ವೇತನ ಮತ್ತು ರಜಾ ನಿಯಮಗಳಿಗೆ ಸಂಬಂಧಿಸಿದಂತೆ ಭಾರೀ ಬದಲಾವಣೆ, ಏನು ಹೇಳುತ್ತದೆ New Wage Code

ಹೊಸ ವೇತನ ಸಂಹಿತೆಯ ಅಡಿಯಲ್ಲಿ, ಉದ್ಯೋಗಿಗಳ ಸ್ಯಾಲರಿ ಸ್ಟ್ರಕ್ಚರ್ ನಲ್ಲಿ ಬದಲಾವಣೆಯಾಗಬಹುದು. ಉದ್ಯೋಗಿಯ ಕಡಿಮೆ ಮಾಡಬಹುದು.

Written by - Ranjitha R K | Last Updated : Feb 8, 2022, 10:26 AM IST
  • ಜಾರಿಯಾಗಬಹುದು ಸರ್ಕಾರ ಹೊಸ ವೇತನ ಸಂಹಿತೆ
  • ಸ್ಯಾಲರಿ ಸ್ಟ್ರಕ್ಚರ್, ರಜಾದಿನಗಳಿಗೆ ಸಂಬಂಧಿಸಿದಂತೆ ಆಗಲಿವೆ ದೊಡ್ಡ ಬದಲಾವಣೆ
  • ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿಯಲ್ಲಿ ಕಡಿತವಾಗಲಿದೆ
ವೇತನ ಮತ್ತು ರಜಾ ನಿಯಮಗಳಿಗೆ ಸಂಬಂಧಿಸಿದಂತೆ ಭಾರೀ ಬದಲಾವಣೆ, ಏನು ಹೇಳುತ್ತದೆ New Wage Code  title=
ಜಾರಿಯಾಗಬಹುದು ಸರ್ಕಾರ ಹೊಸ ವೇತನ ಸಂಹಿತೆ (file photo)

ನವದೆಹಲಿ : New Wage Code India Updates: ಸರ್ಕಾರವು ಶೀಘ್ರದಲ್ಲೇ ಹೊಸ ವೇತನ ಸಂಹಿತೆಯನ್ನು (New Wage Code) ಜಾರಿಗೊಳಿಸಬಹುದು ಎನ್ನಲಾಗಿದೆ.  ಈ ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರಬೇಕಿತ್ತು.  ನಂತರ ಅಕ್ಟೋಬರ್ ನಿಂದ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ರಾಜ್ಯ ಸರ್ಕಾರದಿಂದ ಇನ್ನೂ ಕ್ಲಿಯರ್ ಆಗದ ಕಾರಣ,  ಈ ಹೊಸ ನೀತಿ ಸಂಹಿತೆ ಇನ್ನು ಜಾರಿಯಾಗುವುದು ಸಾಧ್ಯವಾಗಿಲ್ಲ. ಆದರೆ,  ಈ ನಿಯಮವನ್ನು ಹೊಸ ಆರ್ಥಿಕ ವರ್ಷದಿಂದ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಅಡಿಯಲ್ಲಿ ನೌಕರರ ವೇತನ, ರಜೆ ಇತ್ಯಾದಿಗಳಲ್ಲಿ ಬದಲಾವಣೆಗಳಿರುತ್ತವೆ.

1. ವರ್ಷದ ರಜಾದಿನಗಳು 300 ಕ್ಕೆ ಏರಲಿವೆ :  
ಉದ್ಯೋಗಿಗಳ ಗಳಿಕೆ ರಜೆಯನ್ನು (Earned Leave) 240 ರಿಂದ 300 ಕ್ಕೆ ಹೆಚ್ಚಿಸಬಹುದು. ಕಾರ್ಮಿಕ ಸಂಹಿತೆಯ ನಿಯಮಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯ, ಕಾರ್ಮಿಕ ಒಕ್ಕೂಟ ಮತ್ತು ಉದ್ಯಮದ ಪ್ರತಿನಿಧಿಗಳ ನಡುವೆ ಅನೇಕ ನಿಬಂಧನೆಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ನೌಕರರ ಗಳಿಕೆ ರಜೆಯನ್ನು 240 ರಿಂದ 300 ಕ್ಕೆ ಹೆಚ್ಚಿಸುವ ಬಗ್ಗೆ ಬೇಡಿಕೆ ಇಡಲಾಗಿತ್ತು. 

