Good News: EPFO ತನ್ನ ಚಂದಾದಾರರಿಗಾಗಿ ಹೊಸ ಪೆನ್ಷನ್ ಯೋಜನೆ ಜಾರಿಗೆ ತರುತ್ತಿದೆಯೇ? ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭ

EPFO Update - EPFO ಖಾತೆದಾರಿಗೆ  ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಹೊಸ ಪಿಂಚಣಿ ಯೋಜನೆ ಜಾರಿಯಾದರೆ ನಿವೃತ್ತಿಯ ನಂತರ ಹೆಚ್ಚಿನ ಪಿಂಚಣಿ ಸಿಗಲಿದೆ.  

Written by - Nitin Tabib | Last Updated : Feb 20, 2022, 06:15 PM IST
  • ತನ್ನ ಚಂದಾದಾರರಿಗೆ EPFO ಹೊಸ ಪಿಂಚಣಿ ಯೋಜನೆ ಜಾರಿಗೆ ತರುತ್ತಿದೆ!
  • EPFOದ CBT ಸಭೆಯಲ್ಲಿ ಈ ಕುರಿತು ನಿರ್ಧಾರ ಹೊರಬೀಳುವ ಸಾಧ್ಯತೆ.
  • ಮೂಲವೇತನದ ವ್ಯಾಪ್ತಿ ಹೆಚ್ಚಳದ ಬೇಡಿಕೆಯನ್ನು ಕೂಡ ಪರಿಶೀಲಿಸಲಾಗುವುದು
Good News: EPFO ತನ್ನ ಚಂದಾದಾರರಿಗಾಗಿ ಹೊಸ ಪೆನ್ಷನ್ ಯೋಜನೆ ಜಾರಿಗೆ ತರುತ್ತಿದೆಯೇ? ಯಾರಿಗೆ ಸಿಗಲಿದೆ ಈ ಯೋಜನೆಯ ಲಾಭ title=
EPFO Latest News (File Photo)

EPFO Latest News - ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊಸ ಪಿಂಚಣಿ ಯೋಜನೆಯನ್ನು (New Pension Scheme) ಜಾರಿಗೆ ತರುವ ಸಂಕೇತ ನೀಡಿದೆ. ಈ ಕುರಿತು EPFO ಭಾನುವಾರ ಮಾಹಿತಿ ನೀಡಿದೆ. ಹೊಸ ಪ್ರಸ್ತಾವನೆಗೆ ಒಪ್ಪಿಗೆ ದೊರೆತರೆ ಖಾತೆದಾರರಿಗೆ (EPFO Subscribers)  ಆಗುವ ಲಾಭವೇನು, ಅದರಲ್ಲಿನ ಹೊಸ ನಿಬಂಧನೆಗಳೇನು ಎಂಬೆಲ್ಲ ವಿವರಗಳ ಕುರಿತು ಮಾಹಿತಿ ಪದೆದುಕೊಳ್ಳೋಣ ಬನ್ನಿ. 

ಇವರಿಗಾಗಿ ಹೊಸ ಯೋಜನೆ ಜಾರಿಯಾಗುತ್ತಿದೆ
15,000ಕ್ಕಿಂತ ಹೆಚ್ಚು ಮೂಲ ವೇತನ ಪಡೆಯುವ ಸಂಘಟಿತ ವಲಯದ ಜನರಿಗೆ ಈ ಪಿಂಚಣಿ ಯೋಜನೆ ತರಲು ಯೋಜನೆ ರೂಪಿಸಲಾಗುತ್ತಿದೆ. ಇದಲ್ಲದೆ, ನೌಕರರ ಪಿಂಚಣಿ ಯೋಜನೆ-1995 (EPS-95) ಅಡಿಯಲ್ಲಿ ಕಡ್ಡಾಯವಾಗಿ ಒಳಗೊಳ್ಳದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಸಹ ಪರಿಗಣಿಸಲಾಗುತ್ತಿದೆ.

ಯಾರಿಗೆ ಈ ಯೋಜನೆಯ ಲಾಭ ಸಿಗಲಿದೆ?
ಈ ಯೋಜನೆಯ ಪ್ರಯೋಜನವನ್ನು ಪ್ರಸ್ತುತ, ಸಂಘಟಿತ ವಲಯದ ನೌಕರರಿಗೆ ಮೂಲ ವೇತನ (Basic Salary And Dearness Allowance) ರೂ 15,000 ವರೆಗೆ ಮತ್ತು ಕಡ್ಡಾಯವಾಗಿ ಇಪಿಎಸ್-95 ಅಡಿಯಲ್ಲಿ ನೀಡಲಾಗುತ್ತದೆ. ಪಿಟಿಐ ವರದಿಯ ಪ್ರಕಾರ, 'ಇಪಿಎಫ್‌ಒ ಸದಸ್ಯರಲ್ಲಿ ಹೆಚ್ಚಿನ ಕೊಡುಗೆಯ ಮೇಲೆ ಹೆಚ್ಚಿನ ಪಿಂಚಣಿಗಾಗಿ ಬೇಡಿಕೆಯಿದೆ. ಈ ಮೂಲಕ ಮೂಲ ವೇತನ 15 ಸಾವಿರಕ್ಕಿಂತ ಹೆಚ್ಚು ಇರುವವರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ.

