ಈಗಲೇ ಈ ಕೆಲಸ ಮಾಡಿ ಮುಗಿಸಿ, EPF ಚಂದಾದಾರರಿಗೆ ಸಿಗುವುದು 50,000 ರೂ. ಬೋನಸ್ !

 EPFO Update:ಇಪಿಎಫ್ ಚಂದಾದಾರರು ಬೋನಸ್‌ಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಆದರೆ ಇದಕ್ಕಾಗಿ ಪ್ರಮುಖ  ಕೆಲಸವೊಂದನ್ನು ಪೂರೈಸಬೇಕು.

Written by - Ranjitha R K | Last Updated : Mar 19, 2024, 10:16 AM IST
  • EPFO ​​ಕಾಲ ಕಾಲಕ್ಕೆ EPF ನಿಯಮಗಳಲ್ಲಿ ಬದಲಾವಣೆ ಮಾಡುತ್ತದೆ
  • EPF ಖಾತೆದಾರರಿಗೆ EPFO ​​ಅನೇಕ ಪ್ರಯೋಜನಗಳನ್ನು ನೀಡುತ್ತದೆ
  • ಎಲ್ಲಾ ಇಪಿಎಫ್ ಸದಸ್ಯರಿಗೆ ಈ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ
ಈಗಲೇ ಈ ಕೆಲಸ ಮಾಡಿ ಮುಗಿಸಿ,  EPF ಚಂದಾದಾರರಿಗೆ ಸಿಗುವುದು 50,000 ರೂ. ಬೋನಸ್ ! title=

EPFO Update : EPF ಚಂದಾದಾರರ ಅನುಕೂಲಕ್ಕಾಗಿ EPFO ​​ಕಾಲ ಕಾಲಕ್ಕೆ EPF ನಿಯಮಗಳಲ್ಲಿ ಬದಲಾವಣೆಗಳು ಮತ್ತು ನವೀಕರಣಗಳನ್ನು ಮಾಡುತ್ತದೆ.ಎಲ್ಲಾ ಇಪಿಎಫ್ ಖಾತೆದಾರರು ಇಪಿಎಫ್‌ಒ ನಿಗದಿಪಡಿಸಿದ ಕೆಲವು ನಿಯಮಗಳನ್ನು ಅನುಸರಿಸಬೇಕು.ನೀವು ಕೂಡಾ ಇಪಿಎಫ್‌ನಲ್ಲಿ ಹೂಡಿಕೆ ಮಾಡಿದ್ದರೆ ಈ ಲೇಖನ ನಿಮಗೆ ಅನುಕೂಲಕರವಾಗಿರಲಿದೆ. EPF ಖಾತೆದಾರರಿಗೆ EPFO ​​ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಆದರೆ ಎಲ್ಲಾ ಇಪಿಎಫ್ ಸದಸ್ಯರಿಗೆ ಈ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ. 

ವಿಮೆಯ ಹೊರತಾಗಿ, ಇಪಿಎಫ್ ಚಂದಾದಾರರು ಇಪಿಎಫ್ ಖಾತೆಯ ಮೂಲಕ ಇತರ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ಇಪಿಎಫ್ ಚಂದಾದಾರರು ಬೋನಸ್‌ಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಆದರೆ ಇದಕ್ಕಾಗಿ ಕೆಲವು ಪ್ರಮುಖ ಷರತ್ತುಗಳನ್ನು ಪೂರೈಸಬೇಕು.ಅಲ್ಲದೆ, ಪರಿಸ್ಥಿತಿಗಳಿಗೆ ಅನುಗುಣವಾಗಿ ಬೋನಸ್ ಮೊತ್ತವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. 

