1000 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಹೊಸ ಸ್ಮಾರ್ಟ್‌ಫೋನ್

ಈ ಸ್ಮಾರ್ಟ್‌ಫೋನ್ ಇಂದಿನಿಂದ ಅಂದರೆ ಸೆಪ್ಟೆಂಬರ್ 1, 2022 ರಿಂದ ಮಾರಾಟಕ್ಕೆ ಲಭ್ಯವಾಗಿದೆ ಮತ್ತು ಅದರ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

Written by - Chetana Devarmani | Last Updated : Sep 1, 2022, 04:58 PM IST
  • ಕಡಿಮೆ ಬೆಲೆಗೆ ಇತ್ತೀಚಿನ ಸ್ಮಾರ್ಟ್‌ಫೋನ್ ಖರೀದಿಸಿ
  • Infinix ಬ್ರ್ಯಾಂಡ್‌ನ ಇತ್ತೀಚಿನ ಸ್ಮಾರ್ಟ್‌ಫೋನ್
  • Infinix Note 12 Pro ನಲ್ಲಿ ಭಾರಿ ರಿಯಾಯಿತಿ
1000 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಹೊಸ ಸ್ಮಾರ್ಟ್‌ಫೋನ್   title=
ಸ್ಮಾರ್ಟ್‌ಫೋನ್

Infinix Note 12 Pro India Flipkart Sale: ನೀವು ಕಡಿಮೆ ಬೆಲೆಗೆ ಇತ್ತೀಚಿನ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ನಿಮಗಾಗಿ ಅದ್ಭುತವಾದ ಆಯ್ಕೆಯನ್ನು ನಾವು ಹೊಂದಿದ್ದೇವೆ. Infinix ಬ್ರ್ಯಾಂಡ್‌ನ ಇತ್ತೀಚಿನ ಸ್ಮಾರ್ಟ್‌ಫೋನ್, Infinix Note 12 Pro ಅನ್ನು ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ನೀವು ಹೇಗೆ ಮನೆಗೆ ತೆಗೆದುಕೊಳ್ಳಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಈ ಸ್ಮಾರ್ಟ್‌ಫೋನ್ ಇಂದಿನಿಂದ ಅಂದರೆ ಸೆಪ್ಟೆಂಬರ್ 1, 2022 ರಿಂದ ಮಾರಾಟಕ್ಕೆ ಲಭ್ಯವಾಗಿದೆ ಮತ್ತು ಅದರ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

ಇದನ್ನೂ ಓದಿ: ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಬಿಡುಗಡೆ-ಬೆಲೆ, ವೈಶಿಷ್ಟ್ಯ ತಿಳಿಯಿರಿ

Infinix Note 12 Pro ನಲ್ಲಿ ಭಾರಿ ರಿಯಾಯಿತಿ :

8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ Infinix Note 12 Pro ನ ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ ರೂ 16,999 ಬೆಲೆಗೆ ಲಭ್ಯವಿದೆ. ಈ ಫೋನ್ ಖರೀದಿಸುವಾಗ ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿದರೆ, ನೀವು 1,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ ಮತ್ತು Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 775 ರೂಪಾಯಿಗಳನ್ನು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ, ನೀವು ಈ ಸ್ಮಾರ್ಟ್‌ಫೋನ್ ಅನ್ನು ರೂ 14,724 ಕ್ಕೆ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.

Infinix Note 12 Pro ಅನ್ನು 1000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಿ :

ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಹೇಗೆ ಖರೀದಿಸಬಹುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಬಗ್ಗೆ ನಾವು ನಿಮಗೆ ಹೇಳೋಣ. ನಿಮ್ಮ ಹಳೆಯ ಫೋನ್‌ಗೆ ಬದಲಿಯಾಗಿ 16,999 ರೂಗಳಲ್ಲಿ ಪಟ್ಟಿ ಮಾಡಲಾದ Infinix Note 12 Pro ಅನ್ನು ಖರೀದಿಸುವ ಮೂಲಕ ನೀವು 16,250 ರೂ.ವರೆಗೆ ಉಳಿಸಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ನಿಮಗಾಗಿ ಈ ಫೋನ್‌ನ ಬೆಲೆ ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರುತ್ತದೆ ಅಂದರೆ 749 ರೂಪಾಯಿಗಳು.

ಇದನ್ನೂ ಓದಿ: ಒಂದು ವರ್ಷದ ಕೂಲ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್! 5 ರೂ.ಗಿಂತ ಕಡಿಮೆ ಬೆಲೆಯಲ್ಲಿ ಹಲವು ಲಾಭ

Infinix Note 12 Pro ನ ವೈಶಿಷ್ಟ್ಯಗಳು :

Infinix Note 12 Pro ಗೆ 8GB RAM ಮತ್ತು 256GB ಸಂಗ್ರಹವನ್ನು ನೀಡಲಾಗುತ್ತಿದೆ. Mediatek Helio G99 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ಮಾರ್ಟ್‌ಫೋನ್‌ಗೆ 6.7-ಇಂಚಿನ Full HD + AMOLED ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು ತ್ವರಿತ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. ಕ್ಯಾಮೆರಾದ ಬಗ್ಗೆ ಮಾತನಾಡುತ್ತಾ, ಈ 4G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ ಪ್ರಾಥಮಿಕ ಸಂವೇದಕ 108MP ಆಗಿದೆ. ಈ ಸ್ಮಾರ್ಟ್‌ಫೋನ್ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News