ಇದನ್ನೂ ಓದಿ : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಇಂದಿನ ಚಿನ್ನ - ಬೆಳ್ಳಿ ಬೆಲೆಯಲ್ಲಿ ಏರಿಕೆ!

2. ಬದಲಾಗುತ್ತದೆ ಸ್ಯಾಲರಿ ಸ್ಟ್ರಕ್ಚರ್ :
ಹೊಸ ವೇತನ ಸಂಹಿತೆಯ ಅಡಿಯಲ್ಲಿ (New Wage Code), ಉದ್ಯೋಗಿಗಳ ಸ್ಯಾಲರಿ ಸ್ಟ್ರಕ್ಚರ್ ನಲ್ಲಿ ಬದಲಾವಣೆಯಾಗಬಹುದು. ಉದ್ಯೋಗಿಯ Take Home Salary  ಕಡಿಮೆ ಮಾಡಬಹುದು. ಏಕೆಂದರೆ ವೇಜ್ ಕೋಡ್ ಆಕ್ಟ್, 2019 ರ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ (CTC) 50% ಕ್ಕಿಂತ ಕಡಿಮೆ ಇರುವಂತಿಲ್ಲ. ಪ್ರಸ್ತುತ ಹಲವು ಕಂಪನಿಗಳು, ತಮ್ಮ ಮೇಲಿನ ಹೊರೆ ಕಡಿಮೆ ಮಾಡಿಕೊಳ್ಳುವ ಸಲುವಾಗಿ, ಮೂಲ ವೇತನವನ್ನು ಕಡಿಮೆ ಮಾಡಿ  ಹೆಚ್ಚಿನ ಭತ್ಯೆಗಳನ್ನು ನೀಡುತ್ತಿದೆ. 

 3. ಕಡಿತವಾಗಲಿದೆ ಭತ್ಯೆಗಳು :
ಉದ್ಯೋಗಿಯ Cost-to-companyಯಲ್ಲಿ  ಮೂರರಿಂದ ನಾಲ್ಕು ವಿಷಯಗಳಿರುತ್ತವೆ. ಮೂಲ ವೇತನ, ಮನೆ ಬಾಡಿಗೆ ಭತ್ಯೆ (HRA), ನಿವೃತ್ತಿ ಪ್ರಯೋಜನಗಳಾದ PF, ಗ್ರಾಚ್ಯುಟಿ ಮತ್ತು ಪಿಂಚಣಿ  LTA ಮತ್ತು ಮನರಂಜನಾ ಭತ್ಯೆಯಂತಹ ತೆರಿಗೆ ಉಳಿತಾಯ ಭತ್ಯೆಗಳು. ಈಗ ಹೊಸ ವೇತನ ಸಂಹಿತೆಯಲ್ಲಿ, ಯಾವುದೇ ವೆಚ್ಚದಲ್ಲಿ ಭತ್ಯೆಗಳು ಒಟ್ಟು ವೇತನದ 50% ಮೀರಬಾರದು ಎಂದು ನಿರ್ಧರಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಉದ್ಯೋಗಿಯ ವೇತನವು ತಿಂಗಳಿಗೆ 50,000 ರೂ ಆಗಿದ್ದರೆ, ಅವನ ಮೂಲ ವೇತನ 25,000 ರೂ.ಆಗಿರಬೇಕು ಮತ್ತು ಅವನ ಭತ್ಯೆಗಳು ಉಳಿದ 25,000 ರೂ.ಗಳಲ್ಲಿ ಬರಬೇಕು.