ಇದನ್ನೂ ಓದಿ : Infosys: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ

ಯಾರಿಗೆ ಸಿಗುವುದು ಹೆಚ್ಚುವರಿ ಬೋನಸ್ ? : 
ಲಾಯಲ್ಟಿ ಕಮ್ ಲೈಫ್ ಬೆನಿಫಿಟ್ ಆಧಾರದ ಮೇಲೆ ಈ ಹೆಚ್ಚುವರಿ ಬೋನಸ್ ಅನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಅಲ್ಲದೆ, ಈ ಹೆಚ್ಚುವರಿ ಬೋನಸ್ ಮೊತ್ತವನ್ನು ಪಡೆಯಲು, ನೌಕರರು ಕನಿಷ್ಠ ಇಪ್ಪತ್ತು ವರ್ಷಗಳವರೆಗೆ ಇಪಿಎಫ್‌ಗೆ ಕೊಡುಗೆ ನೀಡಿರಬೇಕು. ಅಂಥಹ ಚಂದಾದಾರು ಮಾತ್ರ ಬೋನಸ್ [ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ, ಹೆಚ್ಚುವರಿ ಬೋನಸ್ ಅನ್ನು ಆಯಾ ಉದ್ಯೋಗಿಗಳ ವೇತನಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎನ್ನುವುದು ಕೂಡಾ ಗಮನಾರ್ಹ. 5,000ದಿಂದ 10,000 ರೂ. ಮೂಲ ವೇತನವನ್ನು ಪಡೆಯುವ ನೌಕರರು 40,000  ರೂ.ವರೆಗೆ ಹೆಚ್ಚುವರಿ ಬೋನಸ್ ಪಡೆಯುತ್ತಾರೆ.10 ಸಾವಿರಕ್ಕಿಂತ ಹೆಚ್ಚು ಮೂಲ ವೇತನ ಇರುವ ನೌಕರರು 50 ಸಾವಿರ ರೂಪಾಯಿ ಹೆಚ್ಚುವರಿ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ. 

ಈ ಉದ್ಯೋಗಿಗಳಿಗೆ ವಿನಾಯಿತಿ :
PF ಚಂದಾದಾರರು 20 ವರ್ಷಕ್ಕಿಂತ ಮೊದಲು  ನಿವೃತ್ತಿಗೊಂದರೆ, ಅವರಿಗೆ ವಿನಾಯಿತಿ ನೀಡಲಾಗುತ್ತದೆ.ಅಂತಹ ಉದ್ಯೋಗಿಗಳಿಗೆ ನಿವೃತ್ತಿಯ ನಂತರ ಹೆಚ್ಚುವರಿ ಬೋನಸ್ ನೀಡಲಾಗುತ್ತದೆ.ಆದರೆ ಹೆಚ್ಚುವರಿ ಬೋನಸ್ ಮೊತ್ತವನ್ನು ನಿರ್ಧರಿಸುವ ನಿಯಮಗಳು ಇಲ್ಲಿ ಕೂಡಾ ಒಂದೇ ಆಗಿರುತ್ತವೆ. ಅಂದರೆ ಅವರ ಮೂಲ ವೇತನದ ಆಧಾರದ ಮೇಲೆ ಅವರ ಬೋನಸ್ ಅನ್ನು ನಿರ್ಧರಿಸಲಾಗುತ್ತದೆ. 

ಇದನ್ನೂ ಓದಿ : Modi Government ಅದ್ಭುತ ಯೋಜನೆ, ಮಹಿಳೆಯರ ಖಾತೆಗೆ ಬರುತ್ತವೆ 5 ಲಕ್ಷ ರೂ!

ನಾಮಿನಿ ಮಾಡುವುದು ಅಗತ್ಯ :
ಈ ಹೆಚ್ಚುವರಿ ಬೋನಸ್ ಸೌಲಭ್ಯಕ್ಕೆ ಅರ್ಹರಾಗಿರುವ ಪಿಎಫ್ ಸದಸ್ಯರು ಹೆಚ್ಚುವರಿ ಬೋನಸ್‌ಗೆ ಅರ್ಜಿ ಸಲ್ಲಿಸಬಹುದು.ತಮ್ಮ ಖಾತೆಯಲ್ಲಿ ಪಿಎಫ್ ನಾಮಿನಿ ಮಾಡದ ನೌಕರರಿಗೆ ಈ ಸೌಲಭ್ಯ ಸಿಗುವುದಿಲ್ಲ. ಇಲ್ಲಿಯವರೆಗೆ  ಇ-ನಾಮಿನಿ ಮಾಡದಿರುವ ನೌಕರರು ತಕ್ಷಣ ಈ ಕೆಲಸ ಪೂರೈಸಿಕೊಳ್ಳಿ. ಇಲ್ಲದಿದ್ದರೆ, ಈ ಸೌಲಭ್ಯದಿಂದ ನೀವು ವಂಚಿತರಾಗುತ್ತೀರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News