/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಇತ್ತೀಚಿನ ದಿನಗಳಲ್ಲಿ ಹಳೆಯ ನಾಣ್ಯ ಮತ್ತು ನೋಟುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರವೃತ್ತಿ ತೀವ್ರಗೊಂಡಿದೆ. ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡುವ ಅನೇಕ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಿವೆ. ಆದರೆ ಈ ಬಗ್ಗೆ ಆರ್‌ಬಿಐ ಅಗತ್ಯ ಮಾಹಿತಿ ನೀಡಿದೆ. ಆನ್‌ಲೈನ್, ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯ ನೋಟುಗಳು ಮತ್ತು ನಾಣ್ಯಗಳ ಮಾರಾಟಕ್ಕಾಗಿ ಕೆಲವು ಮೋಸದ ಜಾಲಗಳು ಸೆಂಟ್ರಲ್‌ ಬ್ಯಾಂಕ್‌ನ ಹೆಸರು ಮತ್ತು ಲೋಗೋವನ್ನು ಬಳಸುತ್ತಿವೆ ಎಂದು ಆರ್‌ಬಿಐ ಹೇಳಿದೆ. 

ಇದನ್ನೂ ಓದಿ:ಫೋನ್ ಬದಲಾಯಿಸಿದರೂ ಕೂಡ ನಿಮ್ಮ ವಾಟ್ಸ್ ಆಪ್ ಚಾಟ್, ಫೋಟೋ ಹಾಗೂ ವಿಡಿಯೋಗಳು ಡಿಲೀಟ್ ಆಗಲ್ಲ, ಈ ವಿಧಾನ ಅನುಸರಿಸಿ

ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. "ಕೆಲವು ಅಂಶಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಮತ್ತು ಲೋಗೋವನ್ನು ವಿವಿಧ ಆನ್‌ಲೈನ್, ಆಫ್‌ಲೈನ್ ವಂಚಕರು ತಪ್ಪಾಗಿ ಬಳಸುತ್ತಿರುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗಮನಕ್ಕೆ ಬಂದಿದೆ. ಪ್ಲಾಟ್‌ಫಾರ್ಮ್ ಮೂಲಕ ಹಳೆಯ ಬ್ಯಾಂಕ್‌ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಲು ಶುಲ್ಕಗಳು/ಕಮಿಷನ್‌ಗಳು ಅಥವಾ ತೆರಿಗೆಗಳಿಗಾಗಿ ಈ ಕೆಲಸ ಮಾಡಲಾಗುತ್ತಿದೆ" ಎಂದು ಆರ್‌ಬಿಐ ಟ್ವೀಟ್‌ ಮಾಡಿದೆ.

ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಮತ್ತು ಅಂತಹ ವಹಿವಾಟುಗಳಿಗೆ ಯಾರಿಂದಲೂ ಯಾವುದೇ ಶುಲ್ಕ ಅಥವಾ ಕಮಿಷನ್ ಕೇಳುವುದಿಲ್ಲ ಎಂದು ಹೇಳಿದೆ. ಅದೇ ಸಮಯದಲ್ಲಿ, ಅಂತಹ ಚಟುವಟಿಕೆಗಳಿಗೆ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಯಾವುದೇ ರೀತಿಯ ಅಧಿಕಾರವನ್ನು ನೀಡಿಲ್ಲ ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ:Government Alert SBI Customer: ಎಸ್ ಬಿ ಐ ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ, ಈ ಸಂದೇಶ ತಕ್ಷಣ ಡಿಲೀಟ್ ಮಾಡಿ

ಆರ್‌ಬಿಐ ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ:

ಆರ್‌ಬಿಐ ಅಂತಹ ವಿಷಯಗಳಲ್ಲಿ ವ್ಯವಹರಿಸುವುದಿಲ್ಲ ಅಥವಾ ಯಾರಿಂದಲೂ ಅಂತಹ ಶುಲ್ಕ ಅಥವಾ ಕಮಿಷನ್ ಕೇಳುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಸಂಸ್ಥೆ, ಕಂಪನಿ ಅಥವಾ ವ್ಯಕ್ತಿ ಇತ್ಯಾದಿಗಳಿಗೆ ಅಂತಹ ವಹಿವಾಟುಗಳಲ್ಲಿ ಬ್ಯಾಂಕ್ ಪರವಾಗಿ ಯಾವುದೇ ಶುಲ್ಕವನ್ನು ವಿಧಿಸಲು ಯಾವುದೇ ಅಧಿಕಾರವನ್ನು ನೀಡಿಲ್ಲ. ಇಂತಹ ನಕಲಿ ಮತ್ತು ಮೋಸದ ಕೊಡುಗೆಗಳ ಬಲೆಗೆ ಬೀಳದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾಮಾನ್ಯ ಜನರಿಗೆ ಸಲಹೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Section: 
English Title: 
earn-money-if-you-are-selling-old-coin-or-note-then-be-alert-rbi-issued-important-information-see-details
News Source: 
Home Title: 

ಹಳೆಯ ನಾಣ್ಯ/ನೋಟು ಮಾರಾಟ ಮಾಡುತ್ತಿದ್ದರೆ, ಜಾಗರೂಕರಾಗಿರಿ! ಇಲ್ಲಿದೆ ಆರ್‌ಬಿಐನ ಮಹತ್ವದ ಮಾಹಿತಿ

ನೀವು ಹಳೆಯ ನಾಣ್ಯ/ನೋಟು ಮಾರಾಟ ಮಾಡುತ್ತಿದ್ದರೆ, ಜಾಗರೂಕರಾಗಿರಿ! ಇಲ್ಲಿದೆ ಆರ್‌ಬಿಐನ ಮಹತ್ವದ ಮಾಹಿತಿ
Caption: 
ಆರ್‌ಬಿಐ
Yes
Is Blog?: 
No
Tags: 
Facebook Instant Article: 
Yes
Highlights: 

ನೀವು ಹಳೆಯ ನಾಣ್ಯ/ನೋಟು ಮಾರಾಟ ಮಾಡುತ್ತಿದ್ದರೆ, ಜಾಗರೂಕರಾಗಿರಿ! 

ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ ರಿಸರ್ವ್ ಬ್ಯಾಂಕ್ 

ಇಲ್ಲಿದೆ ಆರ್‌ಬಿಐನ ಮಹತ್ವದ ಮಾಹಿತಿ 

Mobile Title: 
ಹಳೆಯ ನಾಣ್ಯ/ನೋಟು ಮಾರಾಟ ಮಾಡುತ್ತಿದ್ದರೆ, ಜಾಗರೂಕರಾಗಿರಿ! ಇಲ್ಲಿದೆ ಆರ್‌ಬಿಐನ ಮಹತ್ವದ ಮಾಹಿತಿ
Chetana Devarmani
Publish Later: 
No
Publish At: 
Sunday, May 22, 2022 - 16:54
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No