Forbes Global 2000 List: ಫೋರ್ಬ್ಸ್ ನಿಂದ ಜಾಗತಿಕ 2000 ಹೊಸ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ 8 ಸ್ಥಾನ ಮೇಲೇರಿದ ರಿಲಯನ್ಸ್

Forbes Global 2000 List:  ಫೋರ್ಬ್ಸ್‌ನ ಹೊಸ ಜಾಗತಿಕ ಪಟ್ಟಿಯಲ್ಲಿ ರಿಲಯನ್ಸ್ 8 ಸ್ಥಾನ ಮೇಲಕ್ಕೆರಿದೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಫೋರ್ಬ್ಸ್‌ನ ಇತ್ತೀಚಿನ 'ಗ್ಲೋಬಲ್ 2000' ಪಟ್ಟಿಯಲ್ಲಿ ಎಂಟು ಸ್ಥಾನಗಳನ್ನು ಮೇಲೇರಿ 45 ನೇ ಸ್ಥಾನ ತಲುಪಿದೆ.  

Written by - Nitin Tabib | Last Updated : Jun 13, 2023, 05:08 PM IST
  • ರಿಲಯನ್ಸ್ ಇಂಡಸ್ಟ್ರೀಸ್ US$109.43 ಬಿಲಿಯನ್ ಮಾರಾಟ ಮತ್ತು US$8.3 ಶತಕೋಟಿ ಲಾಭದೊಂದಿಗೆ
  • 45ನೇ ಸ್ಥಾನದಲ್ಲಿದೆ. ಗುಂಪಿನ ವ್ಯವಹಾರವು ತೈಲದಿಂದ ದೂರಸಂಪರ್ಕಕ್ಕೆ ವ್ಯಾಪಿಸಿದೆ.
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಟ್ಟಿಯಲ್ಲಿ 77 ನೇ (2022 ರಲ್ಲಿ 105 ನೇ) ಸ್ಥಾನದಲ್ಲಿದೆ
Forbes Global 2000 List: ಫೋರ್ಬ್ಸ್ ನಿಂದ ಜಾಗತಿಕ 2000 ಹೊಸ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ 8 ಸ್ಥಾನ ಮೇಲೇರಿದ ರಿಲಯನ್ಸ್ title=

Forbes Global 2000 List:  ರಿಲಯನ್ಸ್ ಮತ್ತೊಮ್ಮೆ ದೊಡ್ಡ ಮೈಲಿಗಲ್ಲು ಸಾಧಿಸಿದೆ. ಫೋರ್ಬ್ಸ್‌ನ ಹೊಸ ಜಾಗತಿಕ ಪಟ್ಟಿಯಲ್ಲಿ ರಿಲಯನ್ಸ್ 8 ಸ್ಥಾನ ಮೇಲೇರಿದೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಫೋರ್ಬ್ಸ್‌ನ ಇತ್ತೀಚಿನ 'ಗ್ಲೋಬಲ್ 2000' ಪಟ್ಟಿಯಲ್ಲಿ ಎಂಟು ಸ್ಥಾನಗಳನ್ನು ಮೇಲಕ್ಕೆ ಏರಿ 45 ನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಯಾವುದೇ ಭಾರತೀಯ ಕಂಪನಿಗೆ ಹೋಲಿಸಿದರೆ ಇದು ಅತ್ಯುನ್ನತ ಸ್ಥಾನವಾಗಿದೆ.

2000 ಕಂಪನಿಗಳ ಪಟ್ಟಿ ಬಿಡುಗಡೆ
ಫೋರ್ಬ್ಸ್ 2023 ರ ವಿಶ್ವದ ಅಗ್ರ 2,000 ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಮಾರಾಟ, ಲಾಭ, ಆಸ್ತಿ ಮತ್ತು ಮಾರುಕಟ್ಟೆ ಮೌಲ್ಯಮಾಪನದ ನಾಲ್ಕು ಅಂಶಗಳ ಆಧಾರದ ಮೇಲೆ ಇದನ್ನು ಸಿದ್ಧಪಡಿಸಲಾಗುತ್ತದೆ. ಅಮೆರಿಕದ ಅತಿದೊಡ್ಡ ಬ್ಯಾಂಕ್ ಜೆಪಿ ಮೋರ್ಗಾನ್ (ಜೆಪಿ ಮೋರ್ಗಾನ್) 2011 ರ ಬಳಿಕ ಇದೆ ಮೊದಲ ಬಾರಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಂಕಿನ ಒಟ್ಟು ಆಸ್ತಿ 3700 ಬಿಲಿಯನ್ ಡಾಲರ್ ಗಳಾಗಿದೆ.

ವಾರೆನ್ ಬಫೆಟ್‌ರ ಬರ್ಕ್‌ಷೈರ್ ಹ್ಯಾಥ್‌ವೇ ಸ್ಲೈಡ್ಸ್ ಡೌನ್
ಕಳೆದ ವರ್ಷ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಾರೆನ್ ಬಫೆಟ್ ಅವರ ಬರ್ಕ್ ಷೈರ್ ಹ್ಯಾಥ್ ವೇ ತನ್ನ ಹೂಡಿಕೆ ಬಂಡವಾಳದ ನಷ್ಟದಿಂದಾಗಿ ಈ ವರ್ಷ 338ನೇ ಸ್ಥಾನಕ್ಕೆ ಕುಸಿದಿದೆ. ಸೌದಿ ತೈಲ ಕಂಪನಿ ಅರಾಮ್ಕೊ ಎರಡನೇ ಸ್ಥಾನದಲ್ಲಿದೆ, ಮೂರು ದೈತ್ಯ ಸರ್ಕಾರಿ ಬ್ಯಾಂಕ್‌ಗಳು ನಂತರದ ಸ್ಥಾನದಲ್ಲಿವೆ. ತಂತ್ರಜ್ಞಾನ ಕಂಪನಿ ಆಲ್ಫಾಬೆಟ್ ಮತ್ತು ಆಪಲ್ 7 ಮತ್ತು 10 ನೇ ಸ್ಥಾನದಲ್ಲಿವೆ.

