Free Hongkong Trip: ಉಚಿತವಾಗಿ ಹಾಂಕಾಗ್ ಸುತ್ತುವ ಅವಕಾಶ, 5 ಲಕ್ಷ ಟಿಕೆಟ್ ಗಳು ಉಚಿತ, ಈ ರೀತಿ ಅಪ್ಪ್ಲೈ ಮಾಡಿ

Free Hong Kong Tour: ಕರೋನಾ ಮಹಾಮಾರಿಯ ಮೊದಲು, ಪ್ರತಿ ವರ್ಷ ಸುಮಾರು 50 ಮಿಲಿಯನ್ ಜನರು ಹಾಂಗ್ ಕಾಂಗ್‌ಗೆ ಭೇಟಿ ನೀಡುತ್ತಿದ್ದರು, ಆದರೆ ಕಳೆದ ಎರಡು ವರ್ಷಗಳಲ್ಲಿ, ಹಾಂಗ್ ಕಾಂಗ್ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿತ್ತು, ಇದು ಅದರ ವಿಮಾನಯಾನ ಸಂಸ್ಥೆಗಳಿಗೆ ಭಾರಿ ನಷ್ಟವನ್ನು ಉಂಟು ಮಾಡಿದೆ  

Last Updated : Oct 11, 2022, 06:12 PM IST
  • ಕರೋನಾ ಸಾಂಕ್ರಾಮಿಕ ರೋಗದ ಮೊದಲು, ಪ್ರತಿ ವರ್ಷ ಸುಮಾರು 50 ಮಿಲಿಯನ್ ಜನರು ಹಾಂಗ್ ಕಾಂಗ್‌ಗೆ ಭೇಟಿ ನೀಡುತ್ತಿದ್ದರು,
  • ಆದರೆ ಕಳೆದ ಎರಡು ವರ್ಷಗಳಲ್ಲಿ, ಹಾಂಗ್ ಕಾಂಗ್ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿತ್ತು,
  • ಇದು ಅದರ ವಿಮಾನಯಾನ ಸಂಸ್ಥೆಗಳಿಗೆ ಭಾರಿ ನಷ್ಟವನ್ನು ಉಂಟುಮಾಡಿತ್ತು.
Free Hongkong Trip: ಉಚಿತವಾಗಿ ಹಾಂಕಾಗ್ ಸುತ್ತುವ ಅವಕಾಶ, 5 ಲಕ್ಷ ಟಿಕೆಟ್ ಗಳು ಉಚಿತ, ಈ ರೀತಿ ಅಪ್ಪ್ಲೈ ಮಾಡಿ title=
Free Hong Kong Tour

Free Hongkong Trip: ಕರೋನಾ ಮಹಾಮಾರಿಯಿಂದ ಸೊರಗಿರುವ ಪ್ರವಾಸೋದ್ಯಮವನ್ನು ಮರಳಿ ಟ್ರ್ಯಾಕ್‌ಗೆ ತರಲು ಹಾಂಗ್ ಕಾಂಗ್ ಸರ್ಕಾರವು ಪ್ರವಾಸಿಗರಿಗೆ ಉಚಿತ ವಿಮಾನ ಟಿಕೆಟ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ. ಹಾಂಗ್ ಕಾಂಗ್ ಏರ್‌ಪೋರ್ಟ್ ಆಡಳಿತವು ಈ ಟಿಕೆಟ್‌ಗಳನ್ನು ವಿಶ್ವಾದ್ಯಂತದ ಜನರಿಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಎರಡು ವರ್ಷಗಳ ಹಿಂದೆ ವಿಮಾನ ನಿಲ್ದಾಣ ಆಡಳಿತ ಈ ಟಿಕೆಟ್‌ಗಳನ್ನು ಖರೀದಿಸಿತ್ತು. ಹಾಂಗ್ ಕಾಂಗ್ ಏರ್‌ಲೈನ್ಸ್ ಸೇವೆಗಳೊಂದಿಗೆ ಜನರನ್ನು ಸಂಪರ್ಕಿಸುವುದು ಮತ್ತು ಪ್ರವಾಸೋದ್ಯಮಕ್ಕಾಗಿ ಅದರ ಬಾಗಿಲುಗಳನ್ನು ಪುನಃ ತೆರೆಯುವುದು ಇದರ ಗುರಿಯಾಗಿದೆ. ಉಚಿತ ಟಿಕೆಟ್‌ಗಳ ಒಟ್ಟು ವೆಚ್ಚ ಸುಮಾರು 2,100 ಕೋಟಿ ರೂ.ಗಳಷ್ಟು ಆಗಿದೆ.

