ಸರ್ಕಾರದ ಈ ಯೋಜನೆಯಿಂದ ಕಾರು ಮಾಲೀಕರಿಗೆ ಸಿಗುವುದು ವಿಶೇಷ ಸೌಲಭ್ಯ

Vehicle Scrapping Facilities: 'ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಮೂರು ನೋಂದಾಯಿತ  ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು  ತೆರೆಯುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ರಾಷ್ಟ್ರೀಯ ವಾಹನ ಸ್ಕ್ರ್ಯಾಪ್ ನೀತಿಯನ್ನು ಪ್ರಾರಂಭಿಸಲಾಗಿತ್ತು.

Written by - Ranjitha R K | Last Updated : Sep 15, 2022, 09:58 AM IST
  • ಒಂದು ವರ್ಷದ ಹಿಂದೆ ಪ್ರಾರಂಭವಾಯಿತು ವಾಹನ ಸ್ಕ್ರ್ಯಾಪ್ ನೀತಿ
  • ಭಾರತದಲ್ಲಿ ಗ್ಲೋಬಲ್ ಸೇಫ್ಟಿ ಸ್ಟ್ಯಾಂಡರ್ಡ್ ಅಳವಡಿಸಲು ಸಲಹೆ
  • ಜನರ ಜೀವದ ಬಗ್ಗೆ ಯಾಕೆ ಯೋಚಿಸುತ್ತಿಲ್ಲ - ಸಚಿವರ ಪ್ರಶ್ನೆ
ಸರ್ಕಾರದ ಈ ಯೋಜನೆಯಿಂದ ಕಾರು ಮಾಲೀಕರಿಗೆ ಸಿಗುವುದು ವಿಶೇಷ ಸೌಲಭ್ಯ  title=
Vehicle Scrapping Facilities (file photo)

Vehicle Scrapping Facilities :  ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ತೆರೆಯಲು ಸರ್ಕಾರ ಯೋಜಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ರೋಪ್‌ವೇ, ಕೇಬಲ್ ಕಾರ್ ಮತ್ತು ಫ್ಯೂನಿಕ್ಯುಲರ್ ರೈಲ್ವೇಗಾಗಿ ರಸ್ತೆ ಸಚಿವಾಲಯವು 206 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಪ್ರಾರಂಭವಾಯಿತು ವಾಹನ ಸ್ಕ್ರ್ಯಾಪ್ ನೀತಿ : 
'ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಮೂರು ನೋಂದಾಯಿತ  ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು  ತೆರೆಯುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ರಾಷ್ಟ್ರೀಯ ವಾಹನ ಸ್ಕ್ರ್ಯಾಪ್ ನೀತಿಯನ್ನು ಪ್ರಾರಂಭಿಸಲಾಗಿತ್ತು. ಬಳಕೆಯಲ್ಲಿಲ್ಲದ ಮತ್ತು ಮಾಲಿನ್ಯಕಾರಕ ವಾಹನಗಳನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಲು ಈ ನೀತಿ ಸಹಾಯ ಮಾಡುತ್ತದೆ ಎಂದು  ಗಡ್ಕರಿ ಹೇಳಿದ್ದಾರೆ. 

ಇದನ್ನೂ ಓದಿ : ದೇಶದ ಅತ್ಯಂತ ಅಗ್ಗದ ಸೆಡಾನ್: 6 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ

ಭಾರತದಲ್ಲಿ ಗ್ಲೋಬಲ್ ಸೇಫ್ಟಿ ಸ್ಟ್ಯಾಂಡರ್ಡ್ ಅಳವಡಿಸಿಕೊಳ್ಳಿ :
ಭಾರತದಲ್ಲಿನ ಬಹುತೇಕ ವಾಹನ ತಯಾರಕರು ಈಗಾಗಲೇ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳನ್ನು ರಫ್ತು ಮಾಡುತ್ತಿದ್ದಾರೆ. ಭಾರತದಲ್ಲಿಯೂ ಕಾರುಗಳಿಗೆ ಅಂತಹ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ. ಕಡಿಮೆ ಬೆಲೆಯ ಸಣ್ಣ ಕಾರುಗಳನ್ನು ಬಳಸುವ ಜನರ ಸುರಕ್ಷತೆಯ ಬಗ್ಗೆ ವಾಹನ ತಯಾರಕರು ಯೋಚಿಸಬೇಕು ಎಂದು ಅವರು ಹೇಳಿದ್ದಾರೆ. 

ಜನರ ಜೀವದ ಬಗ್ಗೆ ಏಕೆ ಯೋಚಿಸುತ್ತಿಲ್ಲ?
“ಭಾರತದ ಹೆಚ್ಚಿನ ವಾಹನ ತಯಾರಕರು ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳನ್ನು ರಫ್ತು ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿನ ಆರ್ಥಿಕ ವೆಚ್ಚದಿಂದಾಗಿ ಅವರು ಹಿಂಜರಿಯುತ್ತಾರೆ. ಭಾರತದಲ್ಲಿ ಅಗ್ಗದ ಕಾರುಗಳನ್ನು ಬಳಸುವ ಜನರ ಜೀವನದ ಬಗ್ಗೆ ವಾಹನ ತಯಾರಕರು ಏಕೆ ಯೋಚಿಸುತ್ತಿಲ್ಲ ಎಂದು ಗಡ್ಕರಿ  ಪ್ರಶ್ನಿಸಿದ್ದಾರೆ. ದೇಶದಲ್ಲಿ ಅಪಘಾತಗಳನ್ನು ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು  ಹೇಳಿದ್ದಾರೆ. 

ಇದನ್ನೂ ಓದಿ : Gold Price Today : ಮತ್ತೆ ಬಂಗಾರದ ಬೆಲೆಯಲ್ಲಿ ಇಳಿಕೆ ಬೆಳ್ಳಿ ಕೂಡಾ ಅಗ್ಗ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News