Amazon ನಲ್ಲಿ ದಿನಕ್ಕೆ ಕೆಲವೇ ಗಂಟೆ ಕೆಲಸ ಮಾಡಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸುವ ಸುವರ್ಣಾವಕಾಶ

Amazon Earning: ಇಂದು ನಮ್ಮಲ್ಲಿ ಬಹುತೇಕ ಎಲ್ಲರೂ ಕೂಡ ಅಮೆಜಾನ್ ಬಳಸುತ್ತಾರೆ. ಆದರೆ, ಅಮೆಜಾನ್ ಮೂಲಕ ಕೈತುಂಬಾ ಸಂಪಾದನೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೆಚ್ಚಿನ ಜನರಿಗೆ ಈ ಕುರಿತು ಮಾಹಿತಿಯೇ ಇಲ್ಲ. ಬನ್ನಿ ವಿವರವಾಗಿ ತಿಳಿದುಕೊಳ್ಳೋಣ,   

Written by - Nitin Tabib | Last Updated : Aug 19, 2022, 06:17 PM IST
  • ಅಮೆಜಾನ್ ಒಂದು ಶಾಪಿಂಗ್ ತಾಣವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ.
  • ಆದರೆ, ಇದರ ಸಹಾಯದಿಂದ ದಿನದ ಕೆಲವೇ ಗಂಟೆಗಳ ಕಾಲ ಕೆಲಸ ಮಾಡಿ ಒಳ್ಳೆಯ ಆದಾಯ ಪಡೆಯಬಹುದು ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ.
  • ಹೌದು, ಅಮೆಜಾನ್ ಮೂಲಕ ನೀವು ಕೈತುಂಬಾ ಸಂಪಾದನೆ ಮಾಡಬಹುದು.
Amazon ನಲ್ಲಿ ದಿನಕ್ಕೆ ಕೆಲವೇ ಗಂಟೆ ಕೆಲಸ ಮಾಡಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಪಾದಿಸುವ ಸುವರ್ಣಾವಕಾಶ title=
Amazon Earning

Earn Money From Amazon: ಅಮೆಜಾನ್ ಒಂದು ಶಾಪಿಂಗ್ ತಾಣವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಇದರ ಸಹಾಯದಿಂದ ದಿನದ ಕೆಲವೇ ಗಂಟೆಗಳ ಕಾಲ ಕೆಲಸ ಮಾಡಿ ಒಳ್ಳೆಯ ಆದಾಯ ಪಡೆಯಬಹುದು ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಹೌದು, ಅಮೆಜಾನ್ ಮೂಲಕ ನೀವು ಕೈತುಂಬಾ ಸಂಪಾದನೆ ಮಾಡಬಹುದು. ನೀವೂ ಕೂಡ ಅಮೆಜಾನ್ ಮೂಲಕ ಉತ್ತಮ ಆದಾಯವನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ, ಇಂದು ನಾವು ನಿಮಗೆ ಅದರ ಮಾಹಿತಿಯನ್ನು ನೀಡುತ್ತಿದ್ದು, ಅದರಿಂದ ನೀವೂ ಕೂಡ ಲಾಭ ಪಡೆದುಕೊಳ್ಳಬಹುದು.

