ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಹೆಚ್ಚಿಸಲಾಗುವುದು. ಹೊಸ ತುಟ್ಟಿಭತ್ಯೆ ಜುಲೈ 1 ರಿಂದ ಜಾರಿಗೆ ಬರಲಿದೆ. ಈ ಹೆಚ್ಚಳವನ್ನು ಸರ್ಕಾರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ. ವಾಸ್ತವವಾಗಿ, ಸರ್ಕಾರವು ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸುತ್ತದೆ. ಪ್ರಸ್ತುತ ಸರ್ಕಾರದಿಂದ ನೌಕರರಿಗೆ ಶೇ.42 ತುಟ್ಟಿಭತ್ಯೆ ನೀಡಲಾಗುತ್ತಿದೆ. ಜೂನ್ ತಿಂಗಳ ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಮುಂದಿನ ತುಟ್ಟಿಭತ್ಯೆ ನಿರ್ಧಾರವಾಗಲಿದೆ.
ಈ ದಿನಾಂಕದಿಂದ ಜಾರಿಗೆ ಬರುವ ನಿರೀಕ್ಷೆಯಿದೆ :
ಜುಲೈ ತಿಂಗಳಲ್ಲಿ ಸರ್ಕಾರವು ತುಟ್ಟಿಭತ್ಯೆಯನ್ನು 4% ದಷ್ಟು ಹೆಚ್ಚಿಸಿದರೆ, ನೌಕರರ ಡಿಎ 46% ಕ್ಕೆ ಏರುತ್ತದೆ. ಅಂದರೆ ಜುಲೈ 1 ರಿಂದ ನೌಕರರ ಡಿಎ ಶೇ.46 ಆಗಲಿದ್ದು, ಇದರ ಆಧಾರದ ಮೇಲೆ ಸರ್ಕಾರ ಡಿಸೆಂಬರ್ 2023ರವರೆಗೆ ಡಿಎ ಪಾವತಿಸಲಿದೆ. ಇದರ ನಂತರ, DA ಯ ಮುಂದಿನ ಹೆಚ್ಚಳವು ಜನವರಿ 1, 2024 ರಿಂದ ಅನ್ವಯವಾಗುತ್ತದೆ. ಜನವರಿ 1 ರ ಡಿಎ ಕೂಡಾ ಮಾರ್ಚ್ ತಿಂಗಳಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ. ಜನವರಿ 1, 2024 ರಿಂದ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ, ಉದ್ಯೋಗಿಗಳ ತುಟ್ಟಿಭತ್ಯೆ ಶೇಕಡಾ 50 ಕ್ಕೆ ಹೆಚ್ಚಾಗುತ್ತದೆ.
ಇದನ್ನೂ ಓದಿ : ನಿಮ್ಮ ಪ್ಯಾನ್ ಕಾರ್ಡ್ ಕೂಡ ನಿಷ್ಕ್ರಿಯಗೊಂಡಿದ್ಯಾ? ಆದಾಯ ತೆರಿಗೆ ಇಲಾಖೆ ನೀಡಿದೆ ಗುಡ್ ನ್ಯೂಸ್
ಕನಿಷ್ಠ ವೇತನ 18,000 ರೂ. ಆಧಾರದ ಮೇಲೆ ನೋಡುವುದಾದರೆ ಕೇಂದ್ರ ನೌಕರರು ಪ್ರತಿ ತಿಂಗಳು ಕನಿಷ್ಠ 9000 ರೂ.ಗಳ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ವೇತನಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆಯೂ ಹೆಚ್ಚಾಗಲಿದೆ. ಈ ಹಿಂದೆ ಮಾರ್ಚ್‌ನಲ್ಲಿ ಕೇಂದ್ರ ನೌಕರರ ಡಿಎಯನ್ನು ಸರ್ಕಾರ ಶೇ 4ರಷ್ಟು ಹೆಚ್ಚಿಸಿದ್ದು, ನೌಕರರ ತುಟ್ಟಿಭತ್ಯೆ ಶೇ 42ಕ್ಕೆ ಏರಿಕೆಯಾಗಿತ್ತು. ಈ ಹೆಚ್ಚಳವನ್ನು 1 ಜನವರಿ 2023 ರಿಂದ ಜಾರಿಗೆ ತರಲಾಗಿದೆ.
ಡಿಎಯಲ್ಲಿ ಉತ್ತಮ ಹೆಚ್ಚಳ ನಿರೀಕ್ಷೆ :
ಈ ಬಾರಿಯೂ ಉದ್ಯೋಗಿಗಳ ಡಿಎಯಲ್ಲಿ ಉತ್ತಮ ಹೆಚ್ಚಳವಾಗುವ ಭರವಸೆ ಇದೆ. ತುಟ್ಟಿಭತ್ಯೆಯ ನಿಯಮವೆಂದರೆ ಅದು 50 ಪ್ರತಿಶತವನ್ನು ತಲುಪಿದಾಗ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಈ ಹಿಂದೆ 2016ರಲ್ಲಿ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗಿತ್ತು. ನಿಯಮಗಳ ಪ್ರಕಾರ ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಿ ಶೇ.50ರ ಪ್ರಕಾರ ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.
ಇದನ್ನೂ ಓದಿ : ಬ್ಯಾಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಯಾಗುತ್ತಿದೆ 2000 ರೂ. ನೋಟು ! ಗ್ರಾಹಕರಿಗೆ ಸಿಗಲಿದೆ ಈ ಲಾಭ
ಮೂಲ ವೇತನದಲ್ಲಿ ಹೆಚ್ಚಳ :
ಮೇಲಿನ ನಿಯಮಗಳ ಪ್ರಕಾರ, ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ 9000 ರೂ. ಹೆಚ್ಚಳವಾಗುತ್ತದೆ. ಉದ್ಯೋಗಿಯ ಮೂಲ ವೇತನ 18000 ರೂ.ಆಗಿದ್ದರೆ, 50% ಡಿಎಯ ಆಧಾರದಲ್ಲಿ ಅವರು 9000 ರೂ. ಪಡೆಯುತ್ತಾರೆ. ಆದರೆ, ಡಿಎ 50% ಆದ ನಂತರ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಇದಾದ ಬಳಿಕ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಆ ನಂತರ ಮತ್ತೆ ಮೊದಲಿನ ನಿಯಮವನ್ನೇ ಅನ್ವಯಿಸಿಕೊಂಡು ಹೋಗಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.