ದೇಶದ ಈ ಭಾಗದಲ್ಲಿ ಅಗ್ಗವಾಗಲಿದೆ Electricity Bill, ನಿಮಗೂ ಸಿಗಲಿದೆಯೇ ಈ ಪರಿಹಾರ

Electricity Bill: ಸಾಮಾನ್ಯ ಬಳಕೆಯ ಜೊತೆಗೆ, ಎಲೆಕ್ಟ್ರಿಕ್ ಕಾರುಗಳು, ಇ-ಬೈಕ್‌ಗಳನ್ನು ಉತ್ತೇಜಿಸಲು ಮುಂಬಯಿಯಲ್ಲಿ ವಿದ್ಯುತ್ ದರವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

Written by - Yashaswini V | Last Updated : Mar 5, 2021, 02:30 PM IST
  • ಏಪ್ರಿಲ್ 1 ರಿಂದ ದೇಶೀಯ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ಅಗ್ಗವಾಗಿಸಲು ವಿದ್ಯುತ್ ಕಂಪನಿಗಳು ನಿರ್ಧರಿಸಿವೆ
  • ವಿದ್ಯುತ್ ದರವನ್ನು 5 ರಿಂದ 11 ಪ್ರತಿಶತದಷ್ಟು ಇಳಿಸಲಾಗಿದೆ
  • ಕಡಿಮೆಗೊಳಿಸಿದ ದರಗಳು ಮುಂದಿನ ಐದು ವರ್ಷಗಳವರೆಗೆ ಅನ್ವಯವಾಗುತ್ತವೆ
ದೇಶದ ಈ ಭಾಗದಲ್ಲಿ ಅಗ್ಗವಾಗಲಿದೆ Electricity Bill, ನಿಮಗೂ ಸಿಗಲಿದೆಯೇ ಈ ಪರಿಹಾರ  title=
Electricity becomes cheaper

ಮುಂಬೈ :  Electricity Bill: ದೇಶದ ಜನರು ಹಣದುಬ್ಬರದ ಆಘಾತವನ್ನು ಎಲ್ಲಾ ಕಡೆಯಿಂದಲೂ ಅನುಭವಿಸುತ್ತಿರಬಹುದು, ಆದರೆ ಮುಂಬೈ ಜನರಿಗೆ ಒಳ್ಳೆಯ ಸುದ್ದಿ ಇದೆ. ಏಪ್ರಿಲ್ 1 ರಿಂದ ದೇಶೀಯ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ಅಗ್ಗವಾಗಿಸಲು ವಿದ್ಯುತ್ ಕಂಪನಿಗಳು ನಿರ್ಧರಿಸಿವೆ. ಮಹಾರಾಷ್ಟ್ರದಲ್ಲಿ ವಿದ್ಯುತ್ ದರವನ್ನು 5 ರಿಂದ 11 ಪ್ರತಿಶತದಷ್ಟು ಇಳಿಸಲಾಗಿದೆ. ಕಡಿಮೆಗೊಳಿಸಿದ ದರಗಳು ಮುಂದಿನ ಐದು ವರ್ಷಗಳವರೆಗೆ ಅನ್ವಯವಾಗುತ್ತವೆ. ಟಾಟಾ ಪವರ್, ಅದಾನಿ ಪವರ್, ಮಹಾರಾಷ್ಟ್ರ ವಿದ್ಯುತ್ ಮತ್ತು ಬೆಸ್ಟ್ ಗ್ರಾಹಕರು ಏಪ್ರಿಲ್ 1 ರಿಂದ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಟಾಟಾ ಪವರ್ (Tata Power) ವಿದ್ಯುತ್ ದರವನ್ನು ಕಡಿಮೆ ಮಾಡಿತು :
ಯುಟಿಲಿಟಿ ಸುಂಕದಲ್ಲಿ, ಟಾಟಾ ಪವರ್ ಗ್ರಾಹಕರು 0-100 ಯುನಿಟ್‌ಗಳ ಬ್ರಾಕೆಟ್‌ನಲ್ಲಿ 4% ರಿಯಾಯಿತಿ ಪಡೆಯುತ್ತಾರೆ. 0-100 ಯುನಿಟ್ ವ್ಯಾಪ್ತಿಯಲ್ಲಿ ಬರುವ ಕಡಿಮೆ ಬಳಕೆಯ ಟಾಟಾ ಪವರ್ ಗ್ರಾಹಕರಿಗೆ, ವಿದ್ಯುತ್ (Electricity) ದರವನ್ನು ಪ್ರತಿ ಯೂನಿಟ್‌ಗೆ 3.77 ರೂ.ನಿಂದ 3.63 ಕ್ಕೆ ಇಳಿಸಲಾಗುವುದು, ಇದು ಸುಮಾರು 4 ಪ್ರತಿಶತದಷ್ಟು ಅಗ್ಗವಾಗಿದೆ. 101-300 ಯುನಿಟ್‌ಗಳ ವಿಭಾಗದಲ್ಲಿ ಬರುವ ಗ್ರಾಹಕರಿಗೆ 4 ಪೈಸೆ ಅಥವಾ 1% ಕಡಿತ ಸಿಗುತ್ತದೆ. ಹೆಚ್ಚಿನ ಬಳಕೆಯ ಗ್ರಾಹಕರಿಗೆ ಅಂದರೆ 301-500 ಯುನಿಟ್ ವಿಭಾಗದ ಸುಂಕವನ್ನು ಸುಮಾರು 1% ಹೆಚ್ಚಿಸಲಾಗಿದೆ.