ಕರೋನಾ ಸಾಂಕ್ರಾಮಿಕ ರೋಗದ ಮೊದಲು, ಪ್ರತಿ ವರ್ಷ ಸುಮಾರು 50 ಮಿಲಿಯನ್ ಜನರು ಹಾಂಗ್ ಕಾಂಗ್‌ಗೆ ಭೇಟಿ ನೀಡುತ್ತಿದ್ದರು, ಆದರೆ ಕಳೆದ ಎರಡು ವರ್ಷಗಳಲ್ಲಿ, ಹಾಂಗ್ ಕಾಂಗ್ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿತ್ತು, ಇದು ಅದರ ವಿಮಾನಯಾನ ಸಂಸ್ಥೆಗಳಿಗೆ ಭಾರಿ ನಷ್ಟವನ್ನು ಉಂಟುಮಾಡಿತ್ತು. ಹಾಂಗ್ ಕಾಂಗ್ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಭೇಟಿ ನೀಡುವವರಿಗೆ ಹೋಟೆಲ್ ಕ್ವಾರಂಟೈನ್ ನಿಯಮಗಳನ್ನು ನಿಷೇಧಿಸಿದ್ದರೂ ಸಹ, ಅಂತರರಾಷ್ಟ್ರೀಯ ಅತಿಥಿಗಳಿಗೆ ನಿಯಮಗಳು ಇನ್ನೂ ಅಸ್ತಿತ್ವದಲ್ಲಿವೆ.

ಸರ್ಕಾರದ ಉದ್ದೇಶವೇನು?
ಹಾಂಗ್ ಕಾಂಗ್ ಸರ್ಕಾರದ ಪ್ರಕಾರ, ಉಚಿತ ವಿಮಾನ ಟಿಕೆಟ್‌ಗಳನ್ನು ಒದಗಿಸುವುದು ಹಾಂಗ್ ಕಾಂಗ್ ಅನ್ನು ಉನ್ನತ ಪ್ರವಾಸಿ ತಾಣವಾಗಿ ಮರುಸ್ಥಾಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎನ್ನಲಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಯುರೋಮಾನಿಟರ್ ಇಂಟರ್‌ನ್ಯಾಶನಲ್‌ನ ಹಿರಿಯ ವಿಶ್ಲೇಷಕರೊಬ್ಬರು ಬಿಬಿಸಿಗೆ ನೀಡಿರುವ ಮಾಹಿತಿಯ ಪ್ರಕಾರ, ಹಾಂಗ್ ಕಾಂಗ್‌ನ ಪೂರ್ವ-ಕೋವಿಡ್ ಪರಿಸ್ಥಿತಿಯು ಸಂಪೂರ್ಣವಾಗಿ ಮಾರುಕಟ್ಟೆಯ ಮರಳುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Diwali Bonus: ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ, ಸರ್ಕಾರ ಕೊಡುತ್ತೆ ದೀಪಾವಳಿ ಬೋನಸ್

ಉಚಿತ ಟಿಕೆಟ್‌ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಉಚಿತ ಟಿಕೆಟ್‌ಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಹಾಂಗ್ ಕಾಂಗ್ ಮುಂದಿನ ವರ್ಷ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ವಿತರಿಸಲು ಯೋಜಿಸುತ್ತಿದೆ. ಹಾಂಗ್ ಕಾಂಗ್ ವಿಮಾನ ನಿಲ್ದಾಣದ ಅಧಿಕಾರಿಗಳು ಒಳಬರುವ ಮತ್ತು ಹೊರಹೋಗುವ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ಒದಗಿಸುತ್ತಾರೆ. ಆದರೆ, ಇದಕ್ಕೆ ಇನ್ನೂ ಕಾಲಮಿತಿ ನಿಗದಿಪಡಿಸಲಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-Pension Scheme : ಪತ್ನಿ ಹೆಸರಲ್ಲಿ ಈ ಖಾತೆ ತೆರೆಯಿರಿ, ಪ್ರತಿ ತಿಂಗಳು ಸಿಗಲಿದೆ ₹44,793 ಪಿಂಚಣಿ!

48 ಗಂಟೆಗಳ ಹಿಂದಿನ ಕರೋನಾ ವರದಿ ತೋರಿಸಬೇಕಾಗಿಲ್ಲ
ಇತ್ತೀಚೆಗೆ, ಹಾಂಗ್ ಕಾಂಗ್ ಸರ್ಕಾರವು ಇತರ ಸ್ಥಳಗಳಿಂದ ಬರುವ ಜನರಿಗೆ ಹೋಟೆಲ್‌ಗಳಲ್ಲಿ ಕಡ್ಡಾಯ ಕ್ವಾರಂಟೈನ್ ನಿಯಮವನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಅಲ್ಲಿಗೆ ಭೇಟಿ ನೀಡುವ ಎಲ್ಲಾ ಪ್ರಯಾಣಿಕರಿಗೆ ವಿಮಾನ ಹತ್ತುವ 48 ಗಂಟೆಗಳ ಮೊದಲು ನೆಗೆಟಿವ್ ಆರ್‌ಟಿ ಪಿಸಿಆರ್ ವರದಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿತ್ತು, ಆದರೆ ಅದರ ಬದಲಿಗೆ ಇದೀಗ ಪ್ರವಾಸಿಗರು ವಿಮಾನ ಹತ್ತುವ 24 ಗಂಟೆಗಳ ಮೊದಲು ನೆಗೆಟಿವ್ ಆರ್.ಟಿ.ಪಿಸಿಆರ್ ವರದಿಯನ್ನು ತೋರಿಸಬೇಕಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News