Financial Planning Tips: 30 ವರ್ಷಕ್ಕೂ ಮುನ್ನ ಈ 5 ಕೆಲಸ ಮಾಡಿ, ಜೀವನವಿಡೀ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ

What To Do Financially At Your 30s: ಜೀವನದಲ್ಲಿ ನಮಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಾರದು ಎಂದಾದರೆ ನಾವು ನಮ್ಮ ನೌಕರಿಯ ಅಥವಾ ಬಿಸಿನೆಸ್ ಆರಂಭದಲ್ಲಿಯೇ ಅದಕ್ಕಾಗಿ ಯೋಜನೆ ರೂಪಿಸಬೇಕು.

Written by - Nitin Tabib | Last Updated : May 28, 2021, 05:59 PM IST
  • 30ರ ಹರೆಯದಲ್ಲಿ ಹೆಚ್ಚಿನ ಯುವಕರೂ ಆರ್ಥಿಕ ಯೋಜನೆ ರೂಪಿಸುವಲ್ಲಿ ನಿರಾಸಕ್ತರಾಗಿರುತ್ತಾರೆ.
  • ಆದರೆ, ನಿವೃತ್ತಿ ನಂತರದ ಸುಂದರ ಬದುಕಿಗಾಗಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ.
  • 30ರ ಬಳಿಕ ಆರ್ಥಿಕ ಹೊಣೆಗಾರಿಕೆ ಸ್ವಲ್ಪ ಜಾಸ್ತಿಯಾಗುತ್ತದೆ ಎಂಬುದು ತಜ್ಞರ ಅಭಿಮತ.
Financial Planning Tips: 30 ವರ್ಷಕ್ಕೂ ಮುನ್ನ ಈ 5 ಕೆಲಸ ಮಾಡಿ, ಜೀವನವಿಡೀ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ title=
Financial Planning Tips (File Photo)

What To Do Financially At Your 30s: ಜೀವನದುದ್ದಕ್ಕೂ ನಮಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಾರದು ಎಂಬುದಾದರೆ ನಾವು ನಮ್ಮ ನೌಕರಿಯ ಅಥವಾ ಬಿಸಿನೆಸ್ಸ್ ನ ಆರಂಭದಿಂದಲೇ ಅದಕಾಗಿ ಯೋಜನೆ ರೂಪಿಸಬೇಕು. ಹಣ ಗಳಿಸುವುದಕ್ಕಿಂತ ಹೆಚ್ಚಾಗಿ ಅದರ ಉಳಿತಾಯ ಹಾಗೂ ಸರಿಯಾದ ಜಾಗದಲ್ಲಿ ಹೂಡಿಕೆ ತುಂಬಾ ಮಹತ್ವದ್ದಾಗಿರುತ್ತದೆ. ಏಕೆಂದರೆ ಇದರಿಂದ ನಮಗೆ ಸಮಯಕ್ಕೆ ಸರಿಯಾಗಿ ಆದಾಯ ಸಿಗುತ್ತದೆ (Investment). 20 ರಿಂದ 20 ನೆ ವಯಸ್ಸಿನಲ್ಲಿ ನೌಕರಿ ಅಥವಾ ಬಿಸಿನೆಸ್ ಆರಂಭಿಸುವ ಯುವಕರು ತಮ್ಮ ಹಣಕಾಸಿನ ಯೋಜನೆಯ ಕುರಿತು ಸಾಮಾನ್ಯವಾಗಿ ಅಷ್ಟೊಂದು ಗಂಭೀರವಾಗಿರುವುದಿಲ್ಲ. ತಮ್ಮ ನಿವೃತ್ತಿ ನಂತರದ ಜೀವನದ ಕುರಿತು ಆ ವಯಸ್ಸಿನಲ್ಲಿ (money management tips for beginners) ತೀರಾ ವಿರಳವಾಗಿ ಯುವಕರು ಆಲೋಚಿಸುತ್ತಾರೆ. ನಿಜ ಹೇಳುವುದಾದರೆ ಹಣಕಾಸಿನ ಯೋಜನೆ ರೂಪಿಸಲು ಇದು ಸರಿಯಾದ ಕಾಲವಾಗಿರುತ್ತದೆ. ಆರಂಭದಿಂದಲೇ ಒಂದು ವೇಳೆ ನೀವು ಗಮನ ಹರಿಸಿದರೆ, ರಿಟೈರ್ ಮೆಂಟ್ ಬಳಿಕದ ಜೀವನ ತುಂಬಾ ಸುಲಭವಾಗುತ್ತದೆ ಹಾಗೂ ನಿಮ್ಮ ಬಳಿ ಹಣಕಾಸಿನ ಮುಗ್ಗಟ್ಟು ಇರುವುದಿಲ್ಲ. ಹಾಗಾದರೆ ಬನ್ನಿ 30 ವಯಸ್ಸಿಗಿಂತಲೂ ಕಡಿಮೆ ವಯಸ್ಸಿನಲ್ಲಿ ಫೈನಾನ್ಸಿಯಲ್ ಪ್ಲ್ಯಾನಿಂಗ್ (Financial Planning) ಹೇಗೆ ಮಾಡಬೇಕು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳೋಣ (Financial Planning Tips).