ಬೆಸ್ಟ್ (BEST) ಸಹ ವಿದ್ಯುತ್ ದರವನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ:
ಬೆಸ್ಟ್‌ನ 10.5 ಲಕ್ಷ ಗ್ರಾಹಕರಿಗೆ ಮೊದಲ ಎರಡು ಸ್ಲ್ಯಾಬ್‌ಗಳ ಸುಂಕದಲ್ಲಿ ಯಾವುದೇ ಬದಲಾವಣೆಗಳಿಲ್ಲ, ಅಂದರೆ 0-100 ಯುನಿಟ್‌ಗಳು ಮತ್ತು 101-300 ಯುನಿಟ್‌ಗಳಿಗೆ ದರಗಳು ಬದಲಾಗುವುದಿಲ್ಲ. ಅದರ ಹೆಚ್ಚಿನ ಗ್ರಾಹಕರು ಕೊಲಾಬಾ, ಸಿಯಾನ್, ಕಫ್ ಪೆರೇಡ್ ಮತ್ತು ಮಹೀಮ್ ನಲ್ಲಿದ್ದಾರೆ. ಹೆಚ್ಚಿನ ಬಳಕೆ ಹೊಂದಿರುವ ಗ್ರಾಹಕರಿಗೆ ಸುಂಕದಲ್ಲಿ 1% ರಿಯಾಯಿತಿ ಸಿಗುತ್ತದೆ, ಇದು ಮುಂದಿನ ಹಣಕಾಸು ವರ್ಷದ ಆರಂಭದಿಂದ ಅಂದರೆ 2021 ಏಪ್ರಿಲ್ 1 ರಿಂದ ಅನ್ವಯವಾಗುತ್ತದೆ.

ಇದನ್ನೂ ಓದಿ - ದುಬಾರಿಯಾಗಲಿದೆ LED ಲೈಟ್ಸ್, 5-10% ಬೆಲೆ ಏರಿಕೆ ಸೂಚನೆ ನೀಡಿದ ಕಂಪನಿಗಳು

ಅದಾನಿ ವಿದ್ಯುಚ್ಛಕ್ತಿಯ (Adani Electricity) ಬಳಕೆದಾರರಿಗೆ ಬಿಲ್ ಕಡಿಮೆಯಾಗುತ್ತದೆ:
ಅದಾನಿ ವಿದ್ಯುತ್‌ನ ಕಡಿಮೆ ಬಳಕೆಯ ಬಳಕೆದಾರರಿಗೆ ಸುಂಕವನ್ನು ಸುಮಾರು 1% ರಷ್ಟು ಹೆಚ್ಚಿಸಲಾಗಿದೆ, ಆದರೆ ಹೆಚ್ಚಿನ ಬಳಕೆಯ ಗ್ರಾಹಕರಿಗೆ ಅಂದರೆ 301-500 ಯುನಿಟ್‌ಗಳ ವ್ಯಾಪ್ತಿಯಲ್ಲಿ ಅಥವಾ 500 ಯೂನಿಟ್‌ಗಳಿಗಿಂತ ಹೆಚ್ಚು ಯುನಿಟ್ ಬಳಸುವ ಗ್ರಾಹಕರಿಗೆ ಏಪ್ರಿಲ್ 1 ರಿಂದ ಅಗ್ಗದ ವಿದ್ಯುತ್ ಸಿಗುತ್ತದೆ .

