ಚಿನ್ನ ಖರೀದಿಗೆ ಇದುವೇ ಬೆಸ್ಟ್ ಟೈಂ… 10 ಗ್ರಾಂ ಬಂಗಾರದ ದರ ಹೇಗಿದೆ ಗೊತ್ತಾ?

Gold and silver Rates Today: ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದ್ದು ಬಿಟ್ಟರೆ, 22 ಕ್ಯಾರೆಟ್ ಬಂಗಾರದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು ಅಮೆರಿಕದಲ್ಲಿ ಚಿನ್ನ ಬೆಲೆ ಏರಿದರೆ, ದುಬೈನಲ್ಲಿ ಕಡಿಮೆ ಆಗಿದೆ.

Written by - Bhavishya Shetty | Last Updated : Sep 21, 2023, 08:30 AM IST
    • ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದೆ
    • ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದರೆ, ಬೆಳ್ಳಿ ಬೆಲೆ ಕೊಂಚ ಇಳಿಕೆ ಕಂಡಿದೆ
    • ಇನ್ನೊಂದೆಡೆ ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗುವ ಸಾಧ್ಯತೆ ಇದೆ
ಚಿನ್ನ ಖರೀದಿಗೆ ಇದುವೇ ಬೆಸ್ಟ್ ಟೈಂ… 10 ಗ್ರಾಂ ಬಂಗಾರದ ದರ ಹೇಗಿದೆ ಗೊತ್ತಾ?  title=
gold price

Gold and silver Rates Today: ಕಳೆದ ಕೆಲ ದಿನಗಳಿಂದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿತ್ತು. ಆದರೆ ಇಂದು ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದರೆ, ಬೆಳ್ಳಿ ಬೆಲೆ ಕೊಂಚ ಇಳಿಕೆ ಕಂಡಿದೆ.

ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದ್ದು ಬಿಟ್ಟರೆ, 22 ಕ್ಯಾರೆಟ್ ಬಂಗಾರದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು ಅಮೆರಿಕದಲ್ಲಿ ಚಿನ್ನ ಬೆಲೆ ಏರಿದರೆ, ದುಬೈನಲ್ಲಿ ಕಡಿಮೆ ಆಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್​ ನೂತನ ನಿರ್ಧಾರ ಪ್ರಕಟವಾಗುವವರೆಗೆ ದೇಶದಲ್ಲಿ ಚಿನ್ನದ ಬೆಲೆ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: Horoscope: ಇಂದು ಈ ರಾಶಿಯವರಿಗೆ ಲಕ್ಷ್ಮೀಪತಿ ಒಲಿಯುವ ದಿನ: ವೃತ್ತಿಯಲ್ಲಿ ಭಾರೀ ಯಶಸ್ಸು

ಇನ್ನೊಂದೆಡೆ ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗುವ ಸಾಧ್ಯತೆ ಇದೆ. ತಜ್ಞರ ಪ್ರಕಾರ ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು. ಹೀಗಾಗಿ ಗ್ರಾಹಕರಿಗೆ ಚಿನ್ನ ಖರೀದಿಸಲು ಇದುವೇ ಸೂಕ್ತ ಸಮಯವಾಗಿದೆ.

ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,200 ರುಪಾಯಿ ಇದ್ದರೆ, 24 ಕ್ಯಾರೆಟ್​ ಚಿನ್ನದ ಬೆಲೆ 60,230 ರೂ. ಆಗಿದೆ. ಮತ್ತೊಂದೆಡೆ 100 ಗ್ರಾಂ ಬೆಳ್ಳಿ ಬೆಲೆ 7,450 ರುಪಾಯಿ ಇದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ​ಗೆ 55,200 ರುಪಾಯಿ ಆಗಿದ್ದರೆ, ಬೆಳ್ಳಿ ಬೆಲೆ 100 ಗ್ರಾಂಗೆ 7,425 ರುಪಾಯಿಯಲ್ಲಿ ಇದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಂ):

  • 22 ಕ್ಯಾರೆಟ್​ ಚಿನ್ನದ ಬೆಲೆ: 55,200 ರೂ
  • 24 ಕ್ಯಾರೆಟ್​ ಚಿನ್ನದ ಬೆಲೆ: 60,230 ರೂ
  • ಬೆಳ್ಳಿ ಬೆಲೆ: 745 ರೂ

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ (10 ಗ್ರಾಂ):

  • 22 ಕ್ಯಾರೆಟ್​ ಚಿನ್ನದ ಬೆಲೆ: 55,200 ರೂ
  • 24 ಕ್ಯಾರೆಟ್​ ಚಿನ್ನದ ಬೆಲೆ: 60,220 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 742.5 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,200 ರೂ
  • ಚೆನ್ನೈ: 55,500 ರೂ
  • ಮುಂಬೈ: 55,200 ರೂ
  • ದೆಹಲಿ: 55,350 ರೂ
  • ಕೇರಳ: 55,200 ರೂ
  • ಭುವನೇಶ್ವರ್: 55,200 ರೂ

ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರೆಟ್-10 ಗ್ರಾಂ):

  • ಮಲೇಷ್ಯಾ: 2,850 ರಿಂಗಿಟ್ (50,493 ರುಪಾಯಿ)
  • ದುಬೈ: 2162.50 ಡಿರಾಮ್ (48,914 ರುಪಾಯಿ)
  • ಅಮೆರಿಕ: 595 ಡಾಲರ್ (49,437 ರುಪಾಯಿ)
  • ಸಿಂಗಾಪುರ: 820 ಸಿಂಗಾಪುರ್ ಡಾಲರ್ (49,999 ರುಪಾಯಿ)
  • ಕತಾರ್: 2,235 ಕತಾರಿ ರಿಯಾಲ್ (51,007 ರೂ)
  • ಓಮನ್: 236 ಒಮಾನಿ ರಿಯಾಲ್ (51,000 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,425 ರೂ
  • ಚೆನ್ನೈ: 7,800 ರೂ
  • ಮುಂಬೈ: 7,450 ರೂ
  • ದೆಹಲಿ: 7,450 ರೂ
  • ಕೇರಳ: 7,800 ರೂ
  • ಭುವನೇಶ್ವರ್: 7,800 ರೂ

ಇದನ್ನೂ ಓದಿ:  ವಿಶ್ವಕಪ್’ಗೂ ಮುನ್ನ ಕೋಚ್ ಬದಲಾವಣೆ: ಹೊಸ ಕೋಚ್ ಆಗಿ ಈ ಅನುಭವಿ ಆಟಗಾರನ ನೇಮಕ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 8.30ರ ಸಮಯದಲ್ಲಿ ಇದ್ದ ಬೆಲೆಯನ್ನು ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್​’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News