Petrol- Diesel Price : ಈ ತಿಂಗಳಲ್ಲಿ 13 ಬಾರಿ ಇಂಧನ ಬೆಲೆ ಏರಿಕೆ : ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 103

 ಪೆಟ್ರೋಲ್ ಮತ್ತು ಡೀಸೆಲ್ ಬೆಲೆ  26 ಪೈಸೆ ಮತ್ತು 7 ಪೈಸೆ ಏರಿಕೆ

Last Updated : Jun 24, 2021, 11:05 AM IST
  • ಇಂದು ಇಂಧನ ದರವನ್ನು ಮತ್ತೊಮ್ಮೆ ಏರಿಕೆ ಆಗಿದೆ
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 26 ಪೈಸೆ ಮತ್ತು 7 ಪೈಸೆ ಏರಿಕೆ
  • ಮುಂಬೈಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 103.89 ರೂ.
Petrol- Diesel Price : ಈ ತಿಂಗಳಲ್ಲಿ 13 ಬಾರಿ ಇಂಧನ ಬೆಲೆ ಏರಿಕೆ : ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 103 title=

ನವದೆಹಲಿ : ಇಂದು ಇಂಧನ ದರವನ್ನು ಮತ್ತೊಮ್ಮೆ ಏರಿಕೆ ಆಗಿದೆ. ದೇಶೀಯ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಇತ್ತೀಚಿನ ಬೆಲೆ ಏರಿಕೆಯೊಂದಿಗೆ, ಪೆಟ್ರೋಲ್ ಮತ್ತು ಡೀಸೆಲ್ ನಾಲ್ಕು ಮೆಟ್ರೋ ನಗರಗಳಲ್ಲಿ ಈಗ 26 ಪೈಸೆ ಮತ್ತು 7 ಪೈಸೆ ಏರಿಕೆ ಆಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ( ಐಒಸಿಎಲ್) ತಿಳಿಸಿದೆ.

ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಿಂದ ಇಂಧನ ಬೆಲೆ(Fuel Prices)ಗಳು ಇತ್ತೀಚೆಗೆ ಏರಿಕೆಯಾಗುತ್ತಿವೆ, ಇದು ಪ್ರಸ್ತುತ ಬ್ಯಾರೆಲ್‌ಗೆ $ 75 ರಷ್ಟಿದೆ.

ಇದನ್ನೂ ಓದಿ : ಹಣದ ಅಗತ್ಯವಿದೆಯೇ? ಪಾಲಿಸಿ ಮೇಲೆ LIC ನೀಡುತ್ತಿದೆ ಕಡ್ಡಿಮೆ ಬಡ್ಡಿದರದ ಸಾಲ

ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ ಪೆಟ್ರೋಲ್‌(Petrol Prices)ಗೆ ಪ್ರತಿ ಲೀಟರ್‌ಗೆ 97.76 ರೂ., ಮುಂಬೈಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 103.89 ರೂ. ಕೋಲ್ಕತಾ ಮತ್ತು ಚೆನ್ನೈನಲ್ಲಿ ಬೆಲೆಗಳು ಪ್ರತಿ ಲೀಟರ್‌ಗೆ 97.63 ರೂ. ಮತ್ತು ಲೀಟರ್‌ಗೆ 98.88 ರೂ.

ಇದನ್ನೂ ಓದಿ : New Wage Code: ಇನ್ನು ಸಿಗಲಿದೆ 300 ದಿನಗಳ Earned Leave! ಮೂರು ದಿನಗಳ ವಾರದ ರಜೆ ?

ದೆಹಲಿಯ ಡೀಸೆಲ್ 90 ರೂಪಾಯಿ ಗಡಿ ತಲುಪಿದ್ದು, ಪ್ರತಿ ಲೀಟರ್‌ಗೆ 88.30 ರೂ., ಮುಂಬೈ(Mumbai) ಬೆಲೆ ಈಗ ಲೀಟರ್‌ಗೆ 95.79 ರೂ. ಕೋಲ್ಕತ್ತಾದ ಡೀಸೆಲ್ ನಿಮಗೆ ಪ್ರತಿ ಲೀಟರ್‌ಗೆ 91.15 ರೂ. ಮತ್ತು ಚೆನ್ನೈನಲ್ಲಿ ಈಗ ಪ್ರತಿ ಲೀಟರ್‌ಗೆ 92.89 ರೂ.

ಇದನ್ನೂ ಓದಿ : EPFO: 6 ಕೋಟಿ ಇಪಿಎಫ್‌ಒ ಚಂದಾದಾರರಿಗೆ ಮಹತ್ವದ ಮಾಹಿತಿ! ಪಿಂಚಣಿ, ಪಿಎಫ್ ಖಾತೆಗಳು ಪ್ರತ್ಯೇಕವಾಗಬಹುದು, ಕಾರಣವೇನು ಗೊತ್ತೇ?

ಜೂನ್(June) ತಿಂಗಳಲ್ಲಿ ಒಟ್ಟು 13 ನೇ ಭಾರಿಗೆ ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಮತ್ತು ಲಡಾಕ್‌ನಲ್ಲಿ ಪ್ರತಿ ಲೀಟರ್‌ಗೆ 100 ರೂ.

ಇದನ್ನೂ ಓದಿ : ಉದ್ಯೋಗ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ESIC ಯೋಜನೆ ಮೂಲಕ ಸಿಗಲಿದೆ ನಿರುದ್ಯೋಗ ಭತ್ಯೆ

ಪಾಟ್ನಾ ಪೆಟ್ರೋಲ್(Petrol) (₹ 99.80) ಮತ್ತು ತಿರುವನಂತಪುರಂ (₹ 99.74) ನಲ್ಲಿನ ಬೆಲೆಗಳಂತೆ ಬಿಹಾರ ಮತ್ತು ಕೇರಳ ಇನ್ನೂ ಎರಡು ರಾಜ್ಯಗಳು ಈ ಮೇಲಿನ ರಾಜ್ಯಗಳು ಮತ್ತು ಯುಟಿಗಳಿಗೆ ಸೇರಲು ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News