ಎಂಎಸ್‌ಇಡಿಸಿಎಲ್ (MSEDCL) ಕೂಡ ದರವನ್ನು ಕಡಿಮೆ ಮಾಡಿತು :
ಭಂಡಪ್, ಮುಲುಂಡ್, ಥಾಣೆ, ನವೀ ಮುಂಬೈ ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ವಾಸಿಸುವ MSEDCL (Maharashtra State Electricity Distribution Company Limited) ಗ್ರಾಹಕರಿಗೆ ಶೇಕಡಾ 2 ರಷ್ಟು ಅಗ್ಗದ ವಿದ್ಯುತ್ ಸಿಗುತ್ತದೆ. 500 ಯುನಿಟ್ ಗಿಂತ ಹೆಚ್ಚು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು 4 ಪೈಸೆ ಅಥವಾ ಸುಮಾರು 1 ಶೇಕಡಾ ಹೆಚ್ಚಿನ ಸುಂಕವನ್ನು ಪಾವತಿಸಬೇಕಾಗುತ್ತದೆ.

ಬೆಸ್ಟ್ (BEST) ಪವರ್ ಅಗ್ಗವಾಗಿದೆ :
ಸತತ ಐದನೇ ವರ್ಷವೂ ಬೆಸ್ಟ್ (BEST) ಮಹಾರಾಷ್ಟ್ರದಲ್ಲಿ (Maharashtra) ಅಗ್ಗದ ವಿದ್ಯುತ್ ಒದಗಿಸುವುದನ್ನು ಮುಂದುವರಿಸಲಿದೆ. ಎಂಎಸ್ಇಡಿಸಿಎಲ್ 2021-22ರಲ್ಲಿ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಹೆಚ್ಚಿನ ಸುಂಕವನ್ನು ಹೊಂದಿದೆ. ಎಂಎಸ್‌ಇಡಿಸಿಎಲ್ 26 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಮುಂಬೈನಲ್ಲಿ 7 ಲಕ್ಷ ಗ್ರಾಹಕರನ್ನು ಹೊಂದಿರುವ ಟಾಟಾ ಪವರ್, ಅಗ್ಗದ ವಿದ್ಯುಚ್ಛಕ್ತಿಯ ವಿಷಯದಲ್ಲಿ ಅದಾನಿ ವಿದ್ಯುತ್ ನಂತರದ ಸ್ಥಾನದಲ್ಲಿದೆ, ಅದಾನಿ 30 ಲಕ್ಷ ಗ್ರಾಹಕರನ್ನು ಹೊಂದಿದೆ.

ಇದನ್ನೂ ಓದಿ - ದೇಶದ ಹೆದ್ದಾರಿಗಳಲ್ಲಿ ಚಲಿಸಲಿವೆ Electric ವಾಹನಗಳು

45,000 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ:
ವಿದ್ಯುತ್ ದರಗಳಲ್ಲಿನ ಈ ಕಡಿತವು ಕರೋನವೈರಸ್‌ನಿಂದ (Coronavirus) ಬಳಲುತ್ತಿರುವ ಲಕ್ಷಾಂತರ ದೇಶೀಯ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಪರಿಹಾರ ನೀಡುತ್ತದೆ. ಗಮನಾರ್ಹವಾಗಿ ಮಹಾರಾಷ್ಟ್ರದಲ್ಲಿ ಒಟ್ಟು 45,000 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.

ಇ-ವಾಹನಗಳಿಗೂ ವಿದ್ಯುತ್ ಅಗ್ಗವಾಗಿದೆ :
ಇ-ವಾಹನಗಳನ್ನು ಉತ್ತೇಜಿಸುವ ಸಲುವಾಗಿ, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ದರವನ್ನು ಪ್ರತಿ ಯೂನಿಟ್‌ಗೆ 6 ರೂ.ನಿಂದ 5.5 ರೂ.ಗೆ ಇಳಿಸಲಾಗಿದೆ. ಪೆಟ್ರೋಲ್-ಡೀಸೆಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆ (Maintenance) ಕೂಡ ಕಡಿಮೆಯಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News