Business Idea: SBI ಜೊತೆ ಕೈಜೋಡಿಸಿ ಈ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ

SBI ATM Franchise: ಪ್ರಸ್ತುತ ನೀವು ಮಾಡುತ್ತಿರುವ ಕೆಲಸದ ಜೊತೆಗೆ ನೀವು ಹೆಚ್ಚುವರು ಹಣ ಸಂಪಾದಿಸಲು ಬಯಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಅವಕಾಶ ನೀಡುತ್ತಿದೆ. ಹೌದು, ಎಸ್ಬಿಐನಲ್ಲಿ ನೀವು ಕೇವಲ ಕೆಲ ದಾಖಲೆಗಳನ್ನು ನೀಡುವ ಮೂಲಕ ತಿಂಗಳಿಗೆ 60 ಸಾವಿರ ರೂ. ಸಂಪಾದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : May 29, 2022, 10:03 PM IST
  • ಉದ್ಯೋಗದ ಜೊತೆಗೆ ಹೆಚ್ಚುವರಿ ಹಣ ಸಂಪಾದಿಸಬೇಕೆ?
  • ಅದೂ ಕೂಡ ಯಾವುದೇ ರೀತಿಯ ಹೆಚ್ಚುವರಿ ಪರಿಶ್ರಮ ಇಲ್ಲದೆ
  • ಎಸ್ಬಿಐ ನಿಮಗೆ ಈ ಅವಕಾಶವನ್ನು ಕಲ್ಪಿಸುತ್ತಿದೆ
Business Idea: SBI ಜೊತೆ ಕೈಜೋಡಿಸಿ ಈ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ title=
Start New SBI Franchise

Earn Money Idea: ಒಂದು ವೇಳೆ ನೀವೂ ಕೂಡ ನಿಮ್ಮ ಉದ್ಯೋಗದ ಜೊತೆಗೆ ಯಾವುದೇ ರೀತಿಯ ಕಠಿಣ ಪರಿಶ್ರಮವಿಲ್ಲದೆಯೇ ಹಣ ಸಂಪಾದಿಸಲು ಬಯಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಇಲ್ಲಿ ನಾವು ನಿಮಗೆ ಬಿಸನೆಸ್ ನ ಹೊಸ ಪರಿಕಲ್ಪನೆಯೊಂದರ ಮಾಹಿತಿಯನ್ನು ನೀಡುತ್ತಿದ್ದೇವೆ. ಇದರಿಂದ ನಿಮಗೆ ಜಬರದಸ್ತ್ ಲಾಭ ಸಿಗಲಿದೆ. ಈ ಬಿಸನೆಸ್ ಪರಿಕಲ್ಪನೆಯ ವಿಶೇಷತೆ ಎಂದರೆ ಇದು ಸಂಪೂರ್ಣ ಸುರಕ್ಷಿತ ವಿಧಾನವಾಗಿದೆ. ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಸುವರ್ಣಾವಕಾಶ ನೀಡುತ್ತಿದೆ. 

ಎಸ್ಬಿಐ ಏಟಿಎಮ್ ಫ್ರಾಂಚೈಸಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಟಿಎಮ್ ಫ್ರಾಂಚೈಸಿ ಪಡೆಯುವ ಮೂಲಕ ನೀವು ಉದ್ಯೋಗದ ಜೊತೆಗೆ ಹೆಚ್ಚುವರಿ ಆದಾಯ ಗಳಿಸಬಹುದು. ಯಾವುದೇ ಒಂದು ಬ್ಯಾಂಕ್ ನ ಏಟಿಎಮ್ ಆ ಬ್ಯಾಂಕ್ ಸ್ಥಾಪಿಸುವುದಿಲ್ಲ ಮತ್ತು ಅದಕ್ಕಾಗಿಯೇ ಒಂದು ಕಂಪನಿ ಇರುತ್ತದೆ ಎಂಬುದು ಮೊದಲು ನಿಮಗೆ ತಿಳಿದಿರಲಿ. ಈ ಕಂಪನಿ ಫ್ರಾಂಚೈಸಿ ನೀಡುವ ಮೂಲಕ ಏಟಿಎಮ್ ಸ್ಥಾಪಿಸುತ್ತದೆ. ಬ್ಯಾಂಕುಗಳು ಇದಕ್ಕಾಗಿ ಕಾಂಟ್ರ್ಯಾಕ್ಟ್ ನೀಡುತ್ತವೆ ಮತ್ತು ವಿವಿಧ ಪ್ರದೇಶಗಳಲ್ಲಿ ಏಟಿಎಮ್ ಸ್ಥಾಪಿಸಲಾಗುತ್ತದೆ. ಇದರ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ

ಎಸ್ಬಿಐ ಏಟಿಎಮ್ ಫ್ರಾಂಚೈಸಿ ಹೇಗೆ ಪಡೆಯಬೇಕು?
1. ಇದಕ್ಕಾಗಿ ಮೊದಲು ನೀವು 50-80 ಚದರ ಅಡಿ ಜಾಗವನ್ನು ಹೊಂದಿರಬೇಕು.
2. ಇದಲ್ಲದೆ, ಇತರ ಎಟಿಎಂಗಳಿಂದ ಅದರ ಅಂತರವು ಕನಿಷ್ಠ 100 ಮೀಟರ್ ಆಗಿರಬೇಕು.
3. ಎಟಿಎಂ ಸ್ಥಳವು ನೆಲ ಮಹಡಿಯಲ್ಲಿ ಮತ್ತು ಉತ್ತಮ ಗೋಚರತೆ ಹೊಂದಿರಬೇಕು.
4. ಸ್ಥಳದಲ್ಲಿ 24 ಗಂಟೆಗಳ ವಿದ್ಯುತ್ ಸರಬರಾಜು ಇರಬೇಕು.
5. 1 kW ವಿದ್ಯುತ್ ಸಂಪರ್ಕವನ್ನು ಹೊಂದಿರುವುದು ಸಹ ಕಡ್ಡಾಯವಾಗಿದೆ.
6. ಇದು ದಿನಕ್ಕೆ ಸುಮಾರು 300 ವಹಿವಾಟುಗಳ ಸಾಮರ್ಥ್ಯವನ್ನು ಹೊಂದಿರಬೇಕು.
6. ಎಟಿಎಂ ಜಾಗಕ್ಕೆ ಕಾಂಕ್ರೀಟ್ ಛಾವಣಿ ಇರಬೇಕು.
7. V-SAT ಅನ್ನು ಸ್ಥಾಪಿಸಲು ಸಮಾಜ ಅಥವಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅಗತ್ಯ ದಾಖಲೆಗಳು ಇಂತಿವೆ
1. ID ಪುರಾವೆ - ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್
2. ವಿಳಾಸ ಪುರಾವೆ - ರೇಷನ್ ಕಾರ್ಡ್, ವಿದ್ಯುತ್ ಬಿಲ್
3. ಬ್ಯಾಂಕ್ ಖಾತೆ ಮತ್ತು ಪಾಸ್‌ಬುಕ್
4. ಫೋಟೋಗ್ರಾಫ್, ಇ-ಮೇಲ್ ಐಡಿ, ಫೋನ್ ಸಂಖ್ಯೆ.
5. ಇತರ ದಾಖಲೆಗಳು
6. GST ಸಂಖ್ಯೆ
7. ಹಣಕಾಸಿನ ದಾಖಲೆಗಳು

ಹೇಗೆ ಅರ್ಜಿ ಸಲ್ಲಿಸಬೇಕು?
ಒಂದು ವೇಳೆ ನೀವೂ ಕೂಡ ಎಸ್‌ಬಿಐ ಎಟಿಎಂ ಫ್ರ್ಯಾಂಚೈಸ್ ಅನ್ನು ತೆಗೆದುಕೊಳ್ಳಲು ಯೋಜನೆಯನ್ನು ರೂಪಿಸುತ್ತಿದ್ದರೆ, ಫ್ರ್ಯಾಂಚೈಸ್ ಅನ್ನು ಒದಗಿಸುವ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂಗಳು ಭಾರತದಲ್ಲಿ ಎಟಿಎಂಗಳನ್ನು ಸ್ಥಾಪಿಸುವ ಒಪ್ಪಂದವನ್ನು ಹೊಂದಿವೆ.

ಇದನ್ನೂ ಓದಿ-Driving License ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಸರ್ಕಾರದ ನೂತನ ಮಾರ್ಗಸೂಚಿಗಳು ಇಲ್ಲಿವೆ

ಫ್ರಾಂಚೈಸಿ ಪಡೆಯಲು ಅಧಿಕೃತ ವೆಬ್ಸೈಟ್ ಗಳು ಈ ಕೆಳಗಿನಂತಿವೆ
>> Tata Indicash – www.indicash.co.in
>> Muthoot ATM – www.muthootatm.com/suggest-atm.html
>> India One ATM – india1atm.in/rent-your-space

ಇದನ್ನೂ ಓದಿ -Aadhaar Card: ಆಧಾರ್ ಕಾರ್ಡ್ ಧಾರಕರಿಗೊಂದು ಮಹತ್ವದ ಮಾಹಿತಿ, ಹೊಸ ಅಡ್ವೈಸರಿ ಹಿಂಪಡೆದ ಕೇಂದ್ರ ಸರ್ಕಾರ, ಕಾರಣ ಇಲ್ಲಿದೆ

ಎಷ್ಟು ಆದಾಯ ಸಿಗುವ ಸಾಧ್ಯತೆ ಇದೆ ?
ಎಸ್ಬಿಐ ಏಟಿಎಮ್ ಫ್ರಾಂಚೈಸಿ ಅಡಿ ನೀವು ಪ್ರತಿ ನಗದು ವಹಿವಾಟಿನ ಮೇಲೆ ರೂ 8 ಮತ್ತು ನಗದುರಹಿತ ವಹಿವಾಟಿನ ಮೇಲೆ ರೂ 2 ಪಡೆಯಬಹುದು. ಅದರಂತೆ, ಇದರಲ್ಲಿ ಹೂಡಿಕೆಯ ವಾರ್ಷಿಕ ಲಾಭವು ಶೇ. 33-50 ರಷ್ಟು ಇರುತ್ತದೆ . ಉದಾಹರಣೆಗೆ, ನಿಮ್ಮ ಎಟಿಎಂನಿಂದ ನೀವು ದಿನಕ್ಕೆ 250 ವಹಿವಾಟುಗಳನ್ನು ಹೊಂದಿದ್ದರೆ, ಅದರಲ್ಲಿ ಶೇ. 65 ರಷ್ಟು ನಗದು ಮತ್ತು ಶೇ. 35 ರಷ್ಟು   ನಗದು ರಹಿತ ವಹಿವಾಟುಗಳಾಗಿದ್ದರೆ, ನಿಮ್ಮ ಮಾಸಿಕ ಆದಾಯವು 45 ಸಾವಿರ ರೂಪಾಯಿಗಳ ಹತ್ತಿರ ಇರಲಿದೆ. ಒಂದು ವೇಳೆ 500 ವಹಿವಾಟು ನಡೆದರೆ 88-90 ಸಾವಿರ ಕಮಿಷನ್ ಸಿಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News