EPFO: ನಿಮ್ಮ ಪಿಎಫ್ ಖಾತೆ ಸಂಖ್ಯೆಯಲ್ಲಿ ಅಡಗಿರುವ ಈ ಪ್ರಮುಖ ಮಾಹಿತಿ ಬಗ್ಗೆ ತಿಳಿದಿದೆಯೇ?

EPFO Lates News: ವಾಸ್ತವವಾಗಿ ಎಲ್ಲಾ ಉದ್ಯೋಗಿಗಳು ತಮ್ಮದೇ ಆದ ಪಿಎಫ್ ಸಂಖ್ಯೆಯನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿನ (PF Account) ಕೊಡುಗೆಯನ್ನು ಪರಿಶೀಲಿಸಲು ತಿಳಿದಿರಬೇಕು.

Written by - Yashaswini V | Last Updated : Jul 21, 2021, 07:39 AM IST
  • ಇಪಿಎಫ್‌ಒ ಚಂದಾದಾರರಿಗೆ ಪ್ರಮುಖ ಸುದ್ದಿ
  • ಈ ಪ್ರಮುಖ ಮಾಹಿತಿಯನ್ನು ನಿಮ್ಮ ಪಿಎಫ್ ಖಾತೆ ಸಂಖ್ಯೆಯಲ್ಲಿ ಮರೆಮಾಡಲಾಗಿದೆ
  • ಪಿಎಫ್ ಖಾತೆ ಸಂಖ್ಯೆ ಎಂದರೇನು? ಅದರಲ್ಲಿ ಅಡಗಿರುವ ಪ್ರಮುಖ ಮಾಹಿತಿಯನ್ನು ಈ ರೀತಿ ತಿಳಿಯಿರಿ
EPFO: ನಿಮ್ಮ ಪಿಎಫ್ ಖಾತೆ ಸಂಖ್ಯೆಯಲ್ಲಿ ಅಡಗಿರುವ ಈ ಪ್ರಮುಖ ಮಾಹಿತಿ ಬಗ್ಗೆ ತಿಳಿದಿದೆಯೇ? title=
ನಿಮ್ಮ ಪಿಎಫ್ ಖಾತೆ ಸಂಖ್ಯೆಯಲ್ಲಿ ಮರೆಮಾಡಲಾಗಿರುವ ಮಾಹಿತಿಯನ್ನು ಈ ರೀತಿ ಡಿಕೋಡ್ ಮಾಡಿ

ನವದೆಹಲಿ: EPFO Lates News- ಇಪಿಎಫ್‌ಒ ಚಂದಾದಾರರು ತಮ್ಮದೇ ಆದ ಪಿಎಫ್ ಸಂಖ್ಯೆಯನ್ನು ಹೊಂದಿರುತ್ತಾರೆ. ಪ್ರತಿಯೊಬ್ಬ ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿನ ಕೊಡುಗೆಯನ್ನು ಪರಿಶೀಲಿಸಲು ತಿಳಿದಿರಬೇಕು. ಆದರೆ ನೀವು ಪಡೆಯುವ ಪಿಎಫ್ ಸಂಖ್ಯೆಯಲ್ಲಿ ಅನೇಕ ಮಾಹಿತಿಯನ್ನು ಮರೆಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ. ಪಿಎಫ್ ಖಾತೆ ಸಂಖ್ಯೆಯು ಅಂಕೆಗಳೊಂದಿಗೆ ಕೆಲವು ವರ್ಣಮಾಲೆಗಳನ್ನು ಸಹ ಹೊಂದಿದೆ. ಹಾಗಾಗಿ ಪಿಎಫ್ ಖಾತೆ ಸಂಖ್ಯೆಯಲ್ಲಿ ಅಡಗಿರುವ ಮಾಹಿತಿ ಮತ್ತು ಅದರ ಕೋಡಿಂಗ್ ವಿವರಗಳ ಬಗ್ಗೆ ತಿಳಿಯೋಣ...

