Gold Price Today: ಮತ್ತೆ ಅಗ್ಗವಾಯಿತು ಚಿನ್ನ ! ಬೆಳ್ಳಿ ಕೊಂಚ ದುಬಾರಿ ! ನಿಮ್ಮ ನಗರದಲ್ಲಿ ಎಷ್ಟಿದೆ 10 ಗ್ರಾಂ ಚಿನ್ನದ ಬೆಲೆ ?

Gold-Silver Price Today:  ಮಾರುಕಟ್ಟೆಯಲ್ಲಿ ದಾಖಲೆಯ ಏರಿಕೆಯ ನಂತರ ಇಂದು ಚಿನ್ನ ಅಗ್ಗವಾಗಿದೆ.ಜಾಗತಿಕ ಮಾರುಕಟ್ಟೆಯ ಕುಸಿತದಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ.

Written by - Ranjitha R K | Last Updated : Mar 14, 2024, 01:09 PM IST
  • ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
  • ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
  • MCX ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು?
 Gold Price Today: ಮತ್ತೆ ಅಗ್ಗವಾಯಿತು ಚಿನ್ನ ! ಬೆಳ್ಳಿ ಕೊಂಚ ದುಬಾರಿ ! ನಿಮ್ಮ ನಗರದಲ್ಲಿ ಎಷ್ಟಿದೆ  10 ಗ್ರಾಂ ಚಿನ್ನದ ಬೆಲೆ ?  title=

Gold-Silver Price Today : ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ದಾಖಲೆಯ ಏರಿಕೆಯ ನಂತರ ಇಂದು ಚಿನ್ನ ಅಗ್ಗವಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ 66,000 ರೂಪಾಯಿ ದಾಟಿತ್ತು. ಗುರುವಾರ ಚಿನ್ನದ ಬೆಲೆಯಲ್ಲಿನ ಕುಸಿತದ ನಂತರ ಈ ಬೆಲೆ 65,000ರ ಆಸುಪಾಸಿಗೆ ಬಂದು ನಿಂತಿದೆ. ಜಾಗತಿಕ ಮಾರುಕಟ್ಟೆಯ ಕುಸಿತದಿಂದಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ. 

MCX ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು? :
ಇಂದು, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಶೇಕಡಾ 0.14 ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 65,808 ರೂ.ಆಗಿದೆ. ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಇಂದು ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ ಶೇ.0.25ರಷ್ಟು ಏರಿಕೆಯೊಂದಿಗೆ 75,357 ರೂ. ಆಗಿದೆ. 

ಇದನ್ನೂ ಓದಿ :EPFO UAN ಪ್ರೊಫೈಲ್ ಅಪ್ಡೇಟ್ ಮಾಡಲು ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ :
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗಿದೆ. ಇಂದು ಕಾಮೆಕ್ಸ್‌ನಲ್ಲಿ ಚಿನ್ನದ ಬೆಲೆ 0.25 ಶೇಕಡಾ ಅಥವಾ 5.50 ಡಾಲರ್ ಕಡಿಮೆಯಾಗಿದ್ದು, ಪ್ರತಿ ಔನ್ಸ್‌ಗೆ  2,175.30 ಡಾಲರ್ ಆಗಿದೆ.ಕಾಮೆಕ್ಸ್‌ನಲ್ಲಿ ಬೆಳ್ಳಿಯ ಫ್ಯೂಚರ್ ರೇಟ್ 0.02 ಶೇಕಡಾ ಅಥವಾ  0.01 ಡಾಲರ್ ಏರಿಕೆಯಾಗಿದ್ದು, ಪ್ರತಿ ಔನ್ಸ್ ಗೆ 25.16 ಡಾಲರ್ ಆಗಿದೆ. 

ಮನೆಯಲ್ಲಿ ಕುಳಿತು ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ,  8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಸಂದೇಶವನ್ನು ಕಳುಹಿಸುವ  ನಂಬರ್ ಗೆ ಚಿನ್ನದ ಬೆಲೆ ಎಷ್ಟ್ ಎನ್ನುವ ಮೆಸೇಜ್ ಕಳುಹಿಸಲಾಗುತ್ತದೆ.  

ಇದನ್ನೂ ಓದಿ : Electric Scooter In Cheapest Price: ಅಗ್ಗದ ದರದಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕೆ? ಇಲ್ಲಿದೆ ಒಂದು ಸುವರ್ಣಾವಕಾಶ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News