ನವದೆಹಲಿ : ದೇಶದಲ್ಲಿ ತೈಲ ಮತ್ತು ಅನಿಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದೇ ವೇಳೆ ಮತ್ತೊಮ್ಮೆ ಸಿಎನ್‌ಜಿ ಬೆಲೆಯೂ ಏರಿಕೆಯಾಗಿದೆ. ಇಂದು 2.50 ರೂ. ಏರಿಕೆಯಾಗಿದ್ದು, ಇದೀಗ ದೆಹಲಿಯಲ್ಲಿ ಸಿಎನ್ ಜಿ ಬೆಲೆ 69.11 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಏಪ್ರಿಲ್ 4 ರಿಂದ 6 ರವರೆಗೆ ದೆಹಲಿ-ಎನ್‌ಸಿಆರ್‌ನಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2.50 ರೂ. ಇಂದು ಹೆಚ್ಚಳವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಸಿಎನ್‌ಜಿ ಬೆಲೆ ಏಳೂವರೆ ರೂಪಾಯಿ ಹೆಚ್ಚಾಗಿದೆ. 48 ಗಂಟೆಗಳಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 5 ರೂಪಾಯಿ ಏರಿಕೆಯಾಗಿದೆ.
ನಿಮ್ಮ ನಗರದ ಬೆಲೆ ಎಷ್ಟು ಗೊತ್ತಾ?
ದೆಹಲಿ- 69.11 ₹/ಕೆಜಿ
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ - 71.67 ₹/ಕೆಜಿ
ಮುಜಾಫರ್‌ನಗರ, ಮೀರತ್ ಮತ್ತು ಶಾಮ್ಲಿ - 76.34 ₹/ಕೆಜಿ
ಗುರುಗ್ರಾಮ್ - 77.44 ₹/ಕೆಜಿ
ರೇವಾರಿ - 79.57 ₹/ಕೆಜಿ
ಕರ್ನಾಲ್ ಮತ್ತು ಕೈತಾಲ್ - 77.77 ₹/ಕೆಜಿ
ಕಾನ್ಪುರ್, ಹಮೀರ್ಪುರ್ ಮತ್ತು ಫತೇಪುರ್ - 80.90 ₹/ಕೆಜಿ
ಅಜ್ಮೀರ್, ಪಾಲಿ ಮತ್ತು ರಾಜ್ಸಮಂದ್ - 79.38 ₹/ಕೆಜಿ
ಇದನ್ನೂ ಓದಿ : ATMನಲ್ಲಿ ಹಣ ಸಿಕ್ಕಿ ಹಾಕಿಕೊಂಡಿದ್ದರೆ ತಕ್ಷಣ ಈ ಕೆಲಸ ಮಾಡಿ ..! ದುಡ್ಡು ನಿಮ್ಮ ಖಾತೆ ಸೇರುತ್ತದೆ
ಇಂದು ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಯಾಗಿಲ್ಲ
ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ(Petrol and Diesel Price)ಯಲ್ಲಿ ಇಂದು ಸ್ವಲ್ಪ ರಿಲೀಫ್ ಸಿಕ್ಕಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸದ ಕಾರಣ ದೆಹಲಿ ಸೇರಿದಂತೆ ದೇಶದ ಎಲ್ಲಾ ನಗರಗಳಲ್ಲಿ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಲೀಟರ್ ಗೆ 105.41 ರೂ., ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 120.51 ರೂ. ಮತ್ತು ಡೀಸೆಲ್ ಲೀಟರ್‌ಗೆ 104.77 ರೂ.ಗೆ ಮಾರಾಟವಾಗುತ್ತಿದೆ.
ಸರ್ಕಾರ CNG ಬೆಲೆ ದ್ವಿಗುಣ
ಜಾಗತಿಕ ಮಾರುಕಟ್ಟೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲದ (CNG) ಬೆಲೆಯನ್ನು ಹೆಚ್ಚಿಸುವ ಒತ್ತಡದಲ್ಲಿ ಸರ್ಕಾರವು ಕಳೆದ ವಾರ ಎಲ್‌ಎನ್‌ಜಿ ಬೆಲೆಯನ್ನು ಎರಡು ಪಟ್ಟು ಹೆಚ್ಚಿಸಿತ್ತು. ಮತ್ತು ಸಿಎನ್‌ಜಿ, ಪಿಎನ್‌ಜಿ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ವೇಗವಾಗಿ ಓಡಲು ಇದು ಕಾರಣವಾಗಿದೆ. ಗುರುವಾರ, LNG ಬೆಲೆಯು ಬ್ರಿಟಿಷ್ ಥರ್ಮಲ್ ಘಟಕಕ್ಕೆ $ 2.9 ರಿಂದ $ 6.10 ಕ್ಕೆ ಏರಿತು. ಅಂದಿನಿಂದ, ಸಿಎನ್‌ಜಿ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ : ಈ ತಾರೀಕಿನಂದು ಖಾತೆಗೆ ಬರಲಿದೆ PF ಬಡ್ಡಿ ಹಣ, ಬ್ಯಾಲೆನ್ಸ್ ಹಣವನ್ನು ಹೀಗೆ ಚೆಕ್ ಮಾಡಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.