Gold and Silver Price Today, 25-04-2023: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಏರಿಳಿತಗಳಾಗುತ್ತಿವೆ. ಈ ಮಧ್ಯೆ ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,650 ರೂ. ಇದೆ. ಹಿಂದಿನ ದಿನ ಈ ಬೆಲೆ 55,720 ಆಗಿತ್ತು. ಇಂದು 70 ರೂಪಾಯಿ ಇಳಿಕೆ ಕಂಡಿದೆ. ಇನ್ನೊಂದೆಡೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 60,710 ರೂ. ಆಗಿದೆ, ಹಿಂದಿನ ದಿನ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,790 ರೂ. ಇತ್ತು. ಇಂದು ರೂ.80 ಕುಸಿತವಾಗಿದೆ.
ಚಿನ್ನದ ಶುದ್ಧತೆ ತಿಳಿಯುವುದು ಹೇಗೆ?
ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್‌ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್’ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನೂ ಕೆಲವರು 18 ಕ್ಯಾರೆಟ್ ಚಿನ್ನವನ್ನೂ ಕೂಡ ಬಳಸುತ್ತಾರೆ. 24 ಕ್ಯಾರೆಟ್ ಎಂಬುದು ಪರಿಶುದ್ಧ ಚಿನ್ನವಾಗಿದ್ದು, ಇದಕ್ಕಿಂತ ಮೇಲೆ ಯಾವುದೇ ಚಿನ್ನ ಇರುವುದಿಲ್ಲ.
22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು ಗೊತ್ತಾ?
24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ. 22 ಕ್ಯಾರೆಟ್ ಸುಮಾರು 91 ಪ್ರತಿಶತ ಶುದ್ಧವಾಗಿರುತ್ತದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24K ಚಿನ್ನವು ಐಷಾರಾಮಿಯಾಗಿದ್ದರೂ, ಅದನ್ನು ಆಭರಣಗಳನ್ನು ತಯಾರಿಸಲು ಬಳಸಲಾಗುವುದಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್’ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ.
ಮಿಸ್ಡ್ ಕಾಲ್ ಮೂಲಕ ಬೆಲೆ ತಿಳಿಯಿರಿ
22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನಾಭರಣಗಳ ಚಿಲ್ಲರೆ ದರವನ್ನು ತಿಳಿಯಲು, ನೀವು 8955664433 ಗೆ ಮಿಸ್ಡ್ ಕಾಲ್ ನೀಡಬಹುದು. ತಕ್ಷಣವೇ SMS ಮೂಲಕ ದರಗಳ ಸಂದೇಶ ನಿಮಗೆ ಬರುತ್ತದೆ. ಇದಲ್ಲದೆ, ನಿರಂತರ ಅಪ್ಡೇಟ್’ಗಳ ಕುರಿತು ಮಾಹಿತಿಗಾಗಿ ನೀವು www.ibja.co ಅಥವಾ ibjarates.com ಗೆ ಭೇಟಿ ನೀಡಬಹುದು.
ಇದನ್ನೂ ಓದಿ: Team India ನಾಯಕ ರೋಹಿತ್ ಶರ್ಮಾ ಪ್ರತೀ ಪಂದ್ಯಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ಶಾಕ್ ಆಗೋದು ಪಕ್ಕಾ
ಚಿನ್ನವನ್ನು ಖರೀದಿಸುವಾಗ, ಜನರು ಅದರ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಬೇಕು. ಹಾಲ್‌ಮಾರ್ಕ್ ಮಾರ್ಕ್ ನೋಡಿದ ನಂತರವೇ ಗ್ರಾಹಕರು ಖರೀದಿಸಬೇಕು. ಹಾಲ್’ಮಾರ್ಕ್ ಎಂಬುದು ಚಿನ್ನಕ್ಕೆ ಸರ್ಕಾರದ ಖಾತರಿಯಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್‌ಮಾರ್ಕ್ ಅನ್ನು ನಿರ್ಧರಿಸುತ್ತದೆ. ಹಾಲ್‌ಮಾರ್ಕಿಂಗ್ ಯೋಜನೆಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆಕ್ಟ್, ನಿಯಮಗಳು ಮತ್ತು ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.