ಇದನ್ನೂ ಓದಿ : Salary Account: ನೀವು ಸಂಬಳ ಖಾತೆಯನ್ನು ಹೊಂದಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ

4. ಹೊಸ ವೇತನ ಸಂಹಿತೆಯಲ್ಲಿ ವಿಶೇಷತೆ ಏನು? : 
ಹೊಸ ವೇತನ ಸಂಹಿತೆಯಲ್ಲಿ ಹೇಳಲಾದ ನಿಬಂಧನೆಗಳ ಪ್ರಕಾರ, ಇದು ಕಚೇರಿಯಲ್ಲಿ ಕೆಲಸ ಮಾಡುವ ಸಂಬಳ ಪಡೆಯುವ ವರ್ಗದಿಂದ ಹಿಡಿದು, ಗಿರಣಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರವರೆಗೂ ಪರಿಣಾಮ ಬೀರುತ್ತದೆ. ಉದ್ಯೋಗಿಗಳ ಸಂಬಳದಿಂದ ಅವರ ರಜಾದಿನಗಳು ಮತ್ತು ಕೆಲಸದ ಸಮಯದಲ್ಲಿಯೂ ಬದಲಾವಣೆಯಾಗಲಿದೆ.

5. ಕೆಲಸದ ಸಮಯದಲ್ಲೂ ಹೆಚ್ಚಳ, ವಾರದ ರಜೆಯಲ್ಲೂ ಹೆಚ್ಚಳ : 
ಹೊಸ ವೇತನ ಸಂಹಿತೆಯ ಪ್ರಕಾರ, ಕೆಲಸದ ಅವಧಿಯು 12 ಗಂಟೆಗಳಾಗುತ್ತವೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಸ್ತಾವಿತ ಕಾರ್ಮಿಕ ಸಂಹಿತೆಯಲ್ಲಿ ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮವನ್ನು ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಕೆಲವು ಸಂಘಗಳು 12 ಗಂಟೆಗಳ ಕೆಲಸ ಮತ್ತು 3 ದಿನಗಳ ರಜಾ ನಿಯಮವನ್ನು ಪ್ರಶ್ನಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ, ವಾರದಲ್ಲಿ 48 ಗಂಟೆ ಕೆಲಸ ಮಾಡುವ ನಿಯಮವಿದ್ದು, ಯಾರಾದರೂ ದಿನಕ್ಕೆ 8 ಗಂಟೆ ಕೆಲಸ ಮಾಡಿದರೆ ವಾರಕ್ಕೆ 6 ದಿನ ಕೆಲಸ ಮಾಡಬೇಕಾಗುತ್ತದೆ. ಮತ್ತು ವಾರದಲ್ಲಿ ಒಂದು ದಿನದ ರಜೆಯನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಹೇಳಿತ್ತು.  ಅದೇ ಕಂಪನಿಯು ದಿನಕ್ಕೆ 12 ಗಂಟೆಗಳ ಕೆಲಸವನ್ನು ಅಳವಡಿಸಿಕೊಂಡರೆ,  3 ದಿನಗಳವರೆಗೆ ಉದ್ಯೋಗಿಗೆ ರಜೆ ನೀಡಬೇಕಾಗುತ್ತದೆ. ಕೆಲಸದ ಸಮಯಕ್ಕೆ ಅನುಗುಣವಾಗಿ ಕೆಲಸದ ದಿನಗಳು 6 ರ ಬದಲು 5 ಅಥವಾ 4 ಆಗಿರುತ್ತದೆ. ಆದರೆ ಇದಕ್ಕಾಗಿ, ಉದ್ಯೋಗಿ ಮತ್ತು ಕಂಪನಿಯ ನಡುವೆ ಒಮ್ಮತವಿರುವುದು ಅಗತ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News