ರಿಲಯನ್ಸ್ 45 ನೇ ಸ್ಥಾನದಲ್ಲಿದೆ
ರಿಲಯನ್ಸ್ ಇಂಡಸ್ಟ್ರೀಸ್ US$109.43 ಬಿಲಿಯನ್ ಮಾರಾಟ ಮತ್ತು US$8.3 ಶತಕೋಟಿ ಲಾಭದೊಂದಿಗೆ 45ನೇ ಸ್ಥಾನದಲ್ಲಿದೆ. ಗುಂಪಿನ ವ್ಯವಹಾರವು ತೈಲದಿಂದ ದೂರಸಂಪರ್ಕಕ್ಕೆ ವ್ಯಾಪಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಪಟ್ಟಿಯಲ್ಲಿ  ಜರ್ಮನಿಯ ಬಿಎಂಡಬ್ಲ್ಯು ಗ್ರೂಪ್, ಸ್ವಿಟ್ಜರ್ಲೆಂಡ್‌ನ ನೆಸ್ಲೆ, ಚೀನಾದ ಅಲಿಬಾಬಾ ಗ್ರೂಪ್, ಅಮೇರಿಕನ್ ಪ್ರಾಕ್ಟರ್ & ಗ್ಯಾಂಬಲ್ ಮತ್ತು ಜಪಾನ್‌ನ ಸೋನಿ ಮುಂಚೂಣಿಯಲ್ಲಿವೆ.

ಇದನ್ನೂ ಓದಿ-Investment Ideas: ನೀವು ಮಾಡುವ ಹೂಡಿಕೆಗೆ FD ಗಿಂತ ಉತ್ತಮ ಆದಾಯ ಗಳಿಸಬೇಕೆ? ಈ ವರದಿ ತಪ್ಪದೆ ಓದಿ

ಯಾವ ಕಂಪನಿ ಯಾವ ಸ್ಥಾನದಲ್ಲಿದೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಟ್ಟಿಯಲ್ಲಿ 77 ನೇ (2022 ರಲ್ಲಿ 105 ನೇ), HDFC ಬ್ಯಾಂಕ್ 128 ನೇ (2022 ರಲ್ಲಿ 153 ನೇ) ಮತ್ತು ICICI ಬ್ಯಾಂಕ್ 163 ನೇ (2022 ರಲ್ಲಿ 204 ನೇ) ಸ್ಥಾನದಲ್ಲಿದೆ. ಇತರೆ ಕಂಪನಿಗಳು ಒಎನ್‌ಜಿಸಿ 226ನೇ, ಎಲ್‌ಐಸಿ 363ನೇ, ಟಿಸಿಎಸ್ 387ನೇ, ಆಕ್ಸಿಸ್ ಬ್ಯಾಂಕ್ 423ನೇ, ಎನ್‌ಟಿಪಿಸಿ 433ನೇ, ಲಾರ್ಸೆನ್ ಮತ್ತು ಟೂಬ್ರೋ 449ನೇ, ಭಾರ್ತಿ ಏರ್‌ಟೆಲ್ 478ನೇ, ಕೋಟಕ್ ಮಹೀಂದ್ರಾ ಬ್ಯಾಂಕ್ 502ನೇ, ಇಂಡಿಯನ್ ಆಯಿಲ್ ಕಾರ್ಪೊರೇಷನ್ 540ನೇ, ಬ್ಯಾಂಕ್ 540ನೇ, ಇನ್ಫೋಸಿಸ್ 554ನೇ ಹಾಗೂ ಬ್ಯಾಂಕ್ ಆಫ್ ಬಡೋದಾ 586ನೇ ಸ್ಥಾನದಲ್ಲಿದೆ.

ಇದನ್ನೂ ಓದಿ-Wheat Price Update: ಮುಂದಿನ ವರ್ಷದ ಮಾರ್ಚ್ ವರೆಗೆ ಗೋಧಿಯ ಮೇಲೆ ದಾಸ್ತಾನು ಮಿತಿ ವಿಧಿಸಿದ ಮೋದಿ ಸರ್ಕಾರ, ಕಾರಣ ಇಲ್ಲಿದೆ

55 ಭಾರತೀಯ ಕಂಪನಿಗಳು ಪಟ್ಟಿಯಲ್ಲಿ ಶಾಮೀಲಾಗಿವೆ
ಒಟ್ಟು 55 ಭಾರತೀಯ ಕಂಪನಿಗಳು ಪಟ್ಟಿಯಲ್ಲಿ ಶಾಮೀಲಾಗಿವೆ. ಬಿಲಿಯನೇರ್ ಉದ್ಯಮಿ ಗೌತಮ್ ಅಡಾಣಿ ಅವರ ಮೂರು ಕಂಪನಿಗಳಾಗಿರುವ ಆದಾನಿ ಎಂಟರ್‌ಪ್ರೈಸಸ್ (1062 ನೇ ಸ್ಥಾನ), ಆದಾನಿ ಪವರ್ (1488 ನೇ ಸ್ಥಾನ) ಮತ್ತು ಅಡಾಣಿ ಪೊರ್ಟ್ಸ್ ಆಂಡ್ ಸ್ಪೆಷಲ್ ಏಕಾನಾಮಿಕ್ ಜೋನ್ 1488 ನೇ ಸ್ಥಾನ ಪಡೆದುಕೊಂಡು  ಈ ಪಟ್ಟಿಯಲ್ಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News