Diwali Bonus: ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ, ಸರ್ಕಾರ ಕೊಡುತ್ತೆ ದೀಪಾವಳಿ ಬೋನಸ್

Diwali 2022: ದೀಪಾವಳಿಗೂ ಮುನ್ನ ಆರ್ಥಿಕವಾಗಿ ಹಿಂದುಳಿದ ಜನರಿಗೆ ಮಹಾರಾಷ್ಟ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ.   

Written by - Nitin Tabib | Last Updated : Oct 11, 2022, 01:49 PM IST
  • ಈ ಪವಿತ್ರ ಹಬ್ಬದಂದು ಮನೆಯ ಹಿರಿಯರು ಹಾಗೂ ಬಂಧು-ಮಿತ್ರರು ಉಡುಗೊರೆಗಳನ್ನು ಕೊಡುತ್ತಾರೆ.
  • ಕೆಲವೇ ದಿನಗಳಲ್ಲಿ ಕಂಪನಿಗಳು ಕೂಡ ತನ್ನ ನೌಕರರಿಗೆ
  • ಹಬ್ಬದ ಬೋನಸ್ ಹಾಗೂ ಉಡುಗೊರೆಗಳನ್ನು ನೀಡಲು ಆರಂಭಿಸಲಿವೆ.
Diwali Bonus: ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ, ಸರ್ಕಾರ ಕೊಡುತ್ತೆ ದೀಪಾವಳಿ ಬೋನಸ್  title=
Diwali 2022 Bonus

Diwali 2022 Bonus: ದೀಪಾವಳಿ ಹಬ್ಬ ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಈ ಪವಿತ್ರ ಹಬ್ಬದಂದು ಮನೆಯ ಹಿರಿಯರು ಹಾಗೂ ಬಂಧು-ಮಿತ್ರರು ಉಡುಗೊರೆಗಳನ್ನು ಕೊಡುತ್ತಾರೆ. ಕೆಲವೇ ದಿನಗಳಲ್ಲಿ ಕಂಪನಿಗಳು ಕೂಡ ತನ್ನ ನೌಕರರಿಗೆ ಹಬ್ಬದ ಬೋನಸ್ ಹಾಗೂ ಉಡುಗೊರೆಗಳನ್ನು ನೀಡಲು ಆರಂಭಿಸಲಿವೆ. ವಿವಿಧ ರಾಜ್ಯ ಸರ್ಕಾರಗಳು ಕೂಡ ತನ್ನ ನಾಗರಿಕರಿಗೆ ಉಡುಗೊರೆಗಳನ್ನು ಘೋಶಿಸುತ್ತವೆ. ಈ ಹಿನ್ನೆಲೆ ಇದೀಗ ಮಹಾರಾಷ್ಟ್ರ ಸರ್ಕಾರ ತನ್ನ ನಾಗರಿಕರಿಗಾಗಿ ಮಹತ್ವದ ಘೋಷಣೆಯೊಂದನ್ನು ಮೊಳಗಿಸಿದೆ. ಒಂದು ಮೇಲೆ ನೀವೂ ಕೂಡ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದು, ನಿಮ್ಮ ಬಳಿ ಪಡಿತರ ಚೀಟಿ ಇದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. 

ಕೇವಲ 100 ರೂ.ಗಳಲ್ಲಿ ಇವೆಲ್ಲವೂ ಸಿಗಲಿವೆ
ಈ ಕುರಿತು ಘೋಷಣೆ ಮಾಡಿರುವ ಮಹಾರಾಷ್ಟ್ರದ ಸಚಿವ ಸಂಪುಟ, ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದವರಿಗೆ ರಾಜ್ಯ ಸರ್ಕಾರ ಮುಂಬರುವ ದೀಪಾವಳಿ ಹಬ್ಬದಂದು ಕೇವಲ 100 ರೂ.ಗಳಿಗೆ ದಿನಸಿ ಸಾಮಾನುಗಳನ್ನು ವಿತರಿಸುವ ನಿರ್ಧಾರ ಕೈಗೊಂಡಿದೆ ಎಂದಿದೆ. ಹೌದು, ಕೇವಲ ರೂ.100 ಗಳಲ್ಲಿ ರಾಜ್ಯದ ಜನತೆಗೆ ಈ ಪ್ಯಾಕೆಟ್ ಸಿಗಲಿದೆ.ಈ ಪ್ಯಾಕೆಟ್ ನಲ್ಲಿ 1 ಕೆ.ಜಿ ರವೆ, ಶೇಂಗಾ ಬೀಜ, ಅಡುಗೆ ಎಣ್ಣೆ, ಹಳದಿ ಬೇಳೆ ಇತ್ಯಾದಿಗಳು ಇರಲಿವೆ. 

ಇದನ್ನೂ ಓದಿ-ಇನ್ನು ಆರು ದಿನಗಳಲ್ಲಿ ರೈತರ ಖಾತೆಗೆ ಪಿಎಂ ಕಿಸಾನ್ 12ನೇ ಕಂತು.! ಈ ಬಾರಿ ಖಾತೆಗೆ ಬರುವುದು 4 ಸಾವಿರ ರೂಪಾಯಿ!

ರಾಜ್ಯದಲ್ಲಿ ಕೋಟ್ಯಾಂತರ ಜನರ ಬಳಿ ಇದೆ ಪಡಿತರ ಚೀಟಿ 
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣಾ ಇಲಾಖೆ ಈ ಪ್ರಸ್ತಾವನೆಯನ್ನು ತಂದಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಪ್ರಕಟಣೆಯಲ್ಲಿ, 'ರಾಜ್ಯದಲ್ಲಿ 1.70 ಕೋಟಿ ಕುಟುಂಬಗಳು ಅಥವಾ ಏಳು ಕೋಟಿ ಜನರು ಪಡಿತರ ಚೀಟಿ ಹೊಂದಿದ್ದಾರೆ. ಅವರು ಸರ್ಕಾರಿ ಪಡಿತರ ಅಂಗಡಿಗಳಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹರಾಗಿದ್ದಾರೆ.

ಇದನ್ನೂ ಓದಿ-Gold Price Today : ಭಾರೀ ಅಗ್ಗವಾಯಿತು ಚಿನ್ನ ಮತ್ತು ಬೆಳ್ಳಿ, ಖರೀದಿಗೆ ಉತ್ತಮ ಸಮಯ

ಆರ್ಥಿಕವಾಗಿ ಹಿಂದುಳಿದವರಿಗೆ ಲಾಭ
ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ, ದೇಶದ ಚಿಲ್ಲರೆ ಹಣದುಬ್ಬರ ದರವು ಶೇಕಡಾ 7 ರಷ್ಟಿದೆ ಎಂಬುದು ಇಲ್ಲಿ ಗಮನಾರ್ಹ. ಈ ಹಿನ್ನೆಲೆಯಲ್ಲಿ ಅಗತ್ಯ ಉತ್ಪನ್ನಗಳನ್ನು ಸಬ್ಸಿಡಿ ದರದಲ್ಲಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಆರ್ಥಿಕವಾಗಿ ದುರ್ಬಲವಾಗಿರುವ  ವರ್ಗದವರಿಗೆ ದಿನಸಿ ಪ್ಯಾಕೆಟ್‌ಗಳನ್ನು ಬಳಸಿ ದೀಪಾವಳಿಗೆ ತಿಂಡಿ ಮತ್ತು ಸಿಹಿತಿಂಡಿಗಳನ್ನು ತಯಾರಿಸಲು ಅನುಕೂಲವಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News