Business Concept: ಸ್ವಂತ ವ್ಯಾಪಾರ ಆರಂಭಿಸಲು ಈ ಯೋಜನೆಯಲ್ಲಿ 10 ಲಕ್ಷ ರೂ. ಸಾಲ ನೀಡುತ್ತೇ ಸರ್ಕಾರ!

Business Tips: ನೀವೂ ಕೂಡ ಒಂದು ವೇಳೆ ನಿಮ್ಮ ನೌಕರಿಯಿಂದ ಬೇಸತ್ತು ಹೋಗಿದ್ದು, ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದು ಮತ್ತು ನಿಮ್ಮ ಬಳಿ ಅದಕ್ಕಾಗಿ ಹಣ ಇಲ್ಲ ಎಂದಾದರೆ, ಚಿಂತಿಸಬೇಕಾಗಿಲ್ಲ. ಸರ್ಕಾರದ ಒಂದು ಯೋಜನೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲಿದೆ, ಬನ್ನಿ ಆ ಯೋಜನೆ ಯಾವುದು ತಿಳಿದುಕೊಳ್ಳೋಣ (Business News In Kannada)  

Written by - Nitin Tabib | Last Updated : Mar 17, 2024, 10:31 PM IST
  • ನೀವು ಈ ಸಾಲಕ್ಕೆ ಅರ್ಜಿ ಸಲ್ಲಿಸಲು (Mudra loan eligibility) ಬಯಸುತ್ತಿದ್ದರೆ,
  • ನೀವು ಮೊದಲನೆಯದಾಗಿ ಭಾರತದ ಪ್ರಜೆಯಾಗಿರಬೇಕು.
  • ಇದಲ್ಲದೆ, ನೀವು ಯಾವುದೇ ಬ್ಯಾಂಕ್ ಡೀಫಾಲ್ಟ್ ಇತಿಹಾಸವನ್ನು ಹೊಂದಿರಬಾರದು.
Business Concept: ಸ್ವಂತ ವ್ಯಾಪಾರ ಆರಂಭಿಸಲು ಈ ಯೋಜನೆಯಲ್ಲಿ 10 ಲಕ್ಷ ರೂ. ಸಾಲ ನೀಡುತ್ತೇ ಸರ್ಕಾರ! title=

Business Tips: ನೀವೂ ಕೂಡ ಒಂದು ವೇಳೆ ನಿಮ್ಮ ನೌಕರಿಯಿಂದ ಬೇಸತ್ತು ಹೋಗಿದ್ದು, ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದು ಮತ್ತು ನಿಮ್ಮ ಬಳಿ ಅದಕ್ಕಾಗಿ ಹಣ ಇಲ್ಲ ಎಂದಾದರೆ, ಚಿಂತಿಸಬೇಕಾಗಿಲ್ಲ. ಸರ್ಕಾರದ ಒಂದು ಯೋಜನೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲಿದೆ, ಬನ್ನಿ ಆ ಯೋಜನೆ ಯಾವುದು ತಿಳಿದುಕೊಳ್ಳೋಣ (Business News In Kannada)

ಯೋಜನೆಯನ್ನು 2015 ರಲ್ಲಿ ಆರಂಭಿಸಲಾಗಿದೆ: ನಿಮ್ಮ ಸಹಾಯಕ್ಕಾಗಿ ಕೇಂದ್ರ ಸರ್ಕಾರ 2015 ರಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಆರಂಭಿಸಿದ್ದು, ಇದರಲ್ಲಿ ಸರ್ಕಾರದ ವತಿಯಿಂದ ನಿಮಗೆ 50 ಸಾವಿರ ರೂ.ಗಳಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅನ್ನು ಏಪ್ರಿಲ್ 08, 2015 ರಂದು ಆರಂಭಿಸಲಾಗಿದೆ.(Mudra loan details)

ಸರ್ಕಾರ ಅಡಮಾನ ರಹಿತ ಸಾಲ ನೀಡುತ್ತದೆ: ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಮೂಲಕ ಸಾಲವನ್ನು ಪಡೆಯಲು, ನೀವು ಯಾವುದೇ ರೀತಿಯ ಭದ್ರತೆಯನ್ನು ನೀಡಬೇಕಾಗಿಲ್ಲ, ಈ ಯೋಜನೆಯಲ್ಲಿ ನೀವು ಸರ್ಕಾರದಿಂದ ಅಡಮಾನ ರಹಿತ ಸಾಲವನ್ನು ಪಡೆಯುತ್ತೀರಿ. (Mudra loan online apply)

