Changes From 1 March 2024 : ಇಂದಿನಿಂದ ಹೊಸ ತಿಂಗಳು ಅಂದರೆ ಮಾರ್ಚ್ ಆರಂಭವಾಗಿದೆ. ಪ್ರತಿ ತಿಂಗಳು ಅನೇಕ ನಿಯಮಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಮಾರ್ಚ್ ತಿಂಗಳು ಈ ವಿಚಾರದಲ್ಲಿ ಸ್ವಲ್ಪ ವಿಶೇಷವೇ. ಏಕೆಂದರೆ ಇದು ಆರ್ಥಿಕ ವರ್ಷದ ಕೊನೆಯ ತಿಂಗಳು. ಆದ್ದರಿಂದ ಪ್ರತಿಯೊಬ್ಬರೂ ಹಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಬಾರಿ ಜಿಎಸ್‌ಟಿ ನಿಯಮಗಳಿಂದ ಎಲ್‌ಪಿಜಿ ಮತ್ತು ಫಾಸ್ಟ್ಯಾಗ್‌ಗೆ ಸಂಬಂಧಪಟ್ಟಂತೆ ಹಲವು ಬದಲಾವಣೆಗಳನ್ನು ಕಾಣಬಹುದು.
ಮಾರ್ಚ್ 1 ರಿಂದ ಬದಲಾಗಲಿರುವ ಪ್ರಮುಖ ನಿಯಮಗಳು :
ಜಿಎಸ್‌ಟಿ ನಿಯಮ :
ಜಿಎಸ್‌ಟಿಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಇನ್ನು ಮುಂದೆ 5 ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ನಡೆಸುತ್ತಿರುವವರು ಇ-ಚಲನ್ ಇಲ್ಲದೆ ಇ-ವೇ ಬಿಲ್ ಜನರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಯಮ ಮಾರ್ಚ್ 1 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ : LPG Latest Price: ಮಾರ್ಚ್‌ನ ಮೊದಲ ದಿನವೇ ಗ್ರಾಹಕರಿಗೆ ಶಾಕ್! ವಾಣಿಜ್ಯ ಸಿಲಿಂಡರ್ ಬೆಲೆ 25.50 ರೂ. ಏರಿ
ಫಾಸ್ಟ್ಯಾಗ್ ಇ-ಕೆವೈಸಿ :
ಫಾಸ್ಟ್ಯಾಗ್‌ನ EKYC ಅನ್ನು ನವೀಕರಿಸಲು ಇಂದು ಕೊನೆಯ ದಿನ. ಮಾರ್ಚ್ 1 ರಿಂದ KYC ಅನ್ನು ಅಪ್ಡೇಟ್ ಮಾಡದೇ ಹೋದರೆ NHAI ನಿಂದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ :
ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲು ಎಸ್‌ಬಿಐ ನಿರ್ಧರಿಸಿದೆ. ಬ್ಯಾಂಕ್ ತನ್ನ ಮಿನಿಮಮ್ ಡೇ ಬಿಲ್ ಲೆಕ್ಕಾಚಾರದ ನಿಯಮಗಳನ್ನು ಬದಲಾಯಿಸಲು ನಿರ್ಧರಿಸಿದೆ. ಮಾರ್ಚ್ 15 ರಿಂದ ಈ ನಿಯಮಗಳು ಬದಲಾಗುತ್ತವೆ.
ಬ್ಯಾಂಕ್ ರಜೆ ಪಟ್ಟಿ :
ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಮತ್ತು ಹೋಳಿಯಂತಹ ದೊಡ್ಡ ಹಬ್ಬಗಳಿವೆ. ಈ ತಿಂಗಳು ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ರಜಾದಿನಗಳ ಪಟ್ಟಿಯು ಪ್ರದೇಶವಾರು ಬದಲಾಗಬಹುದು.ಯಾವುದೇ ಕೆಲಸಕ್ಕಾಗಿ ಶಾಖೆಗೆ ಹೋಗುವ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಆದರೆ, ಈ ಸಮಯದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಕೆಲಸವನ್ನು ಮಾಡಬಹುದು.
ಇದನ್ನೂ ಓದಿ : Good News: ದೇಶದ ಕೋಟ್ಯಾಂತರ ರೈತರಿಗೆ ಮೋದಿ ಸರ್ಕಾರದ ಭರ್ಜರಿ ಉಡುಗೊರೆ, 24 ಸಾವಿರ ರೂ.ಗಳ ಸಬ್ಸಿಡಿಗೆ ಅನುಮೋದನೆ!
ಸಿಲಿಂಡರ್ ಬೆಲೆ ಏರಿಕೆ:
ಮಾರ್ಚ್ ಮೊದಲ ದಿನ ತೈಲ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಈ ಹಿಂದೆ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲೂ ಬೆಲೆ ಏರಿಕೆಯಾಗಿತ್ತು. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸತತ ಮೂರು ತಿಂಗಳಿನಿಂದ ಏರಿಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