1. ತುರ್ತು ನಿಧಿ ರಚನೆ  (Emergency Fund) - "ನೀವು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಮತ್ತು ಉದ್ಯೋಗ ಅಥವಾ ಕೆಲಸವನ್ನು ಆರಂಭಿಸಿದರೆ  ತುರ್ತು ನಿಧಿಯನ್ನು ರಚನೆ ನಿಮ್ಮ ಮೊದಲ ಆದ್ಯತೆಯಾಗಿರಬೇಕು" ಎಂಬುದು ಬಿಪಿಎನ್ ಫಿನ್‌ಕ್ಯಾಪ್‌ನ ನಿರ್ದೇಶಕ ಎ.ಕೆ.ನಿಗಮ್ ಹೇಳುತ್ತಾರೆ. ತುರ್ತು ನಿಧಿಯು ಸುಮಾರು 6 ತಿಂಗಳ ಜೀವನ ಶೈಲಿ (ಜೀವನದ ) ವೆಚ್ಚವನ್ನು ಹೊಂದಿರಬೇಕು. ವೈದ್ಯಕೀಯ ತುರ್ತುಸ್ಥಿತಿ, ಉದ್ಯೋಗ ರಜೆ ಮುಂತಾದ ಸಂದರ್ಭಗಳನ್ನು ಎದುರಿಸಲು ಇದು ಸಹಾಯ ಮಾಡುತ್ತದೆ. ಈ ತುರ್ತು ನಿಧಿಯಲ್ಲಿ ಉತ್ತಮ ಲಾಭಕ್ಕಾಗಿ, ಅದನ್ನು ಸಾಲ ನಿಧಿಯಲ್ಲಿ ಅಥವಾ ಹೆಚ್ಚಿನ ಬಡ್ಡಿದರದ ಉಳಿತಾಯ ಖಾತೆಯಲ್ಲಿ (Financial tips for 2021) ಇರಿಸಿ. ತುರ್ತು ಪರಿಸ್ಥಿತಿ ಇಲ್ಲದಿದ್ದರೆ, ಈ ನಿಧಿಯನ್ನು ಬಳಸಬೇಡಿ ಎಂಬುದನ್ನು ಯಾವಾಗಲೂ ನೆನಪಿಡಿ. ನೀವು ಸಾಕಷ್ಟು ತುರ್ತು ನಿಧಿಗಳನ್ನು ಹೊಂದಿಲ್ಲದಿದ್ದರೆ, ನೀವು ಹಠಾತ್ ಹಣಕಾಸಿನ ಅಗತ್ಯಕ್ಕಾಗಿ ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು, ಅದರ ಮೇಲೆ ನೀವು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

