EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ

Provident Fund News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಲಕ್ಷಾಂತರ ಪಿಂಚಣಿದಾರರಿಗೆ ಭಾರಿ ಪರಿಹಾರವನ್ನು ಘೋಷಿಸಿದೆ. ಈಗ ನಿವೃತ್ತ ನೌಕರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಮಾಹಿತಿಗಾಗಿ ಪಿಎಫ್ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.

Written by - Yashaswini V | Last Updated : Mar 26, 2021, 12:38 PM IST
  • ಇಪಿಎಫ್‌ಒ ತನ್ನ ಲಕ್ಷಾಂತರ ಪಿಂಚಣಿದಾರರಿಗೆ ದೊಡ್ಡ ಪರಿಹಾರವನ್ನು ಘೋಷಿಸಿದೆ
  • ಪಿಂಚಣಿದಾರರು ಈಗ ತಮ್ಮ ಜೀವನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಡೆಯಬಹುದಾಗಿದೆ
  • ನೌಕರರ ಪಿಂಚಣಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯು ಈ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ
EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ  title=
Provident Fund News

ನವದೆಹಲಿ: Provident Fund News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಲಕ್ಷಾಂತರ ಪಿಂಚಣಿದಾರರಿಗೆ ದೊಡ್ಡ ಪರಿಹಾರವನ್ನು ಘೋಷಿಸಿದೆ. ಈಗ ನಿವೃತ್ತ ನೌಕರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಮಾಹಿತಿಗಾಗಿ ಪಿಎಫ್ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಇಪಿಎಫ್‌ಒ ತನ್ನ ಪೋರ್ಟಲ್‌ನಲ್ಲಿ ಪಿಂಚಣಿದಾರರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ.

ಜೀವನ ಪ್ರಮಾಣಪತ್ರದ ಪ್ರತಿಯೊಂದು ಮಾಹಿತಿಯು ಇಲ್ಲಿ ಲಭ್ಯ: 
ಪಿಂಚಣಿದಾರರು ಈಗ ತಮ್ಮ ಜೀವನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಇಪಿಎಫ್‌ಒ (EPFO) ಪೋರ್ಟಲ್‌ನಲ್ಲಿ ಪಡೆಯಬಹುದಾಗಿದೆ.  ವಾಸ್ತವವಾಗಿ, ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಇಪಿಎಫ್‌ಒ ಪಿಂಚಣಿದಾರರು ತಮ್ಮ ಜೀವ ಪ್ರಮಾಣಪತ್ರವನ್ನು ಇಪಿಎಫ್‌ಒ ಕಚೇರಿ ಅಥವಾ ಬ್ಯಾಂಕಿನಲ್ಲಿ ಸಲ್ಲಿಸಬೇಕು.

ಪಿಪಿಒ ಸಂಖ್ಯೆಯನ್ನು ಸಹ ತಿಳಿಯಿರಿ :
ನಿವೃತ್ತಿಯ ನಂತರ, ನೌಕರರು ಪಿಂಚಣಿ ಪಡೆಯಲು ಪಿಪಿಒ ಸಂಖ್ಯೆ ಬಹಳ ಮುಖ್ಯವಾಗಿದೆ.  ಪಿಪಿಒ ಸಂಖ್ಯೆ 12 ಅಂಕೆಗಳ ಸಂಖ್ಯೆಯಾಗಿದೆ. ಇದು ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿಗೆ ಯಾವುದೇ ಸಂವಹನಕ್ಕಾಗಿ ಅತ್ಯಗತ್ಯ. ಪಿಪಿಒ ಸಂಖ್ಯೆಯನ್ನು ಪಿಂಚಣಿದಾರರ ಪಾಸ್‌ಬುಕ್‌ನಲ್ಲಿ ನಮೂದಿಸುವ ಅಗತ್ಯವಿದೆ. ಪಿಪಿಒ ಸಂಖ್ಯೆ ಪ್ರತಿ ಹಂತದಲ್ಲಿಯೂ ಮುಖ್ಯ. ಪಿಂಚಣಿದಾರನು ತನ್ನ ಖಾತೆಯನ್ನು ಬ್ಯಾಂಕಿನ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಲು ಬಯಸಿದರೆ ಪಿಪಿಒ ಸಂಖ್ಯೆ ಅಗತ್ಯವಿದೆ. ಈಗ ನೌಕರರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೋರ್ಟಲ್‌ನಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪಿಎಫ್ ಸಂಖ್ಯೆ ಅಥವಾ ನೋಂದಾಯಿತ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿದ ನಂತರ ಪಿಪಿಒ ಸಂಖ್ಯೆ ಲಭ್ಯವಿರುತ್ತದೆ.

