Fake Aadhaar Card: ನಿಮ್ಮ ಆಧಾರ್ ಕಾರ್ಡ್ ಅಸಲಿಯೇ/ನಕಲಿಯೇ? ಈ ರೀತಿ ಪರಿಶೀಲಿಸಿ

UIDAI fraud Alert: ಮೋಸಗಾರರ ಬಗ್ಗೆ ಎಚ್ಚರದಿಂದಿರಿ ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಎಚ್ಚರಿಕೆ ನೀಡಿದೆ. ಯುಐಡಿಎಐ ಆಧಾರ್ ಕಾರ್ಡ್ ಪರಿಶೀಲಿಸುವ ವಿಧಾನವನ್ನು ಟ್ವೀಟ್ ಮೂಲಕ ವಿವರಿಸಿದೆ.

Written by - Yashaswini V | Last Updated : Jul 10, 2021, 10:37 AM IST
  • ಇತ್ತೀಚಿನ ದಿನಗಳಲ್ಲಿ ಆಧಾರ್‌ಗೆ ಸಂಬಂಧಿಸಿದ ಅನೇಕ ವಂಚನೆ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ
  • ಆಧಾರ್ ಪರಿಶೀಲನೆಯ ವಿಧಾನವನ್ನು ಯುಐಡಿಎಐ ವಿವರಿಸಿದೆ
  • ಆಧಾರ್ ಪರಿಶೀಲನೆಗಾಗಿ ಯುಐಡಿಎಐ ಸಾಮಾನ್ಯ ಜನರಿಗೆ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ
Fake Aadhaar Card: ನಿಮ್ಮ ಆಧಾರ್ ಕಾರ್ಡ್ ಅಸಲಿಯೇ/ನಕಲಿಯೇ? ಈ ರೀತಿ ಪರಿಶೀಲಿಸಿ title=
ನಿಮ್ಮ ಆಧಾರ್ ನಕಲಿಯೇ ಅಥವಾ ಅಸಲಿಯೇ ಎಂದು ಪರಿಶೀಲಿಸಿ

ನವದೆಹಲಿ:  UIDAI fraud Alert- ಇಂದಿನ ಕಾಲದಲ್ಲಿ, ಯಾವುದೇ ವ್ಯಕ್ತಿಗೆ ಆಧಾರ್ ಕಾರ್ಡ್ (Aadhaar Card Latest Update) ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಆಧಾರ್ ನಿಮ್ಮ ಗುರುತು ಮತ್ತು ಆಧಾರ್ ಕಾರ್ಡ್ ಇಲ್ಲದಿದ್ದರೆ, ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿ ಸಣ್ಣ ಮತ್ತು ದೊಡ್ಡ ಕೆಲಸಗಳಿಗೆ ಆಧಾರ್ ಕಾರ್ಡ್ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ, ಜನರ ಅನೇಕ ಪ್ರಮುಖ ಕಾರ್ಯಗಳು ಸ್ಥಗಿತಗೊಳ್ಳುತ್ತವೆ.

ರೇಷನ್ ಕಾರ್ಡ್ (Ration Card) ಮತ್ತು ಮತದಾರರ ಗುರುತಿನ ಚೀಟಿಯಂತೆ (Voter id card) ರೀತಿ ಆಧಾರ್ ಕಾರ್ಡ್ (Aadhaar Card) ಕೂಡ ಬಹುಮುಖ್ಯ ದಾಖಲೆಯಾಗಿದೆ. ನಾವು ಆಧಾರ್ ಕಾರ್ಡ್ ಸಹಾಯದಿಂದ ಅನೇಕ ಕಾರ್ಯಗಳನ್ನು ಸಾಧಿಸಬಹುದು. ಆದರೆ ಆಧಾರ್‌ಗೆ ಸಂಬಂಧಿಸಿದ ಅನೇಕ ವಂಚನೆ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇದೀಗ ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ- UIDAI: ಆಧಾರ್ ನವೀಕರಣ ಪೂರ್ಣಗೊಳ್ಳಲು ಎಷ್ಟು ದಿನ ಕಾಯಬೇಕು? ನಿಯಮ ಏನು ಹೇಳುತ್ತೆ?