2. ರಿಟೈರ್ ಮೆಂಟ್ ಪ್ಲಾನಿಂಗ್ ಮಾಡಿ (Retirement Planning) - 20 ರಿಂದ 30 ವರ್ಷ ವಯಸ್ಸಿನವರಲ್ಲಿ, ನಿವೃತ್ತಿ ಯೋಜನೆಯತ್ತ ಒಲವು ಹೆಚ್ಚಾಗಿ ಕಡಿಮೆ ಇರುತ್ತದೆ. ಆದರೂ ಕೂಡ ನಿವೃತ್ತಿಗಾಗಿ ಉತ್ತಮ ನಿಧಿ ರಚಿಸಲು ಹೂಡಿಕೆ ಮಾಡಲು ಇದು ಸರಿಯಾದ ಸಮಯ. ನಿಮ್ಮ ನಿವೃತ್ತ ಜೀವನಕ್ಕಾಗಿ ನೀವು ಎಷ್ಟು ಬೇಗನೆ ಯೋಜಿಸುತ್ತೀರಿ, ಅದು ಅಷ್ಟೇ ಪ್ರಯೋಜನಕಾರಿಯಾಗಿದೆ. 30 ವರ್ಷ ವಯಸ್ಸಿನ ನಂತರ ಜನರು ತಮ್ಮ ನಿವೃತ್ತಿ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ, ಆ ಸಮಯದಲ್ಲಿ ವೆಚ್ಚಗಳು ಅತ್ಯಧಿಕವಾಗಿರುತ್ತವೆ ಮತ್ತು ಮಕ್ಕಳ ಉನ್ನತ ಶಿಕ್ಷಣ, ಗೃಹ ಸಾಲ ಮರುಪಾವತಿ ಮುಂತಾದ ಅನೇಕ ಪ್ರಮುಖ ಗುರಿಗಳು ಸಹ ಇರುತ್ತವೆ. ನಿವೃತ್ತಿಯ ನಂತರ, ನಿಮಗೆ ಎಷ್ಟು ನಿಧಿ ಬೇಕು ಮತ್ತು ಅದಕ್ಕಾಗಿ ಎಷ್ಟು ಮಾಸಿಕ ಹೂಡಿಕೆಗಳನ್ನು ಮಾಡಬಹುದು ಎಂಬುದನ್ನು  ರಿಟೈರ್ ಮೆಂಟ್ ಕ್ಯಾಲ್ಕುಲೇಟರ್ ಬಳಸಿ ನೀವು ಅಂದಾಜು ಮಾಡಬಹುದು. ಬಳಿಕ ಒಂದು ನಿಶ್ಚಿತ ಪ್ರಮಾಣದ ಹೂಡಿಕೆ ಯೋಜನೆಯನ್ನು ಆರಂಭಿಸಿ ಮತ್ತು ಅದನ್ನು ನಿಮ್ಮ ವೃತ್ತಿ ಜೀವನದುದ್ದಕ್ಕೂ ಕಾಪಾಡಿಕೊಂಡು ಹೋಗಿ ಎಂದು ನಿಗಮ್ ಹೇಳುತ್ತಾರೆ.