ಇದನ್ನೂ ಓದಿ - EPFO update : ಕೆಲಸ ಬದಲಾಯಿತೆಂದು ಪಿಎಫ್ ವಿತ್ ಡ್ರಾ ಮಾಡಿದರೆ ಆಗಲಿದೆ ಭಾರೀ ನಷ್ಟ

ನೀವು ಪಿಂಚಣಿ ಬಗ್ಗೆ ಮಾಹಿತಿ ಪಡೆಯುತ್ತೀರಿ:
ನೌಕರರ ಪಿಂಚಣಿಗೆ (Pension) ಸಂಬಂಧಿಸಿದ ಪ್ರತಿಯೊಂದು ಮಾಹಿತಿಯು ಈ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ. ಈ ಮೊದಲು ಪಿಂಚಣಿದಾರರು ತಮ್ಮ ಸಣ್ಣ-ಪುಟ್ಟ ಕೆಲಸಗಳಿಗೂ ಕೂಡ ಪದೇ ಪದೇ ಪಿಎಫ್ ಕಚೇರಿಗೆ ಅಲೆಯಬೇಕಿತ್ತು. ಆದರೆ ಎಪಿಎಫ್ಒ ಪೋರ್ಟಲ್‌ನಲ್ಲಿ ಪಿಂಚಣಿದಾರರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳು ಲಭ್ಯವಿದ್ದು ಅವರು ಕುಳಿತಲ್ಲಿಯೇ ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ.

ಇದಲ್ಲದೆ ಲೈಫ್ ಸರ್ಟಿಫಿಕೇಟ್ ಪಡೆಯಲು ಈಗ ಪಿಂಚಣಿದಾರರಿಗೆ ಆಧಾರ್ ಕಾರ್ಡ್ ಕೂಡ ಅಗತ್ಯವಿಲ್ಲ. ಸಂದೇಶ್ ಆ್ಯಪ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ಯಾವುದೇ ನವೀಕರಣಗಳಿಗೆ  ಆಧಾರ್ ದೃಢೀಕರಣ ಕಡ್ಡಾಯವಾಗಿರುವುದಿಲ್ಲ. ಬದಲಿಗೆ ಗ್ರಾಹಕರು ಸ್ವಯಂಪ್ರೇರಿತವಾಗಿ ಇದನ್ನು ಸಲ್ಲಿಸಬಹುದಾಗಿದೆ. ಜೀವ ಪ್ರಮಾಣಪತ್ರಗಳನ್ನು ನೀಡಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿತು.

ಇದನ್ನೂ ಓದಿ - EPFO whatsapp helpline : ಕಚೇರಿಗೆ ಅಲೆಯುವ ಅಗತ್ಯವಿಲ್ಲ , ಕುಳಿತಲ್ಲೇ ನಡೆದುಹೋಗುತ್ತದೆ ಕೆಲಸ

ಪಿಂಚಣಿದಾರರಿಗೆ ಜೀವ ಪ್ರಮಾಣಪತ್ರ ಅತ್ಯಗತ್ಯವಾಗಿದೆ. ತಮ್ಮ ಪಿಂಚಣಿ ಪಡೆಯಲು ಹಿರಿಯರು ಜೀವಂತವಾಗಿರುವುದಕ್ಕೆ ಪುರಾವೆಯಾಗಿ ಇದು ಕಾರ್ಯ ನಿರ್ವಹಿಸಲಿದೆ. ಈ ಮೊದಲು ಪಿಂಚಣಿದಾರರು ತಾವು ಪಿಂಚಣಿ ವಿತರಣಾ ಸಂಸ್ಥೆಯಿಂದ ಜೀವ ಪ್ರಮಾಣಪತ್ರವನ್ನು ತರಬೇಕಾಗಿತ್ತು. ಡಿಜಿಟಲ್ ಸೌಲಭ್ಯದ ನಂತರ, ಪಿಂಚಣಿದಾರರ ಸಮಸ್ಯೆಗಳು ಖಂಡಿತವಾಗಿಯೂ ಕಡಿಮೆಯಾಗುತ್ತವೆ. ಆದರೆ ಅನೇಕ ಪಿಂಚಣಿದಾರರು ಆಧಾರ್ ಕಾರ್ಡ್ ಹೊಂದಿರದ ಕಾರಣ ಕೆಲವರು ಪಿಂಚಣಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರು. ಏಕೆಂದರೆ ಹಲವು ವೇಳೆ ಅವರ ಹೆಬ್ಬೆರಳುಗಳು ಹೊಂದಿಕೆಯಾಗುತ್ತಿರಲಿಲ್ಲ.

ಜೀವನ ಪ್ರಮಾಣಪತ್ರದ ಸ್ಟೇಟಸ್ ಅನ್ನು ಇಲ್ಲಿಂದ ಪಡೆಯಿರಿ :
ಪಿಂಚಣಿದಾರರು ಪೋರ್ಟಲ್‌ನಲ್ಲಿ ಜೀವ ಪ್ರಮಾಣಪತ್ರ, ಪಾವತಿ ಮಾಹಿತಿ ಮತ್ತು ಅವರ ಪಿಂಚಣಿ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು https://mis.epfindia.gov.in/PensionPaymentEnquiry/ ನಲ್ಲಿ ಈ ಲಿಂಕ್ ತೆರೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News