Changes From 1 April 2022: ಒಮ್ಮೆಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 250 ರೂ. ಹೆಚ್ಚಳ!

LPG Cylinder Price Hike: ಇಂದಿನಿಂದ LPG ಸಿಲಿಂಡರ್ ಬೆಲೆ 250 ರೂ.ಗಳಷ್ಟು ಹೆಚ್ಚಾಗಿದೆ, ಇಂದಿನಿಂದ ನೀವು ಸಿಲಿಂಡರ್‌ಗೆ ಎಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ...   

Written by - Yashaswini V | Last Updated : Apr 1, 2022, 07:35 AM IST
  • ಇಂದು ಅಂದರೆ ಹೊಸ ಹಣಕಾಸು ವರ್ಷದ ಮೊದಲ ದಿನವೇ ಗ್ರಾಹಕರಿಗೆ ಸಿಲಿಂಡರ್ ಬಿಸಿ
  • ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ
  • ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಂದೇ ಏಟಿಗೆ 250 ರೂ. ಏರಿಕೆ
Changes From 1 April 2022: ಒಮ್ಮೆಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 250 ರೂ. ಹೆಚ್ಚಳ!  title=
Commercial Cylinder Price

LPG Cylinder Price Hike: ಇಂದು ಏಪ್ರಿಲ್ 1 ಹೊಸ ಹಣಕಾಸು ವರ್ಷದೊಂದಿಗೆ ಹಲವು ನಿಯಮಗಳು ಬದಲಾಗಲಿದ್ದು ಇದು ಶ್ರೀಸಾಮಾನ್ಯರ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ. ಇದಲ್ಲದೆ, ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ತೈಲ ಮತ್ತು ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಒಂದೇ ಏಟಿಗೆ 250 ರೂ. ಏರಿಕೆ ಮಾಡಿವೆ. ಆದಾಗ್ಯೂ, ಈ ಬೆಲೆ ಏರಿಕೆ ಆಗಿರುವುದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಅಲ್ಲ, ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳಲ್ಲಿ (Commercial Cylinder Price) ಎಂಬ ಸಮಾಧಾನವಿದೆ. ಹೀಗಾಗಿ ದೇಶಿಯ ಗ್ರಾಹಕರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. 10 ದಿನಗಳ ಹಿಂದೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನ ಮಾರ್ಚ್ 22 ರಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಕುಸಿತ ದಾಖಲಾಗಿತ್ತು.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಯನ್ನು (LPG Price) ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಮಾರ್ಚ್ 22 ರಿಂದ ಗ್ರಾಹಕರು ಹಣದುಬ್ಬರದ ಆಘಾತವನ್ನು ಪಡೆಯಲಾರಂಭಿಸಿದರು. ಮಾರ್ಚ್ 22 ರಂದು ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ 50 ರೂ. ಹೆಚ್ಚಳ ಮಾಡಲಾಗಿದೆ. ಇದಕ್ಕೂ ಮೊದಲು ಅಂದರೆ 6 ಅಕ್ಟೋಬರ್ 2021 ರ ನಂತರ, ಗೃಹಬಳಕೆಯ ಎಲ್‌ಪಿಜಿ  ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

ಇದನ್ನೂ ಓದಿ- LPG Subsidy ಬಗ್ಗೆ ಸರ್ಕಾರದ ಹೊಸ ಯೋಜನೆ! ಈಗ ಯಾರ ಖಾತೆಗೆ ಬರುತ್ತೆ ಹಣ!

ಇಂದು ಅಂದರೆ ಹೊಸ ಹಣಕಾಸು ವರ್ಷದ ಮೊದಲ ದಿನದಂದು ಸಹ,  ಎಲ್‌ಪಿಜಿ ಸಿಲಿಂಡರ್‌ಗಳು ದೆಹಲಿಯಲ್ಲಿ ರೂ. 949.50, ಕೋಲ್ಕತ್ತಾದಲ್ಲಿ ರೂ. 976, ಮುಂಬೈನಲ್ಲಿ ರೂ. 949.50 ಮತ್ತು ಚೆನ್ನೈನಲ್ಲಿ ರೂ. 965.50 ಕ್ಕೆ ಲಭ್ಯವಿದೆ. 

ದೆಹಲಿಯಲ್ಲಿ 19 ಕೆಜಿಯ ಎಲ್‌ಪಿಜಿ  ಸಿಲಿಂಡರ್ (LPG Cylinder) ಮಾರ್ಚ್ 1 ರಂದು 2012 ರೂ.ಗೆ ಲಭ್ಯವಿತ್ತು, ಅದನ್ನು ಮಾರ್ಚ್ 22 ರಂದು 2003 ರೂ.ಗೆ ಇಳಿಸಲಾಯಿತು. ಆದರೆ ಇಂದಿನಿಂದ ದೆಹಲಿಯಲ್ಲಿ ಇದಕ್ಕಾಗಿ 2253 ರೂ. ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಕೋಲ್ಕತ್ತಾದಲ್ಲಿ 19 ಕೆಜಿಯ ಎಲ್‌ಪಿಜಿ  ಸಿಲಿಂಡರ್‌ಗಾಗಿ 2087 ರೂ. ಬದಲಿಗೆ ಈಗ 2351 ರೂ. ಮತ್ತು ಮುಂಬೈನಲ್ಲಿ 1955 ರೂ. ಬದಲಿಗೆ 2205 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಇಂದಿನಿಂದ ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಗಾಗಿ 2138 ರೂ.ಗಳ ಬದಲಿಗೆ 2406 ರೂ. ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ- Changes From 1 April 2022: ಪಿಎಫ್, ಆಸ್ತಿ ತೆರಿಗೆಯಿಂದ ಮ್ಯೂಚುಯಲ್ ಫಂಡ್‌ಗಳವರೆಗೆ ಇಂದಿನಿಂದ ಪ್ರಮುಖ ಬದಲಾವಣೆಗಳು!

ಇದಕ್ಕೂ ಮೊದಲು ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು (Commercial Cylinder Price) 105 ರೂ. ಹೆಚ್ಚಿಸಲಾಗಿತ್ತು ಮತ್ತು ನಂತರ ಮಾರ್ಚ್ 22 ರಂದು ಅದರ ಬೆಲೆಯನ್ನು 9 ರೂ. ಕಡಿಮೆ ಮಾಡಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News