50 ಸಾವಿರದಿಂದ 10 ಲಕ್ಷದವರೆಗೆ ಸಾಲ ಸಿಗುತ್ತದೆ:ಯೋಜನೆಯ ಪ್ರಯೋಜನವೆಂದರೆ ಕಾರ್ಪೊರೇಟ್ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ಇದರಲ್ಲಿ ಸಾಲವನ್ನು ನೀಡಲಾಗುತ್ತದೆ. ಇದರಲ್ಲಿ ನಿಮಗೆ 50 ಸಾವಿರದಿಂದ 10 ಲಕ್ಷದವರೆಗೆ ಹಣಕಾಸು ಸಹಾಯ ಸಿಗುತ್ತದೆ. (business tips for starting own business )

ಒಟ್ಟು ಮೂರು ವಿಭಾಗಗಳಲ್ಲಿ ಸಾಲ ನೀಡಲಾಗುತ್ತದೆ: ಶಿಶು ಸಾಲ- ಈ ರೀತಿಯ ಸಾಲದಲ್ಲಿ ನಿಮಗೆ ರೂ 50 ಸಾವಿರದವರೆಗೆ ಸಹಾಯ ನೀಡಲಾಗುತ್ತದೆ. ಕಿಶೋರ್ ಸಾಲ- ಈ ರೀತಿಯ ಸಾಲದಲ್ಲಿ ನಿಮಗೆ ರೂ 5 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ತರುಣ್ ಸಾಲ- ಇದರಲ್ಲಿ 10 ಲಕ್ಷ ರೂ.ವರೆಗಿನ ಮೊತ್ತವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. (this scheme gives loan upto ten lakh )

ಈ ಸಾಲಕ್ಕೆ ಯಾರು ಅರ್ಜಿ ಸಲ್ಲಿಸಬಹುದು: ನೀವು ಈ ಸಾಲಕ್ಕೆ ಅರ್ಜಿ ಸಲ್ಲಿಸಲು (Mudra loan eligibility) ಬಯಸುತ್ತಿದ್ದರೆ,  ನೀವು ಮೊದಲನೆಯದಾಗಿ  ಭಾರತದ ಪ್ರಜೆಯಾಗಿರಬೇಕು. ಇದಲ್ಲದೆ, ನೀವು ಯಾವುದೇ ಬ್ಯಾಂಕ್ ಡೀಫಾಲ್ಟ್ ಇತಿಹಾಸವನ್ನು ಹೊಂದಿರಬಾರದು. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇದರೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

ಇದನ್ನೂ ಓದಿ-Lok Sabha Election 2024: ಇಲೇಕ್ಟೊರಲ್ ಬಾಂಡ್ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಪ್ರಯೋಜನಗಳು: ಈ ಯೋಜನೆಯ ಮೂಲಕ ನೀವು 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದು. ಈ ಸಾಲಕ್ಕೆ ಯಾವುದೇ ರೀತಿಯ ಪ್ದ್ರೋಸೆಸಿಂಗ್ ಶುಲ್ಕವಿಲ್ಲ. ಈ ಸಾಲದ ಮರುಪಾವತಿಯ ಅವಧಿಯು 12 ತಿಂಗಳಿಂದ 5 ವರ್ಷಗಳವರೆಗೆ ಇರುತ್ತದೆ, ನೀವು 5 ವರ್ಷಗಳೊಳಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ನೀವು ಅದರ ಅವಧಿಯನ್ನು ಸುಲಭವಾಗಿ ವಿಸ್ತರಿಸಿಕೊಳ್ಳಬಹುದು. ಈ ಸಾಲದ ಮೇಲೆ ಯಾವುದೇ ಬಡ್ಡಿಯನ್ನು (Pradhan Mantri Mudra Yojana interest rate) ವಿಧಿಸಲಾಗುವುದಿಲ್ಲ.

ಯಾವ ದಾಖಲೆಗಳು ಬೇಕಾಗುತ್ತವೆ : ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಶಾಶ್ವತ ಮತ್ತು ವ್ಯವಹಾರ ವಿಳಾಸ ಪುರಾವೆ, ಆದಾಯ ತೆರಿಗೆ ರಿಟರ್ನ್ ಮತ್ತು ಸ್ವಯಂ ತೆರಿಗೆ ರಿಟರ್ನ್, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (PM Loan scheme online apply).

ಇದನ್ನೂ ಓದಿ-Free Ration: ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ, ಮುಂದಿನ ಐದು ವರ್ಷಗಳವರೆಗೆ ಸರ್ಕಾರದ ಗ್ಯಾರಂಟಿ!

ಈ ರೀತಿ ಅಪ್ಲೈ ಮಾಡಿ: ನೀವು ಮುದ್ರಾ ಯೋಜನೆಯ ಅಧಿಕೃತ ವೆಬ್‌ಸೈಟ್ mudra.org.in ಗೆ ಭೇಟಿ ನೀಡುವ ಮೂಲಕ ಈ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿಧಾನ ಕೂಡ ತಿಳಿದುಕೊಳ್ಳಬಹುದು (Pradhan Mantri Mudra Yojana application form). 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News