ನವದೆಹಲಿ : ದೇಶದಲ್ಲಿ ಎಲೆಕ್ಟ್ರಿಕ್ ವಾಹನವನ್ನು ಯಶಸ್ವಿಗೊಳಿಸುವತ್ತ ಮೋದಿ ಸರ್ಕಾರ ಹೆಚ್ಚಿನ ಗಮನಹರಿಸಿದೆ, ಆದರೆ ಇ-ವಾಹನ ಅಂದರೆ ಎಲೆಕ್ಟ್ರಿಕ್ ವಾಹನದ ಪ್ರಮುಖ ಸವಾಲು ಏನೆಂದರೆ ಇ-ವಾಹನಗಳು (E vehicles) ಇನ್ನೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗಲು ಅಗತ್ಯ ಮೂಲಸೌಕರ್ಯ ಸಿದ್ಧವಾಗಿಲ್ಲ. ಹಾಗಾಗಿ ಈ ವಾಹನಗಳ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲದಿರುವುದು.
ಈ ಸವಾಲನ್ನು ನಿವಾರಿಸಲು ಖಾಸಗಿ ಪ್ಲೇಯರ್ಸ್ ಜೊತೆಗೆ ಸೇರಿ ಇ-ಹೆದ್ದಾರಿ ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಜೈಪುರ-ದೆಹಲಿ-ಆಗ್ರಾ ಮಾರ್ಗದಲ್ಲಿ ಮೊದಲ ಇ-ಹೆದ್ದಾರಿ ನಿರ್ಮಾಣವಾಗಲಿದ್ದು ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಕಾರಿಡಾರ್ ಸಿದ್ಧಪಡಿಸಲಾಗುತ್ತಿದೆ.
ಡಿಸೆಂಬರ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್-ಇಲ್ಲಿದೆ ಅದರ ಬೆಲೆ, ವೈಶಿಷ್ಟ್ಯ
ಜೈಪುರ-ಆಗ್ರಾ ನಡುವಿನ ವಿದ್ಯುತ್ ಹೆದ್ದಾರಿ :
500 ಕಿ.ಮೀ ಉದ್ದದ ಈ ಜೈಪುರ-ಆಗ್ರಾ ಇ-ಕಾರಿಡಾರ್ನ ವಿಶೇಷತೆಯೆಂದರೆ ಅದು ವಿದ್ಯುತ್ ಅನ್ನು ಸಾರ್ವಜನಿಕ ಸಾರಿಗೆಗೆ ಮಾತ್ರ ಒದಗಿಸುವುದಿಲ್ಲ, ಖಾಸಗೀ ಇ-ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ನಿಂದ ತಾಂತ್ರಿಕ ಸಹಾಯ ಅಥವಾ ಬ್ಯಾಕಪ್ ಸೌಲಭ್ಯವನ್ನು ಸಹ ನೀಡಲಾಗುವುದು. ಈಗಾಗಲೇ ದೆಹಲಿ ಆಗ್ರಾ ಮಾರ್ಗದಲ್ಲಿ ಟ್ರಯಲ್ ರನ್ ಪ್ರಾರಂಭವಾಗಿದೆ. 2021ರ ಫೆಬ್ರವರಿ ವೇಳಗೆ ದೆಹಲಿ ಜೈಪುರ ಮಾರ್ಗದಲ್ಲಿ ಇ-ವಾಹನದೊಂದಿಗೆ ಟ್ರಯಲ್ ರನ್ ಪ್ರಾರಂಭವಾಗಲಿದೆ.
ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಮುಂದಾದ OLA
ವಿಶೇಷ ಮಾಹಿತಿ:-
- ಜೈಪುರ - ದೆಹಲಿ - ಆಗ್ರಾ ಹೆದ್ದಾರಿಯಲ್ಲಿ ವಿದ್ಯುತ್ ಕಾರಿಡಾರ್ ನಿರ್ಮಿಸಲಾಗುವುದು
- 500 ಕಿ.ಮೀ ಜೈಪುರ - ದೆಹಲಿ (Delhi) - ಆಗ್ರಾ ಇ ಕಾರಿಡಾರ್ನಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಯೋಗ ಪ್ರಾರಂಭ
- 20 ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲು ಯೋಜನೆ
- 30 ನಿಮಿಷಗಳಲ್ಲಿ ತಾಂತ್ರಿಕ ಸಹಾಯ ಅಥವಾ ಬ್ಯಾಕಪ್ ಸೌಲಭ್ಯ
- 200 ಮಿಲಿಯನ್ ಹೂಡಿಕೆ ಮಾಡುವ ಮೂಲಕ ಕಾರಿಡಾರ್ ನಿರ್ಮಿಸಲಾಗುವುದು
- ವಾರ್ಷಿಕವಾಗಿ 90,000 ವಾಹನಗಳಿಂದ ಇ-ಕಾರಿಡಾರ್ ಬಳಕೆ ಅಂದಾಜು
- ಇ ಕಾರಿಡಾರ್ ಅನ್ನು ಅತ್ಯಲ್ಪ ಶುಲ್ಕಕ್ಕೆ ಬಳಸಲಾಗುವುದು
- ಇ ಕಾರಿಡಾರ್ನಲ್ಲಿ ಪಿಎಸ್ಯು, ಖಾಸಗಿ ಪ್ಲೇಯರ್, ಸಿಎಸ್ಆರ್ ಹೂಡಿಕೆಗೆ ಅವಕಾಶ
69 ಸಾವಿರ ಪೆಟ್ರೋಲ್ ಪಂಪ್ಗಳಲ್ಲಿ E-vehicle ಚಾರ್ಜಿಂಗ್ ಕಿಯೋಸ್ಕ್ ಅಳವಡಿಕೆ!
ಪೆಟ್ರೋಲ್ ಪಂಪ್ನಲ್ಲಿ ಚಾರ್ಜಿಂಗ್ ಸ್ಟೇಷನ್ :
ದೇಶದ ಪ್ರತಿ ಪೆಟ್ರೋಲ್ ಪಂಪ್ನಲ್ಲಿ E-vehicle ಚಾರ್ಜಿಂಗ್ ಕಿಯೋಸ್ಕ್ (E-vehicle charging kiosks) ಸ್ಥಾಪಿಸುವ ಯೋಜನೆ ಇದೆ ಎಂದು ಸರ್ಕಾರ ಇತ್ತೀಚಿಗೆ ಘೋಷಿಸಿದೆ. ದೇಶದ 69,000 ಪೆಟ್ರೋಲ್ ಪಂಪ್ಗಳಲ್ಲಿ ಕಿಯೋಸ್ಕ್ ಚಾರ್ಜ್ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಮುಂದಿನ 5 ವರ್ಷಗಳಲ್ಲಿ ಭಾರತವನ್ನು ಅಟೋಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ನ ಪ್ರಮುಖ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.