Edible Oil Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ!

ಕಳೆದ ಒಂದು ವರ್ಷದಲ್ಲಿ ಸಾಸಿವೆ ಎಣ್ಣೆಯ ಬೆಲೆ ಬಹುತೇಕ ದುಪ್ಪಟ್ಟಾಗಿದ್ದು, ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಲು ಪರದಾಡುವಂತಾಗಿದೆ.

Written by - Channabasava A Kashinakunti | Last Updated : Dec 2, 2021, 10:19 PM IST
  • ಡಬಲ್ ಆದ ಸಾಸಿವೆ ಎಣ್ಣೆ ಬೆಲೆ
  • ಎಣ್ಣೆ ಇಲ್ಲದೆ ಆಹಾರ ಬೇಯಿಸುವುದು ಹೇಗೆ?
  • ಸರ್ಕಾರದ ಕ್ರಮಗಳು ಸಾಕಷ್ಟಿಲ್ಲ ಎಂಬುದು ಸಾಬೀತು
Edible Oil Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ! title=

ನವದೆಹಲಿ : ಏರುತ್ತಿರುವ ಹಣದುಬ್ಬರವು ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಕಳೆದ ಒಂದು ವರ್ಷದಲ್ಲಿ ಸಾಸಿವೆ ಎಣ್ಣೆಯ ಬೆಲೆ ಬಹುತೇಕ ದುಪ್ಪಟ್ಟಾಗಿದ್ದು, ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಲು ಪರದಾಡುವಂತಾಗಿದೆ.

ಡಬಲ್ ಆದ ಸಾಸಿವೆ ಎಣ್ಣೆ ಬೆಲೆ 

ವರದಿಯ ಪ್ರಕಾರ, ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಸಾಸಿವೆ ಎಣ್ಣೆ(Mustard Oil)ಯ ಬೆಲೆ ಲೀಟರ್‌ಗೆ 90-95 ರೂ. ಈಗ ಅದೇ ಬೆಲೆ ಲೀಟರ್ ಗೆ 174 ರೂ.ನಿಂದ 190 ರೂ.ಗೆ ಏರಿಕೆಯಾಗಿದೆ. ಇದಕ್ಕೂ ಮೊದಲು, 2019 ಮತ್ತು 2020 ರ ನಡುವೆ, ಸಾಸಿವೆ ಎಣ್ಣೆಯಲ್ಲಿ ಸುಮಾರು 50 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ : ಗ್ರಾಹಕರ ಗಮನಕ್ಕೆ: ಹೊಸ ವರ್ಷದಿಂದ ದುಬಾರಿಯಾಗಲಿವೆ ಮಾರುತಿ ಸುಜುಕಿ ಕಾರುಗಳು

ಎಣ್ಣೆ ಇಲ್ಲದೆ ಆಹಾರ ಬೇಯಿಸುವುದು ಹೇಗೆ?

ಸಾಸಿವೆ ಎಣ್ಣೆ ಅಡುಗೆಗೆ ಅಗತ್ಯವಾದ ವಸ್ತುವಾಗಿದೆ. ಹಣದುಬ್ಬರವನ್ನು ತಪ್ಪಿಸಲು ಅನೇಕ ಕುಟುಂಬಗಳು ಈ ತೈಲ(Oil)ದ ಬಳಕೆಯನ್ನು ಕಡಿಮೆ ಮಾಡಿದೆ. ಆದರೆ, ಸಾಸಿವೆ ಎಣ್ಣೆ ಇಲ್ಲದೇ ಆ ಊಟ ಮಾಡುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ವರದಿಯ ಪ್ರಕಾರ, ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ಖಾದ್ಯ ತೈಲಗಳ(Edible Oil) ಉತ್ಪಾದನೆಯು ತುಂಬಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಬೇಡಿಕೆಯನ್ನು ಪೂರೈಸಲು ವಿದೇಶದಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಖಾದ್ಯ ತೈಲಗಳ ಬೆಲೆಯನ್ನು ತಗ್ಗಿಸಲು ಸರ್ಕಾರವು ಸೋಯಾಬೀನ್ ಎಣ್ಣೆ, ಪಾಮ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿತ್ತು. ಇದರೊಂದಿಗೆ ಮೂಲ ಸುಂಕವನ್ನೂ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ : PF ಖಾತೆದಾರರಿಗೆ ಬಿಗ್ ಶಾಕ್ : ಈ ಕೆಲಸ ಮಾಡದಿದ್ದರೆ ತಪ್ಪಿದ್ದಲ್ಲ ಸಮಸ್ಯೆ!

ಏರುತ್ತಿರುವ ಹಣದುಬ್ಬರ

ಸರ್ಕಾರದ ಈ ಕ್ರಮಗಳ ಪರಿಣಾಮ ಮೊದಲ ಕೆಲವು ದಿನಗಳಲ್ಲಿ ಗೋಚರಿಸಿತು. ಆದರೆ, ನಂತರ ಆ ಕ್ರಮಗಳೂ ವಿಫಲವಾದವು. ಅಂದಿನಿಂದ, ಖಾದ್ಯ ತೈಲಗಳ ಬೆಲೆ ನಿರಂತರವಾಗಿ ಆಕಾಶದ ಕಡೆಗೆ ಏರುತ್ತಿದೆ. ಈ ಕಾರಣದಿಂದಾಗಿ, ಜನರ ಅಡುಗೆಮನೆಯ ಬಜೆಟ್ ನಿರಂತರವಾಗಿ ಹದಗೆಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News