ಪಿಎಫ್ ಖಾತೆ ಸಂಖ್ಯೆ ಎಂದರೇನು?
ಪಿಎಫ್ ಖಾತೆ ಸಂಖ್ಯೆಯನ್ನು (PF Account Number) ಆಲ್ಫಾನ್ಯೂಮರಿಕ್ ಸಂಖ್ಯೆ ಎಂದು ಕರೆಯಲಾಗುತ್ತದೆ. ಇದು ಇಂಗ್ಲಿಷ್ ವರ್ಣಮಾಲೆ ಮತ್ತು ಅಂಕೆಗಳೆರಡರಲ್ಲೂ ಕೆಲವು ವಿಶೇಷ ಮಾಹಿತಿಯನ್ನು ಹೊಂದಿದೆ. ಈ ಸಂಖ್ಯೆಯಲ್ಲಿ ರಾಜ್ಯ, ಪ್ರಾದೇಶಿಕ ಕಚೇರಿ, ಸ್ಥಾಪನೆ (ಕಂಪನಿ) ಮತ್ತು ಪಿಎಫ್ ಸದಸ್ಯರ ಕೋಡ್ ವಿವರಗಳಿವೆ.

ಇದನ್ನೂ ಓದಿ- 7th Pay Commission: ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಬದಲಾವಣೆ

ಆಲ್ಫಾನ್ಯೂಮರಿಕ್ ಸಂಖ್ಯೆ ಎಂದರೇನು?
ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಿ-
XX- ರಾಜ್ಯವನ್ನು ಸೂಚಿಸುತ್ತದೆ 
XXX - ಪ್ರದೇಶವನ್ನು ಸಂಕೇತಿಸುತ್ತದೆ
1234567 - ಸ್ಥಾಪನೆ ಕೋಡ್ (Establishment Code)
XX1 - ವಿಸ್ತರಣೆ (ಯಾವುದಾದರೂ ಇದ್ದರೆ)
7654321 - ಖಾತೆ ಸಂಖ್ಯೆ

ಪ್ರತಿಯೊಬ್ಬ ಉದ್ಯೋಗಿಗೆ ಯುಎಎನ್ (UAN):
ಇಪಿಎಫ್‌ಒನ (EPFO) ಪ್ರತಿಯೊಬ್ಬ ಸದಸ್ಯರು ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಹೊಂದಿದ್ದಾರೆ. ಇದು ಪ್ರತಿ ಉದ್ಯೋಗಿಗೆ ವಿಭಿನ್ನವಾಗಿರುತ್ತದೆ. ಉದ್ಯೋಗಿ ಕಂಪನಿಯನ್ನು ಬದಲಾಯಿಸಿದಾಗ ವಿಭಿನ್ನ ಪಿಎಫ್ ಖಾತೆಗಳನ್ನು ಹೊಂದಿರಬಹುದು. ಆದರೆ, ಯುಎಎನ್ ಖಾತೆ ಕೇವಲ ಒಂದೇ ಆಗಿರುತ್ತದೆ. ಒಂದು ಯುಎಎನ್‌ನಲ್ಲಿ, ನಿಮ್ಮ ವಿಭಿನ್ನ ಪಿಎಫ್ ವಿವರಗಳನ್ನು ನೀವು ನೋಡಬಹುದು.

ಇದನ್ನೂ ಓದಿ- EPFO Interest Calculation- ನಿಮ್ಮ ಪಿಎಫ್‌ನ ಬಡ್ಡಿಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ ಎಂದು ತಿಳಿದಿದೆಯೇ

ಎಸ್‌ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಿ:
ಇಪಿಎಫ್‌ಒ ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್‌ಎಂಎಸ್ ಮತ್ತು ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಖಾತೆಯ ಬಾಕಿ ಪರಿಶೀಲಿಸಬಹುದು. ಇದಕ್ಕಾಗಿ, ನೀವು ಸಂದೇಶ ಪೆಟ್ಟಿಗೆಯಲ್ಲಿ EPFOHO UAN ಅನ್ನು ಟೈಪ್ ಮಾಡಿ ಮತ್ತು ಅದನ್ನು 7738299899 ಗೆ ಕಳುಹಿಸಬೇಕು. ನಿಮ್ಮ ಇಪಿಎಫ್ ಬ್ಯಾಲೆನ್ಸ್ (EPF Balance) ವಿವರ ಸಂದೇಶದ ಮೂಲಕ ಮೊಬೈಲ್‌ನಲ್ಲಿ ತಿಳಿಯುತ್ತದೆ. ಇದಲ್ಲದೆ, ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News