ಅಮೆಜಾನ್ ಮೂಲಕ ಹೇಗೆ ಆದಾಯ ಗಳಿಸಬಹುದು?
ಒಂದು ವೇಳೆ ನೀವೂ ಕೂಡ ಅಮೆಜಾನ್ ಮೂಲಕ ಹಣವನ್ನು ಗಳಿಸಲು ಬಯಸುತ್ತಿದ್ದರೆ, ಇದಕ್ಕಾಗಿ ನೀವು Amazon India Affiliate Program ನಲ್ಲಿ ನಿಮ್ಮ ಖಾತೆಯನ್ನು ತೆರೆಯಬೇಕು. Amazon Affiliate ಕುರಿತು ನಿಮಗೆ ಒಂದು ವೇಳೆ ಮಾಹಿತಿ ಇಲ್ಲ ಎಂದಾದರೆ, ನಾವು ಅದರ ಬಗ್ಗೆ ನಿಮಗೆ ವಿಸ್ತೃತ ಮಾಹಿತಿಯನ್ನು ನೀಡುವೆವು. ಸಾಮಾನ್ಯವಾಗಿ ವೇದಿಕೆಯಲ್ಲಿ ಪ್ರತಿಯೊಂದು ಸರಕುಗಳ ಮಾರಾಟ ನಡೆಸಲಾಗುತ್ತದೆ. ಕೆಲವರು ನೇರವಾಗಿ ಅಮೆಜಾನ್ ತಾಣಕ್ಕೆ ಭೇಟಿ ನೀಡುವ ಮೂಲಕ ತಮಗೆ ಬೇಕಾಗಿರುವ ಸರಕನ್ನು ಖರೀದಿಸಿದರೆ, ಇನ್ನುಳಿದವರು ಗೂಗಲ್ ಅಥವಾ ಇತರ ವೇದಿಕೆಗಳ ಮೂಲಕ ಅಮೆಜಾನ್ ಅನ್ನು ಪ್ರವೇಶಿಸಿ ತಮ್ಮ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ. ಅಮೆಜಾನ್ ಮೂಲಕ ಹಣಗಳಿಕೆ ಮಾಡಲು ನೀವು ಸರಕುಗಳ ಮಾರಾಟ ಮಾಡಿಸಬೇಕು. ಇದಕ್ಕಾಗಿ ಕಂಪನಿ ನಿಮಗೆ ಶೇ.14ರಷ್ಟು ಕಮಿಷನ್ ನೀಡುತ್ತದೆ. 

ಇದನ್ನೂ ಓದಿ-5G ಸೇವೆಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್

ಅಮೆಜಾನ್ ಅಫಿಲಿಯೇಟ್ ಸೇರಲು ಅರ್ಹತೆ ಏನು?
ಅಮೆಜಾನ್ ಮೂಲಕ ಆನ್ಲೈನ್ ನಲ್ಲಿ ಗಳಿಕೆ ಮಾಡಲು ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಿಲ್ಲ. ಕೇವಲ ಅಮೆಜಾನ್ ಅಫಿಲಿಯೇಟ್ ನಲ್ಲಿ ನಿಮ್ಮ ಖಾತೆಯನ್ನು ರಚಿಸಬೇಕು. ಖಾತೆ ರಚಿಸಲು ನೀವು ನಿಮ್ಮ ಬ್ಲಾಗ್ ಸಹಾಯದಿಂದ ಅಮೆಜಾನ್ ನಲ್ಲಿ ಸಿಗುವ ಸರಕುಗಳ ಮಾರಾಟ ನಡೆಸಬೇಕು. ಸರಕು ಮಾರಾಟಗೊಂಡರೆ ನಿಮಗೆ ಮಾರಾಟಗೊಂಡ ಸರಕಿಗಾಗಿ ಕಮಿಷನ್ ನೀಡಲಾಗುತ್ತದೆ.

ಇದನ್ನೂ ಓದಿ-ಬಿಎಸ್ಎನ್ಎಲ್ ವರ್ಷದ ವ್ಯಾಲಿಡಿಟಿ ಪ್ಯಾಕ್ ₹800ಕ್ಕಿಂತ ಕಡಿಮೆ ಬೆಲೆಗೆ: ನಿತ್ಯ 2ಜಿಬಿ ಡೇಟಾ ಜೊತೆ ಸಿಗುತ್ತೆ ಈ ಎಲ್ಲಾ ಲಾಭ

ಸಾಮಾಜಿಕ ಮಾಧ್ಯಮಗಳ ಮೂಲಕವೂ ಕೂಡ ಗಳಿಕೆ ಮಾಡಬಹುದು
Facebook, Twitter, Whatsapp, Telegram ಹಾಗೂ Instagram ಗಳಂತಹ ಸಾಮಾಜಿಕ ವೇದಿಕೆಗಳ ಮುಖಾಂತರವೂ ಕೂಡ ನೀವು ಅಮೆಜಾನ್ ಸರಕುಗಳ ಮಾರಾಟ ನಡೆಸಬಹುದು. ಈ ವೇದಿಕೆಗಳ ತಲುಪು ಕೂಡ ವ್ಯಾಪಕವಾಗಿದ್ದು, ಆದಷ್ಟು ಹೆಚ್ಚು ಜನರ ಬಳಿ ನೀವು ತಲುಪಬಹುದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News