Gold-Silver price today : ಇಳಿಮುಖದತ್ತ ಸಾಗುತ್ತಿದೆ ಬಂಗಾರದ ಬೆಲೆ ! ಬೆಳ್ಳಿ ದರದಲ್ಲಿಯೂ ದೊಡ್ಡ ಮಟ್ಟದ ಕಡಿತ

Gold-Silver Price Today, 4 January 2024:  ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಾಣುತ್ತಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಗೋಚರಿಸುತ್ತಿದೆ.   

Written by - Ranjitha R K | Last Updated : Jan 5, 2024, 08:52 AM IST
  • ಮತ್ತೆ ಅಗ್ಗವಾದ ಬಂಗಾರದ ಬೆಲೆ
  • ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ
  • ಇಂದು ಎಷ್ಟಿದೆ ನೋಡಿ ದರ
Gold-Silver price today : ಇಳಿಮುಖದತ್ತ ಸಾಗುತ್ತಿದೆ ಬಂಗಾರದ ಬೆಲೆ ! ಬೆಳ್ಳಿ ದರದಲ್ಲಿಯೂ ದೊಡ್ಡ ಮಟ್ಟದ ಕಡಿತ  title=

Gold-Silver Price Today, 4 January 2024: ಸತತ ಎರಡನೇ ದಿನವೂ ಚಿನ್ನ  ಅಗ್ಗವಾಗಿದೆ. ಇದಲ್ಲದೇ ಬೆಳ್ಳಿ ಬೆಲೆಯಲ್ಲೂ ದೊಡ್ಡ ಮಟ್ಟದ ಇಳಿಕೆ ಕಾಣುತ್ತಿದೆ.ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗಿದ್ದು,ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಂಡುಬರುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 63,500 ರೂ.ಆಗಿದೆ. 

ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 440 ರೂಪಾಯಿ ಇಳಿಕೆಯಾಗಿ 63,380 ರೂಪಾಯಿಗಳಿಗೆ ತಲುಪಿದೆ.ಆದರೆ, ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 63,970 ರೂ.ಆಗಿತ್ತು. 

ಇದನ್ನೂ ಓದಿ : EPFO Update: ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟಿಸಿದ ಕೇಂದ್ರ ಸರ್ಕಾರ!

MCX ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು?:
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ  ಶೇಕಡಾ 0.13 ರಷ್ಟು ಏರಿಕೆಯೊಂದಿಗೆ ಚಿನ್ನದ ಬೆಲೆ 10 ಗ್ರಾಂ ಚಿನ್ನದ ಬೆಲೆ  62,587 ರೂಪಾಯಿ ಮಟ್ಟದಲ್ಲಿದೆ.ಇದಲ್ಲದೇ ಬೆಳ್ಳಿಯ ಬೆಲೆಯೂ ಶೇ.0.52ರಷ್ಟು ಕುಸಿದಿದ್ದು, ಪ್ರತಿ ಕೆಜಿಗೆ 71958 ರೂ. ಆಗಿದೆ. 

22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ):
ಬೆಂಗಳೂರು : 58,100 ರೂ. 
ದೆಹಲಿ: 58,250 ರೂ. 
ಮುಂಬಯಿ :58,250 ರೂ.
ಹೈದರಾಬಾದ್ : 58,100 ರೂ
ಕೇರಳ :58,100 ರೂ
ಚೆನ್ನೈ : 58,700 ರೂ.

ಬೆಳ್ಳಿ ಬೆಲೆಯಲ್ಲಿ 1900 ರೂ. ಕುಸಿತ :
ಬೆಳ್ಳಿಯ ಬೆಲೆಯಲ್ಲಿಯೂ  1,900 ರೂ.ಗಳಷ್ಟು ಕುಸಿಟ ಕಂಡಿದ್ದು, ಪ್ರತಿ ಕೆಜಿಗೆ 76,900 ರೂ. ಆಗಿದೆ.ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 78,800 ರೂ.ಆಗಿದೆ. 

ಇದನ್ನೂ ಓದಿ : DA Hike 2024: ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ವೇತನದಲ್ಲಿ 49, 420 ಹೆಚ್ಚಳ!

ತಜ್ಞರೂ ಹೇಳುವುದೇನು ? : 
ವಿದೇಶಿ ಮಾರುಕಟ್ಟೆಗಳಲ್ಲಿನ ಕುಸಿತದ ಪ್ರವೃತ್ತಿಯ ನಂತರ ಚಿನ್ಡ ಬೆಲೆಯಲ್ಲಿ ಕುಸಿತ ಕಾಣಿಸಿಕೊಂಡಿದೆ ಎನ್ನುತ್ತಾರೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 2,042 ಡಾಲರ್ ಮತ್ತು ಔನ್ಸ್ ಬೆಳ್ಳಿ 23.05 ಡಾಲರ್ ಗೆ ಕುಸಿದಿದೆ.ಬಡ್ಡಿದರಗಳನ್ನು ಕಡಿಮೆ ಮಾಡುವ US ಫೆಡರಲ್ ರಿಸರ್ವ್‌ನ ಯೋಜನೆಯ ಬಗ್ಗೆ ಅನಿಶ್ಚಿತತೆಯು ವ್ಯಾಪಾರಿಗಳಲ್ಲಿ ಅಪಾಯದ ಮನೋಭಾವವನ್ನು ಹೆಚ್ಚಿಸಿದ್ದರಿಂದ Comex ನಲ್ಲಿ ಚಿನ್ನದ ಬೆಲೆಗಳು ಎರಡು ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಗಾಂಧಿ ಹೇಳಿದ್ದಾರೆ.

ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 

ಈ ಮೇಲಿನ ದರವನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ನಗರಗಳಿಗೆ ಅನುಸಾರವಾಗಿ ದರದಲ್ಲಿ ಬದಲಾವಣೆಯಾಗಬಹುದು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News