ಅರ್ಧ ಕೆ.ಜಿ ಟೊಮೆಟೋಗೆ ಕೇವಲ ಒಂದು ರೂಪಾಯಿ..!

Amazon ನಲ್ಲಿ ದಿನಸಿ ವಸ್ತುಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. Fresh Deals @ Rs 1ರ ಅಡಿಯಲ್ಲಿ ಟೊಮ್ಯಾಟೊ ಮತ್ತು ಸಕ್ಕರೆಯನ್ನು ಪಟ್ಟಿ ಮಾಡಲಾಗಿದೆ. 

Written by - Ranjitha R K | Last Updated : Dec 23, 2021, 11:40 AM IST
  • ಅರ್ಧ ಕಿಲೋ ಟೊಮೆಟೊ ಬೆಲೆ 1 ರೂ.
  • ಒಂದು ಕೆಜಿ ಸಕ್ಕರೆ ಪ್ಯಾಕೆಟ್ ಕೇವಲ 1 ರೂಪಾಯಿಗೆ ಖರೀದಿಸಬಹುದು.
  • ಚಿಪ್ಸ್ ಮತ್ತು ತಿಂಡಿಗಳ ಮೇಲೆ 20% ರಿಯಾಯಿತಿ
ಅರ್ಧ ಕೆ.ಜಿ ಟೊಮೆಟೋಗೆ ಕೇವಲ ಒಂದು ರೂಪಾಯಿ..! title=
ಅರ್ಧ ಕಿಲೋ ಟೊಮೆಟೊ ಬೆಲೆ 1 ರೂ. (file photo)

ನವದೆಹಲಿ : ಪ್ರತಿದಿನ ಅಮೆಜಾನ್‌ನಲ್ಲಿ (Amazon) ಏನಾದರೂ ಅದ್ಬುತ ಡೀಲ್ ಗಳು ಇದ್ದೇ ಇರುತ್ತದೆ. Amazon ನಲ್ಲಿನ ಸೇಲ್  ಇತ್ತೀಚೆಗೆ ಕೊನೆಗೊಂಡಿದೆ. ಆದರೆ ಇಲ್ಲಿ Amazon Deal Of The Day ಮತ್ತು Amazon Fresh Deals ಬರುತ್ತಲೇ ಇರುತ್ತವೆ. ನೀವು ಪಡಿತರವನ್ನು ಖರೀದಿಸಲು ಬಯಸುತ್ತಿದ್ದು, ಆಫರ್ ಗಳಿಗಾಗಿ ಕಾಯುತ್ತಿದ್ದರೆ, ಇದೇ ಸುವರ್ಣಾವಕಾಶ. Amazon ನಲ್ಲಿ ದಿನಸಿ ವಸ್ತುಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. Fresh Deals @ Rs 1ರ ಅಡಿಯಲ್ಲಿ ಟೊಮ್ಯಾಟೊ ಮತ್ತು ಸಕ್ಕರೆಯನ್ನು ಪಟ್ಟಿ ಮಾಡಲಾಗಿದೆ. ಇಂದಿನ Fresh Deals ನಲ್ಲಿ ಟೊಮ್ಯಾಟೊ ಮತ್ತು ಸಕ್ಕರೆಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. 

ಕೇವಲ 1 ರೂಪಾಯಿಯಲ್ಲಿ ಅರ್ಧ ಕೆಜಿ ಟೊಮೆಟೊ ಖರೀದಿಸಿ :
ಅರ್ಧ ಕಿಲೋ ಟೊಮೆಟೊವಿನ (Tomato) ಮಾರುಕಟ್ಟೆ ಬೆಲೆ 45 ರೂ. ಆದರೆ ಇಂದು ಟೊಮೆಟೊ ಮೇಲೆ ಶೇ.97ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ, ಅರ್ಧ ಕಿಲೋ ಟೊಮೆಟೊವನ್ನು (Tomato price) ಕೇವಲ 1 ರೂಪಾಯಿಗೆ ಖರೀದಿಸಬಹುದು. ಆದರೆ, ಆಫರ್‌ನಲ್ಲಿ ನೀವು ಕೇವಲ ಅರ್ಧ ಕಿಲೋ ಟೊಮೆಟೊಗಳನ್ನು ಮಾತ್ರ ಖರೀದಿಸಲು ಸಾಧ್ಯವಾಗುತ್ತದೆ.  

