking)
ಜನರ ಮನಸ್ಸಿನಲ್ಲಿರುವ ಮೊಟ್ಟಮೊದಲ ಪ್ರಶ್ನೆ ಎಂದರೆ, ಏನಿದು ಗೋಲ್ಡ್ ಹಾಲ್ಮಾರ್ಕಿಂಗ್? ಸರ್ಕಾರ ಹೊರಡಿಸಿರುವ ಈ ಆದೇಶದ ಪ್ರಕಾರ, ಎಲ್ಲಾ ಆಭರಣಕಾರರು ಚಿನ್ನದ ಆಭರಣ ಅಥವಾ ಕಲಾಕೃತಿಗಳನ್ನು ಮಾರಾಟ ಮಾಡಲು ಬಿಐಎಸ್ ಮಾನದಂಡಗಳನ್ನು (BIS Standards) ಪೂರೈಸಬೇಕಾಗಲಿದೆ. ಇದನ್ನೇ ಗೋಲ್ಡ್ ಹಾಲ್ಲ್ಮಾರ್ಕಿಂಗ್ ಎನ್ನಲಾಗುತ್ತದೆ. 

ಎಷ್ಟು ಪರಿಶುದ್ಧತೆಯ ಚಿನ್ನವನ್ನು (Pure Gold) ಹಾಲ್ಪಾರ್ಕಿಂಗ್ ಗೆ ಪರಿಗಣಿಸಲಾಗುವುದು?
ನಿಮ್ಮ ಬಳಿ ಇರುವ 14 ಕ್ಯಾರೆಟ್, 18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಶುದ್ಧ ಚಿನ್ನಕ್ಕೆ ಹಾಲ್ಮಾರ್ಕಿಂಗ್ ಮಾಡಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ-Good News : ಈ ಮೂರು ಬ್ಯಾಂಕುಗಳಲ್ಲಿ ನಿಮ್ಮ ಖಾತೆ ಇದ್ದರೆ, ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ ಶುಲ್ಕ ಇಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News