6 ಏರ್‌ಬ್ಯಾಗ್‌ಗಳನ್ನು ಹೊಂದಿರುವ 10 ಲಕ್ಷದೊಳಗಿನ ಕಾರುಗಳು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವರ್ಗದಲ್ಲೂ ಕಾರುಗಳ ಉತ್ತಮ ಆಯ್ಕೆಗಳಿವೆ. ಈ ಆಯ್ಕೆಗಳಿಂದ ಗ್ರಾಹಕರು ತಮಗಿಷ್ಟವಾದ ಕಾರನ್ನು ಆರಿಸಿಕೊಳ್ಳಬಹುದು. ಆದರೆ ಸುರಕ್ಷತೆಯ ವಿಷಯದಲ್ಲಿ ಕೆಲವು ಕಾರುಗಳು ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇವುಗಳ ಬಜೆಟ್ ಕೂಡ ಕಡಿಮೆಯಾಗಿದೆ. ಇಂದು ನಾವು ನಿಮಗಾಗಿ ಅಂತಹ ಕೆಲವು ಕಾರುಗಳ ಬಗ್ಗೆ ಮಾಹಿತಿ ತಂದಿದ್ದೇವೆ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಬಲವಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳ ಮಾಹಿತಿ ಇಲ್ಲಿದೆ ನೋಡಿ.
ಈ ಕಾರುಗಳಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಸಾಮರ್ಥ್ಯದ ಸ್ಟೀಲ್, ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸಂವೇದಕ, ವೇಗ ಎಚ್ಚರಿಕೆ ವ್ಯವಸ್ಥೆ, ಸುರಕ್ಷತಾ ಬೆಲ್ಟ್ ಎಚ್ಚರಿಕೆ ವ್ಯವಸ್ಥೆ, ಹಿಂಭಾಗದ ಸೀಟ್ ಬೆಲ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಇತ್ಯಾದಿಗಳನ್ನು ಕಾರುಗಳಲ್ಲಿ ಸೇರಿಸಲಾಗಿದೆ. ಆದರೆ ಈ ವೈಶಿಷ್ಟ್ಯಗಳಿಂದಾಗಿ ಕೆಲವು ಕಾರುಗಳ ಬೆಲೆ ಕೊಂಚ ಹೆಚ್ಚಾಗುತ್ತದೆ. ಇಂದು ನಾವು ನಿಮಗೆ ಬಜೆಟ್ ಶ್ರೇಣಿಯಲ್ಲಿ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುವ ಕಾರುಗಳ ತಿಳಿಸಿಕೊಡಲಿದ್ದೇವೆ.
ಇದನ್ನೂ ಓದಿ: ಲೋಕಸಭೆಗೆ ಮತಬೇಟೆ: ಇಂದಿನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲಿರುವ ರಾಹುಲ್ ಗಾಂಧಿ!
ಹ್ಯುಂಡೈ ಗ್ರಾಂಡ್ i10 ನಿಯೋಸ್: ಇದರ ಬೆಲೆ 5.92 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 8.23 ಲಕ್ಷದವರೆಗೆ (ಎಕ್ಸ್ ಶೋರೂಂ) ವರೆಗೆ ಹೋಗುತ್ತದೆ.
ಹುಂಡೈ ಎಕ್ಸೆಟರ್: ಇದರ ಬೆಲೆ 6.12 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 9.16 ಲಕ್ಷದವರೆಗೆ (ಎಕ್ಸ್ ಶೋರೂಂ) ವರೆಗೆ ಹೋಗುತ್ತದೆ.
ಹ್ಯುಂಡೈ ಔರಾ: ಇದರ ಬೆಲೆ 6.48 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 9 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ.
ಹುಂಡೈ i20: ಇದರ ಬೆಲೆ 7 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 11.20 ಲಕ್ಷದವರೆಗೆ (ಎಕ್ಸ್ ಶೋ ರೂಂ) ವರೆಗೆ ಹೋಗುತ್ತದೆ.
ಹುಂಡೈ ವೆನ್ಯೂ: ಇದರ ಬೆಲೆ 7 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 11.20 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ.
ಟಾಟಾ ನೆಕ್ಸಾನ್: ಇದರ ಬೆಲೆ 8 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 6.95 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ.
ಈ ಕಾರುಗಳ ಎಲ್ಲಾ ರೂಪಾಂತರಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳು ಲಭ್ಯವಿವೆ. ಏಕೆಂದರೆ ಇವುಗಳಲ್ಲಿ 6 ಏರ್‌ಬ್ಯಾಗ್‌ಗಳು ಪ್ರಮಾಣಿತವಾಗಿವೆ. ಕಾರಿನಲ್ಲಿ 6 ಏರ್‌ಬ್ಯಾಗ್‌ಗಳಿದ್ದರೆ ಅದರಲ್ಲಿ ಕುಳಿತುಕೊಳ್ಳುವವರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇದು ಅಪಘಾತದ ಸಮಯದಲ್ಲಿ ಗಂಭೀರ ಗಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಾಣವನ್ನು ಉಳಿಸುತ್ತದೆ.
ಇದನ್ನೂ ಓದಿ: Photo Gallery: ಪ್ರಧಾನಿ ಮೋದಿಯಿಂದ ದೇಶದ ಅತೀ ಉದ್ದದ ಅಟಲ್ ಸೇತುವೆ ಲೋಕಾರ್ಪಣೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.