Amazon Fresh Deals

ಇದನ್ನೂ ಓದಿ : ಎಚ್ಚರ..! ಚಾಲನೆ ವೇಳೆ ಮಾಡುವ ಈ ಸಣ್ಣ ತಪ್ಪಿಗೆ ಬೀಳಲಿದೆ 5 ಸಾವಿರ ರೂ.ಗಳ ದಂಡ

1 ರೂಪಾಯಿಗೆ ಖರೀದಿಸಿ ಒಂದು ಕೆಜಿ ಸಕ್ಕರೆ:
ಅಮೆಜಾನ್ ಬ್ರಾಂಡ್ (Amazon brand) ವೇದಕಾದ ಒಂದು ಕೆಜಿ ಸಕ್ಕರೆ ಪ್ಯಾಕೆಟ್ ಅನ್ನು ಕೂಡಾ ಕೇವಲ 1 ರೂಪಾಯಿಗೆ ಖರೀದಿಸಬಹುದು. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ (Sugar price) 70 ರೂ.ಯಾಗಿದೆ. ಅಂದರೆ ಇಲ್ಲಿ ಶೇ.98ರಷ್ಟು ರಿಯಾಯಿತಿ ಸಿಗುತ್ತಿದೆ. ಇಲ್ಲಿಯೂ ನಿಮಗೆ ಆಫರ್‌ನಲ್ಲಿ (Offer)ಕೇವಲ ಒಂದು ಕೆಜಿ ಸಕ್ಕರೆ ಮಾತ್ರ ಸಿಗುತ್ತದೆ.

1KG SUGAR At Rs 1

ಈ ಉತ್ಪನ್ನಗಳ ಮೇಲೂ ಇದೆ ಆಫರ್ :
10 ಕೆಜಿಯ ಆಶೀರ್ವಾದ ಹಿಟ್ಟಿನ ಬೆಲೆ 375. ಆದರೆ ಆಫರ್‌ನಲ್ಲಿ ಅದನ್ನು 349 ರೂ.ಗೆ ಖರೀದಿಸಬಹುದು. ಇದಲ್ಲದೇ ಇತರೆ ವಸ್ತುಗಳ ಮೇಲೆ ಶೇ.40ರಷ್ಟು ರಿಯಾಯಿತಿ (Discount price) ನೀಡಲಾಗುತ್ತಿದೆ. ಚಿಪ್ಸ್ ಮತ್ತು ತಿಂಡಿಗಳ ಮೇಲೆ 20% ರಿಯಾಯಿತಿ ಪಡೆಯಬಹುದು.  ನೀವು ಅರ್ಧ ಕೆಜಿ ಟೊಮ್ಯಾಟೊ, ಒಂದು ಕೆಜಿ ಸಕ್ಕರೆ ಮತ್ತು 10 ಕೆಜಿ ಹಿಟ್ಟಿನ ಪ್ಯಾಕೆಟ್ ಅನ್ನು ಖರೀದಿಸಿದರೆ, ಒಟ್ಟು 351 ರೂಪಾಯಿಗಳನ್ನು ಮಾತ್ರ  ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಈ ನಂಬರ್ ನಿಮ್ಮದಾದರೆ ಪೊಲೀಸರು ತಡೆಯುವುದಿಲ್ಲ ನಿಮ್ಮ ವಾಹನ, ಪಡೆಯುವುದು ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News