ಹೋಳಿ ಹಬ್ಬಕ್ಕೂ ಮುನ್ನವೇ ಸಿಗಲಿದೆಯಾ ಈ ಸಿಹಿ ಸುದ್ದಿ?
ಮೂಲಗಳು ನೀಡಿರುವ ಮಾಹಿತಿಯನ್ನು ನಂಬುವುದಾದರೆ, ಮಾರ್ಚ್ 11 ಮತ್ತು 12 ರಂದು ಗುವಾಹಟಿಯಲ್ಲಿ ಇಪಿಎಫ್‌ಒದ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (CBT) ಸಭೆಯಲ್ಲಿ ಈ ಹೊಸ ಪಿಂಚಣಿಯ ಪ್ರಸ್ತಾಪವು ಬರುವ ಸಾಧ್ಯತೆ ಇದೆ. ಸಭೆಯಲ್ಲಿ, ನವೆಂಬರ್, 2021 ರಲ್ಲಿ CBT ಯಿಂದ ರಚಿಸಲಾದ ಪಿಂಚಣಿ ಸಂಬಂಧಿತ ಸಮಸ್ಯೆಗಳ ಉಪ ಸಮಿತಿಯು ತನ್ನ ವರದಿಯನ್ನು ಸಹ ಸಲ್ಲಿಸಲಿದೆ. ಒಂದೊಮ್ಮೆ ಈ ಯೋಜನೆ ಘೋಷಣೆಯಾದರೆ ಹೋಳಿ ಹಬ್ಬಕ್ಕೂ ಮುನ್ನವೇ ದೇಶದ ನಾಗರಿಕರಿಗೆ ಸಂತಸದ ಸುದ್ದಿ ಸಿಕ್ಕಂತಾಗಲಿದೆ.

ಇದನ್ನೂ ಓದಿ-EPFO update : 24 ಕೋಟಿ PF ಖಾತೆದಾರರಿಗೆ ಶೀಘ್ರದಲ್ಲಿ ಸಿಗಲಿದೆ ಗುಡ್ ನ್ಯೂಸ್!

ಹೊಸ ವ್ಯವಸ್ಥೆಯ ಅಡಿ ಹೆಚ್ಚಿನ ಪೆನ್ಷನ್ ಸಿಗಲಿದೆ
ಪ್ರಸ್ತುತ ಇರುವ ವ್ಯವಸ್ಥೆಯ ಅಡಿ 15 ಸಾವಿರಕ್ಕಿಂತ ಹೆಚ್ಚಿನ ಮೂಲ ವೇತನ ಪಡೆಯುವ ಆದರೆ EPS-95 ಅಡಿ ಶೇ.8.33 ಕ್ಕಿಂತ ಕಡಿಮೆ ದರದಲ್ಲಿ ಕೊಡುಗೆ ನೀಡುವವ ಸಾಕಷ್ಟು ನೌಕರರಿದ್ದಾರೆ. ಹೀಗಾಗಿ ಅವರಿಗೆ ತುಂಬಾ ಕಡಿಮೆ ಪೆನ್ಷನ್ ಸಿಗುತ್ತದೆ. ಹೊಸ ಯೋಜನೆಯ ಬಳಿಕ ಅವರ ಪೆನ್ಷನ್ ಮೊತ್ತ ಕೂಡ ಹೆಚ್ಚಾಗಲಿದೆ.

ಇದನ್ನೂ ಓದಿ-EPFO ನಿಂದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ! ತಕ್ಷಣ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ, ಭರ್ಜರಿ ಪ್ರಯೋಜನ ಪಡೆಯಿರಿ

ಮೂಲ ವೇತನದ ಮಿತಿಯನ್ನು ರೂ.25 ಸಾವಿರವರೆಗೆ ಹೆಚ್ಚಿಸಲು ಬೇಡಿಕೆ
2014ರಲ್ಲಿಯೇ ಮೂಲ ವೇತನದ ಮಿತಿಯನ್ನು 25,000 ರೂ.ಗೆ ಏರಿಸಬೇಕೆಂಬ ಬೇಡಿಕೆಯಿತ್ತು. ಆದರೆ ಆಗ ಚರ್ಚೆ ನಡೆದಿದ್ದರೂ ಕೂಡ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಉದ್ಯಮದ ಅಂದಾಜಿನ ಪ್ರಕಾರ, ಸಂಘಟಿತ ವಲಯದಲ್ಲಿ 50 ಲಕ್ಷ ಹೆಚ್ಚು ಕಾರ್ಮಿಕರು ಪಿಂಚಣಿ ವೇತನದ ಹೆಚ್ಚಳದೊಂದಿಗೆ EPS-95 ವ್ಯಾಪ್ತಿಯ ಅಡಿಯಲ್ಲಿ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ-EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News