CNG Price Hike: ಪೆಟ್ರೋಲ್‌ಗಿಂತ ಮೊದಲು ಸಿಎನ್‌ಜಿ ದರ ಏರಿಕೆ, ನಾಳೆಯಿಂದ ಮತ್ತಷ್ಟು ದುಬಾರಿ!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಪೆಟ್ರೋಲ್ ದರ 10 ರಿಂದ 16 ರೂ. ಮತ್ತು ಡೀಸೆಲ್ ದರ 8 ರಿಂದ 12 ರೂ. ಹೆಚ್ಚಾಗಬಹುದು ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.  

Written by - Puttaraj K Alur | Last Updated : Mar 7, 2022, 11:14 PM IST
  • ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಹೊಡೆತ
  • ನಾಳೆಯಿಂದ ಮತ್ತಷ್ಟು ದುಬಾರಿಯಾಗಲಿದೆ ಸಿಎನ್‌ಜಿ ದರ, ಮಂಗಳವಾರ ಬೆಳಗ್ಗೆಯಿಂದ ಹೊಸ ದರ ಅನ್ವಯ
  • ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿಯೂ ಭಾರೀ ಏರಿಕೆಯಾಗುವ ನಿರೀಕ್ಷೆ
CNG Price Hike: ಪೆಟ್ರೋಲ್‌ಗಿಂತ ಮೊದಲು ಸಿಎನ್‌ಜಿ ದರ ಏರಿಕೆ, ನಾಳೆಯಿಂದ ಮತ್ತಷ್ಟು ದುಬಾರಿ! title=
ನಾಳೆಯಿಂದ CNG ಮತ್ತಷ್ಟು ದುಬಾರಿ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ(Russia-Ukraine War)ದ ಪರಿಣಾಮ ಈಗ ದೇಶೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಗಳ ಮೇಲೆ ಗೋಚರಿಸುತ್ತಿದೆ. ನೀವು ಸಿಎನ್‌ಜಿ ಕಾರು ಚಲಾಯಿಸುತ್ತಿದ್ದರೆ ಈ ಸುದ್ದಿ ಓದಲೇಬೇಕು. ಕಚ್ಚಾ ತೈಲ ಮತ್ತು ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯ ನಂತರ ಈಗ ಸಿಎನ್‌ಜಿ ಬೆಲೆ ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್ (Delhi-NCR CNG Price)ನಲ್ಲಿ ಸಿಎನ್‌ಜಿ ದರವನ್ನು 1 ರೂ.ವರೆಗೆ ಹೆಚ್ಚಿಸಲಾಗಿದೆ.

ನಾಳೆ ಬೆಳಗ್ಗೆ 6 ಗಂಟೆಯಿಂದ ಹೊಸ ದರ ಅನ್ವಯ

ಸಿಎನ್‌ಜಿಯ ಹೊಸ ದರ(CNG Price Hike) ಮಾರ್ಚ್ 8ರ ಮಂಗಳವಾರ ಬೆಳಿಗ್ಗೆ 6ರಿಂದಲೇ ಅನ್ವಯವಾಗುತ್ತದೆ. ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ಮೊದಲಿಗಿಂತ 50 ಪೈಸೆ ದುಬಾರಿಯಾಗಲಿದೆ. ಇಲ್ಲಿಯವರೆಗೆ ದೆಹಲಿಯಲ್ಲಿ ಸಿಎನ್‌ಜಿ ದರ(Delhi-NCR CNG Price)ವು ಪ್ರತಿ ಕೆಜಿಗೆ 57.01 ರೂ ಇತ್ತು, ಇದು ಮಂಗಳವಾರ ಬೆಳಿಗ್ಗೆಯಿಂದ ಕೆಜಿಗೆ 57.51 ರೂ.ಗೆ ಏರಿಕೆಯಾಗಲಿದೆ. ಇದಲ್ಲದೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 1 ರೂ.ನಷ್ಟು ದುಬಾರಿಯಾಗಲಿದೆ.

ಇದನ್ನೂ ಓದಿ: Sukanya Samriddhi Yojana : ಸರ್ಕಾರದ ಈ ಯೋಜನೆಯಲ್ಲಿ ₹416 ಹೂಡಿಕೆ ಮಾಡಿ, ₹65 ಲಕ್ಷ ಲಾಭ ಪಡೆಯಿರಿ!

ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆ?

ಈ ಮೂರು ನಗರಗಳಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 58.58 ರೂ.ಗಳಾಗಿದ್ದು, ಮಂಗಳವಾರ ಬೆಳಗ್ಗೆಯಿಂದ ಪ್ರತಿ ಕೆಜಿಗೆ 59.58 ರೂ.ಗೆ ಏರಿಕೆಯಾಗಲಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ನಂತರ ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol Diesel Price Hike)ಯೂ ಹೆಚ್ಚಾಗುವ ನಿರೀಕ್ಷೆಯಿದೆ. ಪೆಟ್ರೋಲ್ ದರ 10 ರಿಂದ 16 ರೂ.ನಷ್ಟು ಮತ್ತು ಡೀಸೆಲ್ ದರ 8 ರಿಂದ 12 ರೂ.ನಷ್ಟು ಹೆಚ್ಚಾಗಬಹುದು(Petrol Diesel Price) ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ. ಈ ಬೆಲೆ ಏರಿಕೆಯು ವಿವಿಧ ಹಂತಗಳಲ್ಲಿ ಅನ್ವಯಿಸುತ್ತವೆ ಎಂದು ಹೇಳಲಾಗಿದೆ.

ಇಲ್ಲಿಯೂ ಸಿಎನ್‌ಜಿ ದುಬಾರಿ

- ಹರಿಯಾಣದ ಗುರುಗ್ರಾಮದಲ್ಲಿ ಕೆಜಿಗೆ 65.38 ರೂ.ನಿಂದ 65.88 ರೂ.

- ರೇವಾರಿ(Rewari)ಯಲ್ಲಿ ಪ್ರತಿ ಕೆಜಿಗೆ 67.48 ರಿಂದ 67.98ಕ್ಕೆ ತಲುಪಿದೆ.

- ಕರ್ನಾಲ್ ಮತ್ತು ಕೈತಾಲ್‌ನಲ್ಲಿ CNG 50 ಪೈಸೆಯಷ್ಟು ದುಬಾರಿಯಾಗಿದ್ದು, ಪ್ರತಿ ಕೆಜಿಗೆ 66.18 ರೂ.ಗೆ ಏರಿಕೆಯಾಗಿದೆ.

- ಮುಜಾಫರ್‌ನಗರ GAಯಲ್ಲಿ ಪ್ರತಿ ಕೆಜಿಗೆ 64.28 ರೂ.ಗೆ ದರ ಏರಿಕೆಯಾಗಿದೆ.

- ಕಾನ್ಪುರ GAಯಲ್ಲಿ ಪ್ರತಿ ಕೆಜಿಗೆ 67.82 ರೂ.ನಿಂದ 68.82 ರೂ.ಗೆ ದರ ಏರಿಕೆಯಾಗಿದೆ.

- ಅಜ್ಮೀರ್ GAಯಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ ರೂ 67.31 ರಿಂದ ರೂ 67.81 ಕ್ಕೆ ಏರಿದೆ.

ಇದನ್ನೂ ಓದಿ: Rupees To Dollar: ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಡಾಲರ್ ಎದುರು ನೆಲಕಚ್ಚಿದ ರೂಪಾಯಿ, ಪ್ರಭಾವ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News