PM Kisan: ಪತಿ ಪತ್ನಿ ಇಬ್ಬರಿಗೂ ಪಿಎಂ ಕಿಸಾನ್ ಯೋಜನೆಯ 6000 ರೂಪಾಯಿ ? ಏನು ಹೇಳುತ್ತದೆ ನಿಯಮ

PM Kisan Samman Nidhi Update : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸರ್ಕಾರವು ರೈತರಿಗೆ ಆರ್ಥಿಕವಾಗಿ ಸಹಾಯ ನೀಡುತ್ತಿದೆ.

Written by - Ranjitha R K | Last Updated : Aug 31, 2021, 03:49 PM IST
  • PM ಕಿಸಾನ್ ಅಡಿಯಲ್ಲಿ ಲಾಭ ಪಡೆಯಲು ಏನು ಮಾಡಬೇಕು
  • ಈಗಾಗಲೇ 9 ನೇ ಕಂತನ್ನು ರೈತರ ಖಾತೆಗೆ ಪಾವತಿಸಲಾಗಿದೆ
  • ಈ ಯೋಜನೆಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಿ
PM Kisan: ಪತಿ ಪತ್ನಿ ಇಬ್ಬರಿಗೂ ಪಿಎಂ ಕಿಸಾನ್ ಯೋಜನೆಯ 6000 ರೂಪಾಯಿ  ? ಏನು ಹೇಳುತ್ತದೆ ನಿಯಮ  title=
PM Kisan Samman Nidhi Update (file photo)

ನವದೆಹಲಿ :PM Kisan Samman Nidhi Update : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಸರ್ಕಾರವು ರೈತರಿಗೆ ಆರ್ಥಿಕವಾಗಿ ಸಹಾಯ ನೀಡುತ್ತಿದೆ. ಈ ಯೋಜನೆಯಲ್ಲಿ ಎರಡು ಸಾವಿರ ರೂಪಾಯಿಗಳಂತೆ, ಮೂರೂ ಕಂತುಗಳಲ್ಲಿ ರೈತರಿಗೆ ಸರ್ಕಾರ 6000 ರೂ.ಗಳನ್ನು ಪಾವತಿಸುತ್ತದೆ.   ಈಗಾಗಲೇ ಯೋಜನೆಯ 9 ಕಂತುಗಳು  (PM Kisan 9th Installment)  ರೈತರ ಖಾತೆ ಸೇರಿದೆ. ಆದರು ಇನ್ನೂ ಕೂಡಾ ಯೋಜನೆಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳು ಕಾಡುತ್ತಲೇ ಇವೆ. 

ಯಾರಿಗೆ ಸಿಗಲಿದೆ ಯೋಜನೆಯ ಲಾಭ? : 
ಪತಿ ಮತ್ತು ಪತ್ನಿ ಇಬ್ಬರೂ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ (PM Kisan Benefits) ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ, ಯಾರಾದರೂ ಹೀಗೆ  ಮಾಡಿದರೆ, ಸರ್ಕಾರವು ಅವರಿಂದ ಹಣವನ್ನು ರಿಕವರಿ ಮಾಡಿಕೊಳ್ಳುತ್ತದೆ. ಮತ್ತು ಸರಕಾರ ಅಂಥಹ ರೈತರನ್ನು ಅನರ್ಹರನ್ನಾಗಿಸುತ್ತದೆ. ಇನ್ನು ರೈತರ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ, ಅಂಥಹ ರೈತರಿಗೆ ಕೂಡಾ ಯೋಜನೆಯ ಲಾಭ ಸಿಗುವುದಿಲ್ಲ.  ಅಂದರೆ, ಸಂಗಾತಿಗಳಲ್ಲಿ ಯಾರಾದರೂ ಕಳೆದ ವರ್ಷ ಆದಾಯ ತೆರಿಗೆಯನ್ನು (Income tax) ಪಾವತಿಸಿದ್ದರೆ, ಅವರು ಈ ಯೋಜನೆಯ ಲಾಭವನ್ನು ಪಡೆಯುವುಡು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಸಿಗಲಿದೆ ಬ್ಯಾಂಕ್ ಗಿಂತಲೂ ಅಧಿಕಬಡ್ಡಿ , ಬಡ್ಡಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಯಾರು ಅನರ್ಹರು :
ಒಬ್ಬ ರೈತ ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ, ಇತರ ಕೆಲಸಗಳನ್ನು ಮಾಡುತ್ತಿದ್ದರೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಆ ರೈತನಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.  ಒಬ್ಬ ರೈತ ಬೇಸಾಯ ಮಾಡುತ್ತಿದ್ದು, ಹೊಲವು ಅವನ ಹೆಸರಿನಲ್ಲಿ ಇರದಿದ್ದರೆ, ಅಂದರೆ ಹೊಲ ಆತನ ತಂದೆ ಅಥವಾ ಅಜ್ಜನ ಹೆಸರಿನಲ್ಲಿ ಇದ್ದರೆ, ಅವನು ಕೂಡ ಈ ಯೋಜನೆಯ (PM Kisan) ಲಾಭವನ್ನು ಪಡೆಯುವುದಿಲ್ಲ.

ಇವರುಗಳಿಗೂ ಸಹಾ ಯೋಜನೆಯ ಲಾಭ ಸಿಗುವುದಿಲ್ಲ :  
ಯಾರಾದರೂ ಕೃಷಿ ಭೂಮಿಯ ಮಾಲೀಕರಾಗಿದ್ದರೆ, ಆದರೆ ಅವರು ಸರ್ಕಾರಿ ಉದ್ಯೋಗಿಯಾಗಿದ್ದರೆ, ಮಾಜಿ ಸಂಸದ, ಎಂಎಲ್‌ಎ (MLA) , ಸಚಿವರಾಗಿದ್ದರೆ, ಅಂತಹವರು ಯೋಜನೆಯ ಲಾಭಕ್ಕೆ ಅನರ್ಹರಾಗಿರುತ್ತಾರೆ. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು (CA) ಥವಾ ಅವರ ಕುಟುಂಬದ ಸದಸ್ಯರು ಕೂಡ ಅನರ್ಹರ ಪಟ್ಟಿಯಲ್ಲಿ ಬರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಕೂಡ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ.

ಇದನ್ನೂ ಓದಿ : ಬ್ಯಾನ್ ಆಗಿರುವ 500 ರೂ. ನೋಟಿನಿಂದ 10 ಸಾವಿರ ರೂ. ಗಳಿಸಿ: ಇಲ್ಲಿದೆ ನೋಡಿ ಮಾಹಿತಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News