ಪರಿಶೀಲನೆಯ ವಿಧಾನವನ್ನು ಯುಐಡಿಎಐ ವಿವರಿಸಿದೆ (UIDAI explained the method of verification) :
ಮೋಸಗಾರರ ಬಗ್ಗೆ ಎಚ್ಚರದಿಂದಿರಿ ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಎಚ್ಚರಿಕೆ ನೀಡಿದೆ. ಯುಐಡಿಎಐ ಆಧಾರ್ ಕಾರ್ಡ್ ಪರಿಶೀಲಿಸುವ ವಿಧಾನವನ್ನು ಟ್ವೀಟ್ ಮೂಲಕ ವಿವರಿಸಿದೆ. ಯುಐಡಿಎಐ ಪ್ರಕಾರ, ಆಧಾರ್ ಕಾರ್ಡ್ ಅನ್ನು ಎರಡು ರೀತಿಯಲ್ಲಿ  ಪರಿಶೀಲಿಸಬಹುದು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಆಧಾರ್ ಅನ್ನು ಪರಿಶೀಲಿಸಬಹುದು. ಇದರೊಂದಿಗೆ, ನೀವು ಆಧಾರ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳನ್ನು ನೀವೇ ಪರಿಹರಿಸಬಹುದು.

ನಿಮ್ಮ ಆಧಾರ್ ನಕಲಿ ಅಥವಾ ಇಲ್ಲವೇ ಎಂದು ಪರಿಶೀಲಿಸಿ :
ಆಧಾರ್ ಸಂಖ್ಯೆಯನ್ನು ಪರಿಶೀಲಿಸಲು, ಬಳಕೆದಾರರು ರೆಸಿಡೆಂಟ್.ಯುಡೈ.ಗೊವ್.ಇನ್ / ವೆರಿಫೈ (resident.uidai.gov.in/verify) ಲಿಂಕ್ ಅನ್ನು ಭೇಟಿ ಮಾಡಬೇಕಾಗುತ್ತದೆ. ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆಯನ್ನು ಬರೆಯುವ ಮೂಲಕ ಭದ್ರತಾ ಕೋಡ್ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಬೇಕಾಗುತ್ತದೆ. ಅದರ ನಂತರ, ಪ್ರೊಸೀಡ್ ಟು ವೆರಿಫೈ (Proceed To Verify) ಕ್ಲಿಕ್ ಮಾಡಿದ ನಂತರ, ನಿಮ್ಮ ಆಧಾರ್ ಮಾಹಿತಿ ಬಹಿರಂಗಗೊಳ್ಳುತ್ತದೆ. ಈ ರೀತಿಯಾಗಿ ನಿಮ್ಮ ಆಧಾರ್ ಅಸಲಿಯೋ ಅಥವಾ ಇಲ್ಲವೋ ಎಂಬ ಮಾಹಿತಿಯನ್ನು ಸಹ ನೀವು ಪಡೆಯಲು ಸಾಧ್ಯವಾಗುತ್ತದೆ. ನೀವು ಅದನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಲು ಬಯಸಿದರೆ, ನಂತರ ಆಧಾರ್‌ನಲ್ಲಿ ಗೋಚರಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ನೀವು ಅದರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ- Aadhaar Card Correction: ಆಧಾರ್‌ನಲ್ಲಿ ಹೆಸರು, ವಿಳಾಸ, ಜನ್ಮದಿನವನ್ನು ನವೀಕರಿಸಬೇಕೇ? ಈ ಡಾಕ್ಯುಮೆಂಟ್ ಅನ್ನು ಸಿದ್ಧವಾಗಿಡಿ

ಯುಐಡಿಎಐ ಸಾಮಾನ್ಯ ಜನರಿಗೆ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ:
ಕೆಲವು ದಿನಗಳ ಹಿಂದೆ ಯುಐಡಿಎಐ ಸಾಮಾನ್ಯ ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಟೋಲ್ ಫ್ರೀ ಸಂಖ್ಯೆಯನ್ನು ನೀಡಿತ್ತು. ಆಧಾರ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿಗಾಗಿ, ನೀವು ಈಗ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1947 ಗೆ ಕರೆ ಮಾಡಬಹುದು. ಇದಲ್ಲದೆ, ನಿಮ್ಮ ಸಮಸ್ಯೆಯನ್ನು help@uidai.gov.in ಗೆ ಮೇಲ್ ಬರೆಯುವ ಮೂಲಕವೂ ಕಳುಹಿಸಬಹುದು. ಈ ವಿಶೇಷ ಸೇವೆ ನಿಮಗೆ 12 ಭಾಷೆಗಳಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ನಿಮಗೆ ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮೀಸ್ ಮತ್ತು ಉರ್ದು ಭಾಷೆಗಳಲ್ಲಿ ಬೆಂಬಲ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News