3. ಇನ್ಸುರೆನ್ಸ್ ಅನ್ನು ಕಡೆಗಣಿಸಬೇಡಿ (Insurance Cover) - ವಿಮಾ ಯೋಜನೆಯೂ ಕೂಡ ನಿಮ್ಮ ಹಣಕಾಸು ಯೋಜನೆಯಾ ಒಂದು ಭಾಗವಾಗಿರಬೇಕು ಎಂದು ನಿಗಮ್ ಹೇಳುತ್ತಾರೆ. ಟರ್ಮ್ ಲೈಫ್ ಪ್ಲಾನ್ ಮತ್ತು ಆರೋಗ್ಯ ವಿಮೆ ಇದರಲ್ಲಿ ಎರಡು ಬಹಳ ಮುಖ್ಯ ಹೂಡಿಕೆಗಳಾಗಿವೆ. 30 ರ ಹರೆಯದಲ್ಲಿ ನಮ್ಮ ಮೇಲೆ ಹೆಚ್ಚು ಜನ ಅವಲಂಭಿತರಾಗಿರುವ ಸಾಧ್ಯತೆ ಇದೆ. ಆದ್ದರಿಂದ, ಸಂಪೂರ್ಣ ಟರ್ಮ್ ಇನ್ಸುರೆನ್ಸ್ (Insurance) ಪಾಲಸಿಯನ್ನು ತೆಗೆದುಕೊಳ್ಳುವ ಮೂಲಕ ನಿಮಗೆ ಸಾಕಾಗುವಷ್ಟು ಲೈಫ್ ಇನ್ಸುರೆನ್ಸೆ ನೀವೇ ಕಾಯ್ದಿರಿಸಬೇಕು. ಇದು ಕಷ್ಟದ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಸಾಕಷ್ಟು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಇದಲ್ಲದೆ, ಆರೋಗ್ಯ ವಿಮೆ ಎಲ್ಲರೂ ಇಟ್ಟುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ, ಆರೋಗ್ಯ ರಕ್ಷಣೆಯಲ್ಲಾಗುತ್ತಿರುವ ವೆಚ್ಚವನ್ನು ಗಮನಿಸಿದರೆ, ಇದು ಕಾಲದ ಅನಿವಾರ್ಯತೆ ಕೂಡ ಹೌದು ಎಂದು ನಿಗಮ್ ನಂಬುತ್ತಾರೆ.

ಇದನ್ನೂ ಓದಿ-Canara Bank Loan : ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ : ಹೊಸ 3 ಸಾಲ ಯೋಜನೆಗಳನ್ನ ಪ್ರಕಟಿಸಿದ ಬ್ಯಾಂಕ್!

4. ನಿಮ್ಮ ಹೂಡಿಕೆಯ ಒಂದು ನಿಶ್ಚಿತ ಪೋರ್ಟ್ಫೋಲಿಯೋ ತಯಾರಿಸಿ (Investment Portfolio) - ಹೂಡಿಕೆಗೆ ಸಂಬಂಧಿಸಿದಂತೆ, ಬಹುತೇಕ ಯುವಕರು ತಮ್ಮ ಹಣವನ್ನು ಒಂದೇ ಸ್ಥಳದಲ್ಲಿ ಹೂಡಿಕೆ ಮಾಡುತ್ತಾರೆ. ನಿಗಮದ ಪ್ರಕಾರ, ನಿಧಿಯ ಸಂಪೂರ್ಣ ಹೂಡಿಕೆಯನ್ನು ಒಂದೇ ಸ್ಥಳದಲ್ಲಿ ಮಾಡಬಾರದು. ಯಾವಾಗಲೂ ವೈವಿಧ್ಯಮಯ ಹೂಡಿಕೆ ಯೋಜನೆಯನ್ನು ನೀವು ಹೊಂದಿರಬೇಕು. ಇದರಲ್ಲಿ, ನಿಮ್ಮ ಹಣಕಾಸಿನ ಗುರಿಗಳು, ಅಪಾಯದ ವಿವರಗಳನ್ನು ನೋಡುವ ಮೂಲಕ ಹೂಡಿಕೆ ಆಯ್ಕೆಯನ್ನು ಆರಿಸಿ. ಮ್ಯೂಚುವಲ್ ಫಂಡ್‌ಗಳ ಆಯ್ಕೆಯು ದೀರ್ಘಕಾಲೀನ ದೃಷ್ಟಿಕೋನದಿಂದ ಅಸೆಟ್ ತಯಾರಿಸಲು ಉತ್ತಮವಾಗಿದೆ. ನೀವು ಮ್ಯೂಚುಯಲ್ ಫಂಡ್‌ಗಳಿಂದ ಆದಾಯವನ್ನು ಪಡೆದಾಗ, ಅದು ಇತರ ಯಾವುದೇ ಆಸ್ತಿ ವರ್ಗಕ್ಕಿಂತ ಉತ್ತಮ ಆದಾಯವಾಗಿರುತ್ತದೆ.  ಇದಲ್ಲದೆ, ಮಾರುಕಟ್ಟೆಯ ಸುರಕ್ಷಿತ ಮತ್ತು ಖಾತರಿಯ ಆದಾಯ, ಪರ್ಯಾಯ ಹೂಡಿಕೆ (Financial Tips And Tricks) ಆಯ್ಕೆಗಳಾದ ಪಿಪಿಎಫ್, ಆರ್‌ಡಿ, ಎನ್‌ಎಸ್‌ಸಿ, ಎಫ್‌ಡಿಗಳಂತಹ ಯೋಜನೆಗಳನ್ನು ಕೂಡ ನೀವು ಬಂಡವಾಳ ಹೂಡಿಕೆಯಲ್ಲಿ ಸೇರಿಸಿಕೊಳ್ಳಬಹುದು. ಇದೆ ವೇಳೆ, ನೀವು ಕೆಲಸದ ಆರಂಭದಲ್ಲಿ ನಿಮ್ಮ ಬಂಡವಾಳದಲ್ಲಿ ಪ್ರಾಪರ್ಟಿ ಹಾಗೂ ಚಿನ್ನವನ್ನು ಸೇರಿಸಿದರೆ, ಅದು ಮುಂಬರುವ ದಿನಗಳಲ್ಲಿ ಉತ್ತಮ ಲಾಭವನ್ನೇ ನೀಡಲಿದೆ.

