ಅಗ್ಗವಾಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ, ಹಣಕಾಸು ಸಚಿವರು ಹೇಳಿದ್ದೇನು ?

Petrol-Diesel Price:  ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯ ನಡುವೆಯೂ ಸಮಾಧಾನದ ಸುದ್ದಿ ಕೇಳಿ ಬಂದಿದೆ. ಇಂತಹ ವ್ಯವಸ್ಥೆಯನ್ನು ಸರ್ಕಾರ ಮಾಡಲು ಹೊರಟಿದ್ದು, ಈ ಮೂಲಕ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ. 

Written by - Ranjitha R K | Last Updated : Apr 4, 2022, 05:19 PM IST
  • ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯ ನಡುವೆಯೂ ಪರಿಹಾರ
  • ಅಗ್ಗದ ತೈಲ ಕಂಪನಿಗಳ ಮಾರ್ಜಿನ್ ಸುಧಾರಿಸುತ್ತದೆ
  • ಅಬಕಾರಿ ಸುಂಕದಲ್ಲಿ ಸರ್ಕಾರ ಪರಿಹಾರ ನೀಡಬಹುದು
 ಅಗ್ಗವಾಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ, ಹಣಕಾಸು ಸಚಿವರು ಹೇಳಿದ್ದೇನು ?  title=
Petrol Price (file photo)

ನವದೆಹಲಿ : ದೇಶದಲ್ಲಿ ಕಳೆದ ಹಲವು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದೆ (Petrol price today).  14 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 8.40 ರೂ. ಹೆಚ್ಚಿಗೆಯಾಗಿದೆ.  ಹೀಗಿರುವಾಗ ಕಡಿಮೆ ಬೆಲೆಗೆ ಪೆಟ್ರೋಲ್ ನಿರೀಕ್ಷಿಸುವುದು ಕಷ್ಟ. ಆದರೆ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್ ಸಿಗುವ ಇಂತಹ ವ್ಯವಸ್ಥೆಯನ್ನು ಸರಕಾರ ಮಾಡಲು ಹೊರಟಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವರು ಹೇಳಿಕೆ ನೀಡಿದ್ದಾರೆ.

ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು:
ವಾಸ್ತವವಾಗಿ, ರಷ್ಯಾ-ಉಕ್ರೇನ್ ಯುದ್ಧದ (Russia Ukraine war) ನಡುವೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Niramala Sitaraman)ದೇಶಕ್ಕೆ ರಿಯಾಯಿತಿಯಲ್ಲಿ ಇಂಧನ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಷ್ಯಾದ ಆಫರ್ ನ ನಂತರ ಭಾರತವು ಅಗ್ಗದ ಬೆಲೆಗೆ ತೈಲವನ್ನು ಖರೀದಿಸಲು ಪ್ರಾರಂಭಿಸಿದೆ. ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ. ಅಂದರೆ ಿ ಅಗ್ಗದ  ಬೆಲೆಯಲ್ಲಿ ತೈಲ ಖರೀದಿ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲ ಕಂಪನಿಗಳ ಮಾರ್ಜಿನ್ ಕೂಡ ಸುಧಾರಿಸಲಿದೆ. ಅಬಕಾರಿ ಸುಂಕದಲ್ಲೂ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ (Petrol Diseil price). ದೇಶವು ತನ್ನ ತೈಲ ಅಗತ್ಯದ 85 ಪ್ರತಿಶತದಷ್ಟು ಆಮದು ಮಾಡಿಕೊಳ್ಳುತ್ತದೆ.

ಇದನ್ನೂ  ಓದಿ : Electricity Bill: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರ ಜೇಬಿಗೆ ಮತ್ತಷ್ಟು ಹೊರೆ

ಕಡಿಮೆ ಬೆಲೆಗೆ ಸಿಕ್ಕಿದರೆ ಯಾಕೆ ತೈಲ ಖರೀದಿಸಬಾರದು ? 
ರಷ್ಯಾ - ಉಕ್ರೇನ್ ಯುದ್ಧದ ನಂತರ, ಅನೇಕ ದೇಶಗಳು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಇದೇ ವೇಳೆ, ನಾವು ರಷ್ಯಾದ ತೈಲವನ್ನು ಖರೀದಿಸಲು ಪ್ರಾರಂಭಿಸಿದ್ದೇವೆ ಮತ್ತು ಕನಿಷ್ಠ 3 ರಿಂದ 4 ದಿನಗಳವರೆಗೆ ತೈಲವನ್ನು ಖರೀದಿಸಿದ್ದೇವೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಇಂಧನ ಭದ್ರತೆ ಮತ್ತು ನನ್ನ ದೇಶದ ಹಿತಾಸಕ್ತಿಗೆ ನಾನು ಮೊದಳು ಪ್ರಾಶಸ್ತ್ಯ ನೀಡುತ್ತೇನೆ ಎಂದವರು ಹೇಳಿದ್ದಾರೆ. ರಿಯಾಯಿತಿ ದರದಲ್ಲಿ ಪೂರೈಕೆ ಲಭ್ಯವಿದ್ದರೆ  ಯಾಕೆ  ಖರೀದಿಸಬಾರದು? ಎಂದು ನಿರ್ಮಲಾ ಸೀತಾರಾಮನ್ (Niramala Sitaraman) ಪ್ರಶ್ನಿಸಿದ್ದಾರೆ. 

ಬ್ರಿಟಿಷ್ ವಿದೇಶಾಂಗ ಸಚಿವರ ಸಮ್ಮುಖದಲ್ಲಿ ಹೇಳಿಕೆ :
ಇನ್ನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ತೈಲ ಖರೀದಿಸುತ್ತಿರುವ ಕ್ರಮವನ್ನು ವಿದೆಶಾನಗ ಸಚಿವ ಎಸ್. ಜೈಶಂಕರ್‌ ಸಮರ್ಥಿಸಿಕೊಂಡಿದ್ದಾರೆ. ಬ್ರಿಟನ್ ವಿದೇಶಾಂಗ ಸಚಿವೆ ಎಲಿಜಬೆತ್ ಟ್ರಸ್ ಅವರ ಸಮ್ಮುಖದಲ್ಲಿ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿದ್ದಾರೆ. ಜೈಶಂಕರ್‌ಗೆ ಪ್ರತಿಕ್ರಿಯಿಸಿದ ಟ್ರಸ್, ರಷ್ಯಾದಿಂದ ಸಬ್ಸಿಡಿ ತೈಲವನ್ನು ಖರೀದಿಸುವ ಭಾರತದ ನಿರ್ಧಾರವನ್ನು ಬ್ರಿಟನ್ ಗೌರವಿಸುತ್ತದೆ ಎಂದು ಹೇಳಿದ್ದಾರೆ.  ಭಾರತವು ಸಾರ್ವಭೌಮ ರಾಷ್ಟ್ರವಾಗಿದೆ ಮತ್ತು ನಾನು ಭಾರತಕ್ಕೆ ಏನು ಮಾಡಬೇಕೆಂದು ಹೇಳಲು ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಇದನ್ನೂ  ಓದಿ : Arecanut Price: ಶಿವಮೊಗ್ಗ ಅಡಿಕೆ ಮಾರುಕಟ್ಟೆ ಇಂದಿನ ಧಾರಣೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News