License Validity Extension: ಡ್ರೈವಿಂಗ್ ಮತ್ತು ಲರ್ನರ್ ಲೈಸೆನ್ಸ್‌ ವ್ಯಾಲಿಡಿಟಿ ಇಷ್ಟು ದಿನದವರೆಗೆ ವಿಸ್ತರಣೆ ! ಕಾರಣ ಇದೇ !

Driving and Learner License Validity Extended: ರಸ್ತೆ ಸಚಿವಾಲಯದ ಆದೇಶದ ಪ್ರಕಾರ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಸಿಂಧುತ್ವವನ್ನು ಫೆಬ್ರವರಿ  29, 2024 ರವರೆಗೆ ವಿಸ್ತರಿಸಲಾಗಿದೆ.

Written by - Ranjitha R K | Last Updated : Feb 21, 2024, 02:28 PM IST
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.
  • ಪರವಾನಗಿಯ ಸಿಂಧುತ್ವವನ್ನು ಫೆಬ್ರವರಿ 29, 2024 ರವರೆಗೆ ವಿಸ್ತರಣೆ
  • ಈ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನ
License Validity Extension: ಡ್ರೈವಿಂಗ್ ಮತ್ತು ಲರ್ನರ್ ಲೈಸೆನ್ಸ್‌  ವ್ಯಾಲಿಡಿಟಿ ಇಷ್ಟು ದಿನದವರೆಗೆ ವಿಸ್ತರಣೆ ! ಕಾರಣ ಇದೇ ! title=

Driving and Learner License Validity Extended : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ಡ್ರೈವಿಂಗ್ ಲೈಸೆನ್ಸ್, ಲರ್ನರ್ ಲೈಸೆನ್ಸ್ ಮತ್ತು ಕಂಡಕ್ಟರ್ ಲೈಸೆನ್ಸ್ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವವರಿಗೆ ಈ ಆದೇಶವು ಪರಿಹಾರವನ್ನು ನೀಡಲಿದೆ. ರಸ್ತೆ ಸಚಿವಾಲಯದ ಆದೇಶದ ಪ್ರಕಾರ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಸಿಂಧುತ್ವವನ್ನು ಫೆಬ್ರವರಿ  29, 2024 ರವರೆಗೆ ವಿಸ್ತರಿಸಲಾಗಿದೆ. ಈ ಆದೇಶದ ನಂತರ, ಜನವರಿ  31 2024 ಮತ್ತು ಫೆಬ್ರವರಿ 15  2024 ರಂದು ಅವಧಿ ಮುಕ್ತಾಯಗೊಳ್ಳುವ ಪರವಾನಗಿಗಳನ್ನು  ಫೆಬ್ರವರಿ 29,  2024 ರವರೆಗೆ ಮಾನ್ಯವೆಂದು ಪರಿಗಣಿಸಲಾಗುತ್ತದೆ. 

 ಈ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನ : 
ಕೆಲವರು ತಮ್ಮ ಪರವಾನಗಿಗಳನ್ನು ನವೀಕರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಕಾರಣ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಜನರು ತಮ್ಮ ಪರವಾನಗಿಯನ್ನು ನವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಜನರು ತಮ್ಮ ಕಲಿಕಾ ಪರವಾನಗಿಯನ್ನು ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ತೊಂದರೆ ಎದುರಿಸುತ್ತಿದ್ದಾರೆ. ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಪರವಾನಗಿಯ ಮಾನ್ಯತೆಯನ್ನು ವಿಸ್ತರಿಸಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತನ್ನ ' ಸಾರಥಿ ' ಪೋರ್ಟಲ್‌ನಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ : Gold Rate: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ: ನಿಮ್ಮ ನಗರ ದರವನ್ನು ಪರಿಶೀಲಿಸಿ!

ಜನವರಿ 31, 2024 ಮತ್ತು ಫೆಬ್ರವರಿ 12, 2024 ರ ನಡುವೆ ಸಾರಥಿ ಪೋರ್ಟಲ್‌ನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳು ಕಂಡುಬಂದಿವೆ ಎಂದು ರಸ್ತೆ ಸಾರಿಗೆ ಸಚಿವಾಲಯವು ಸುತ್ತೋಲೆಯಲ್ಲಿ ತಿಳಿಸಿದೆ. ಇದರಿಂದಾಗಿ ಪರವಾನಗಿ ಸಂಬಂಧಿತ ಸೇವೆಗಳನ್ನು ಪಡೆಯಲು ಜನರು ತೊಂದರೆ ಎದುರಿಸುವಂತಾಗಿತ್ತು.  

ಜನರಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ :
ಈ ಹಿನ್ನೆಲೆಯಲ್ಲಿ ಜನವರಿ 31, 2024 ಮತ್ತು ಫೆಬ್ರವರಿ 15, 2024 ರ ನಡುವೆ ಅವಧಿ ಮುಗಿದಿರುವ  ಲರ್ನರ್ ಲೈಸನ್ಸ್, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಗಳ ಸಿಂಧುತ್ವವನ್ನು ಫೆಬ್ರವರಿ 29, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅಲ್ಲದೆ,  ಇವರ ಮೇಲೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. ಈ ಜನರ ಪರವಾನಗಿಗಳನ್ನು ಯಾವುದೇ ದಂಡವಿಲ್ಲದೆ ಮಾನ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : ರೇಶನ್ ಕಾರ್ಡ್ ಇದ್ದ ಪ್ರತಿಯೊಬ್ಬರಿಗೂ ಸಿಗುವುದು ಆಯುಷ್ಮಾನ್ ಯೋಜನೆಯ ಲಾಭ ! ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News