ಇದನ್ನೂ ಓದಿ-Rules Changing From 1 June 2021: ಜೂನ್ 1 ರಿಂದಾಗುವ ಈ ಬದಲಾವಣೆಗಳು ನಿಮಗೆ ಗೊತ್ತಿರಲಿ

5. ನಿಮ್ಮ ಬಜೆಟ್ ಬಗ್ಗೆ ಗಮನಹರಿಸಿ (How To Make Budget) - 30 ವಯಸ್ಸಿನ ಸಮಯ ಅಂದರೆ ಹೆಚ್ಚಿನ ಯುವಕರು ತಮ್ಮ ಜೀವನದಲ್ಲಿ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ನಿಗಮ್ ಹೇಳುವ ಪ್ರಕಾರ, 30 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಜನರಿಗೆ ಉಳಿತಾಯ ಮಾಡಲು ಇದೊಂದು ಉತ್ತಮ ಕಾಲಾವಕಾಷವಾಗಿದೆ. ಯಾವಾಗಲು ಬಜೆಟ್ ರಚಿಸಿ ಮುಂದಕ್ಕೆ ಸಾಗಬೇಕು. ಪ್ರತಿ ತಿಂಗಳು ನೀವು ಯಾವಾಗ, ಎಲ್ಲಿ ಮತ್ತು ಎಷ್ಟು ಖರ್ಚು ಮಾಡುತ್ತಿರುವಿರೋ ಅದರ ಲೆಕ್ಕಾಚಾರ ನಿಮ್ಮ ಬಳಿ ಇರಲಿ. ಅನಾವಶ್ಯಕ ಖರ್ಚುಗಳನ್ನು ತಗ್ಗಿಸುವ ಪ್ರಯತ್ನ ಮಾಡಿ. ಎಲ್ಲಾ ಮೂಲಭೂತ ಖರ್ಚುಗಳಾದ ಉದಾಹರಣೆಗೆ  EMI, ಬಾಡಿಗೆ, ಸ್ಕೂಲ್ ಫೀಸ್, ಡೆಲಿ ಹಾಗೂ ಹೌಸ್ ಹೋಲ್ಡ್ ಖರ್ಚುಗಳ ಪಟ್ಟಿ ನಿಮ್ಮ ಬಳಿ ಇರಲಿ  ಎಂಬುದು ನಿಗಮ್ ಅವರ ಅಭಿಪ್ರಾಯ .

ಇದನ್ನೂ ಓದಿ-Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News