Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF

Economic Growth Rate - ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವಿಕಾಸ ದರ ದಾಖಲೆಯ ಶೇಕಡಾ 11.5ಕ್ಕೆ ತಲುಪಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಂಗಳವಾರ ಹೇಳಿದೆ.

Written by - Nitin Tabib | Last Updated : Jan 26, 2021, 09:07 PM IST
  • 2021ರಲ್ಲಿ ಭಾರತದ ಅರ್ಥಿಕ ವಿಕಾಸ ದರ ಶೇ.11.5 ರಷ್ಟಿರಲಿದೆ.
  • IMF ನಿಂದ ವರ್ಲ್ಡ್ ಎಕಾನಾಮಿಕ್ ಔಟ್ ಲುಕ್ 2021 ವರದಿ ಬಿಡುಗಡೆ.
  • ಭಾರತದ ಆರ್ಥಿಕತೆ ಕುರಿತು ಅಂದಾಜು ವ್ಯಕ್ತಪಡಿಸಿದ IMF.
Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF title=
Indian Economy Forecast 2021 (File Photo)

Economic Growth Rate - ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವಿಕಾಸ ದರ ದಾಖಲೆಯ ಶೇಕಡಾ 11.5ಕ್ಕೆ ತಲುಪಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಂಗಳವಾರ ಹೇಳಿದೆ. ಮಹಾಮಾರಿಯ ಪ್ರಕೋಪದ ಮಧ್ಯೆಯೂ ಕೂಡ ವಿಶ್ವದ ಅತಿ ದೊಡ್ಡ ಆರ್ಥಿಕತೆಗಳಲ್ಲಿ ಎರಡು ಅಂಕಿಗಳ ವಿಕಾಸ ದರವನ್ನು ಸಾಧಿಸುವ ಏಕಮಾತ್ರ ದೇಶ ಭಾರತಗಾಗಲಿದೆ ಎಂದು IMF ಅಂದಾಜು ವ್ಯಕ್ತಪಡಿಸಿದೆ.

IMF ವತಿಯಿಂದ ಮಂಗಳವಾರ ಬಿಡುಗಡೆ ಮಾಡಲಾಗಿರುವ ವರ್ಲ್ಡ್ ಎಕಾನಾಮಿಕ್ ಔಟ್ ಲುಕ್ (World Economic Outlook 2021) ವರದಿಯಲ್ಲಿ ಭಾರತದ ಆರ್ಥಿಕ ಸ್ಥಿತಿಯಲ್ಲಿ ವೇಗದಲ್ಲಿ ಬದಲಾವಣೆಗಲಾಗಳಿವೆ ಎಂದು ಅಂದಾಜು ವ್ಯಕ್ತಪಡಿಸಲಾಗಿದೆ. 2020ರಲ್ಲಿ ಕೊರೊನಾ ಮಹಾಮಾರಿಯ ಕಾರಣ ದೇಶದ ಅರ್ಥಿಕ ಸ್ಥಿತಿ ದಾಖಲೆಯ ಮಟ್ಟಕ್ಕೆ ಕುಸಿದಿದೆ ಮತ್ತು ಅದು ಶೇ.8 ರಷ್ಟು ಸಂಕುಚಿತಗೊಳ್ಳುವ ಅಂದಾಜು ವ್ಯಕ್ತಪಡಿಸಲಾಗಿದೆ.

ಇದನ್ನು  ಓದಿ- ಭಾರತೀಯ ಆರ್ಥಿಕತೆ ಬಗ್ಗೆ ಕಹಿ ಸುದ್ದಿ! ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿಯಿಂದ ಬಹಿರಂಗ

ಇನ್ನೊಂದೆಡೆ 2021ರಲ್ಲಿ ಭಾರತೀಯ ಆರ್ಥಿಕ ಪ್ರಗತಿಯ ವೇಗ ಶೇ.11.5 ರಷ್ಟು ವೇಗದಲ್ಲಿ ಹೆಚ್ಚಾಗಲಿದೆ ಹಾಗೂ ವಿಶ್ವದ ಅತಿ ದೊಡ್ಡ ಆರ್ಥವ್ಯವಸ್ಥೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಏಕಮಾತ್ರ ದೇಶ 2 ಅಂಕಿಗಳ ಪ್ರಗತಿ ಸಾಧಿಸಲಿದೆ. ಎರಡನೇ ಸ್ಥಾನದಲ್ಲಿ ಚೀನಾ ಇರಲಿದ್ದು, ಚೀನಾದ ಆರ್ಥಿಕ ಪ್ರಗತಿ ದರ ಶೇ.8.1 ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಚೀನಾ ಬಳಿಕ ಸ್ಪೇನ್ (ಶೇ.5.9 ) ಹಾಗೂ ಫ್ರಾನ್ಸ್ (ಶೇ.5.5) ಇರಲಿವೆ.

ಇದನ್ನು ಓದಿ-ಸಣ್ಣ ರೈತರು ಹಾಗೂ ಸ್ಟಾರ್ಟ್ ಅಪ್ ಗಳಿಗೆ RBIನ ಬೂಸ್ಟರ್ ಡೋಸ್

ಐಎಂಎಫ್ ಮಂಗಳವಾರ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ lo ಟ್‌ಲುಕ್ ನವೀಕರಣವು ಭಾರತದ ಆರ್ಥಿಕತೆಯಲ್ಲಿ ಶೀಘ್ರ ಚೇತರಿಕೆ ಮುನ್ಸೂಚನೆ ನೀಡಿದರೆ, 2020 ರಲ್ಲಿ ನಡೆದ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಆರ್ಥಿಕತೆಯು ದಾಖಲೆಯ ಕುಸಿತವನ್ನು ಅನುಭವಿಸಿತು ಮತ್ತು ಶೇಕಡಾ 8 ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ.

ಇದನ್ನು ಓದಿ-ಕರೋನಾ ಬಿಕ್ಕಟ್ಟಿನ ನಡುವೆಯೂ ಚೇತರಿಕೆ ಕಂಡ ಭಾರತೀಯ ಆರ್ಥಿಕತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News